ಸಲಾರ್‌ ಮುಹೂರ್ತದಲ್ಲಿ ಪ್ರಭಾಸ್‌, ಯಶ್‌;ಹೈದರಾಬಾದ್‌ನಲ್ಲಿ ಸಲಾರ್‌ ಶುರು!

Kannadaprabha News   | Asianet News
Published : Jan 16, 2021, 10:20 AM ISTUpdated : Jan 16, 2021, 10:23 AM IST
ಸಲಾರ್‌ ಮುಹೂರ್ತದಲ್ಲಿ ಪ್ರಭಾಸ್‌, ಯಶ್‌;ಹೈದರಾಬಾದ್‌ನಲ್ಲಿ ಸಲಾರ್‌ ಶುರು!

ಸಾರಾಂಶ

ಪ್ರಶಾಂತ್‌ ನೀಲ್‌ ನಿರ್ದೇಶನ, ವಿಜಯ್‌ ಕಿರಗಂದೂರು ನಿರ್ಮಾಣದ, ಪ್ರಭಾಸ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಲಾರ್‌ನ ಮುಹೂರ್ತ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ರಾಕಿಂಗ್‌ ಸ್ಟಾರ್‌ ಯಶ್‌ ಈ ಖುಷಿಗೆ ಸಾಕ್ಷಿಯಾಗಿ ತಂಡಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.

ಮುಹೂರ್ತದ ಚಿತ್ರಗಳು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವೈರಲ್‌ ಆದವು. ಅದರಲ್ಲೂ ಯಶ್‌ ಮತ್ತು ಪ್ರಭಾಸ್‌ ಒಂದೇ ಫ್ರೇಮ್‌ನಲ್ಲಿ ಸೆರೆಯಾಗಿರುವ ಚಿತ್ರಗಳನ್ನು ಜನ ಬಹುವಾಗಿ ಮೆಚ್ಚಿಕೊಂಡರು. ಈ ಸಂದರ್ಭ ಮಾತನಾಡಿದ ಪ್ರಭಾಸ್‌, ‘ಈ ಸಿನಿಮಾದಲ್ಲಿ ನನ್ನ ಲುಕ್ಕೇ ವಿಭಿನ್ನವಾಗಿದೆ. ನನಗೂ ಸಖತ್‌ ಥ್ರಿಲ್ಲಿಂಗ್‌ ಅನಿಸಿದೆ. ಈ ಲುಕ್‌ನಲ್ಲಿ ಫ್ಯಾನ್ಸ್‌ ಎದುರು ಬರಲು ಖುಷಿಯಾಗುತ್ತೆ. ಸದ್ಯ ಶೂಟಿಂಗ್‌ ಶುರುವಾಗೋದನ್ನೇ ಎದುರು ನೋಡುತ್ತಿದ್ದೇನೆ’ ಎಂದರು.

"

ನಿರ್ದೇಶಕ ಪ್ರಶಾಂತ್‌ ನೀಲ್‌ ತಮ್ಮ ಹೊಸ ಸಾಹಸಕ್ಕೆ ಸಾಥ್‌ ನೀಡುತ್ತಿರುವ ಪ್ರಭಾಸ್‌ಗೆ ಥ್ಯಾಂಕ್ಸ್‌ ಹೇಳುವ ಜೊತೆಗೆ ರಾಕಿಂಗ್‌ ಸ್ಟಾರ್‌ ಯಶ್‌ರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ, ‘ನಿಮ್ಮನ್ನು ಖಂಡಿತಾ ನಿರಾಸೆ ಮಾಡೋದಿಲ್ಲ’ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

ಪ್ರಭಾಸ್ ಜತೆ ಯಶ್.. ನೀಲ್ ಸಹ ಇದ್ದಾರೆ? ಏನ್ ಹೊಸ ಪ್ರಾಜೆಕ್ಟು? 

ಡಿಸಿಎಂ ಅಶ್ವತ್ಥನಾರಾಯಣ್‌ ಶುಭ ಹಾರೈಕೆ

ಉಪ ಮುಖ್ಯಮಂತ್ರಿ ಡಾ ಅಶ್ವತ್ಥನಾರಾಯಣ ಅವರು ಸಲಾರ್‌ ಮುಹೂರ್ತದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿ, ‘ಕನ್ನಡದಲ್ಲಿ ಹೊಂಬಾಳೆ ಫಿಲ್ಮ್‌$್ಸಕೆಜಿಎಫ್‌ ಸಿನಿಮಾ ಮೂಲಕ ದಾಖಲೆ ಬರೆದಿದೆ. ಪ್ರಶಾಂತ್‌ ನೀಲ್‌ ಈ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೀಗ ಸಲಾರ್‌ ಮೂಲಕ ಗಡಿ ಭಾಷೆಯನ್ನು ಮೀರಿ ಚಿತ್ರ ಮಾಡುತ್ತಿರುವುದು ಸಂತಸ ತಂದಿದೆ. ಪ್ರಭಾಸ್‌ ಕನ್ನಡಿಗರಿಗೆ ಇನ್ನಷ್ಟುಹತ್ತಿರವಾಗುತ್ತಿದ್ದಾರೆ’ ಎಂದರು.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?