ಗರ್ಲ್‌ಫ್ರೆಂಡ್ ಜೊತೆ ಪತಿಯ ತಿರುಪತಿ ಭೇಟಿಗೆ ಪ್ರತಿಕ್ರಿಯಿಸಿದ ಜಯಂ ರವಿ ಪತ್ನಿ ಹೇಳಿದ್ದೇನು?

Published : Aug 27, 2025, 10:42 AM IST
Jayam Ravi and Girlfriend Kenisha Francis Visit Tirupati Temple

ಸಾರಾಂಶ

ತಮಿಳು ನಟ ಜಯಂ ರವಿ ಅವರು ಪತ್ನಿ ಆರತಿಯಿಂದ ದೂರವಾಗಿದ್ದು, ಗೆಳತಿ ಕೆನೀಶಾ ಫ್ರಾನ್ಸಿಸ್ ಜೊತೆ ತಿರುಪತಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ನಂತರ ಪತ್ನಿ ಆರತಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಇಬ್ಬರೂ ಈ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಚೆನ್ನೈ: ತಮಿಳಿನ ಖ್ಯಾತ ನಟ ರವಿ ಮೋಹನ್ ಅಲಿಯಾಸ್ ಜಯಂ ರವಿ ಅವರು ದಾಂಪತ್ಯ ಕಲಹ ಮತ್ತೆ ಸುದ್ದಿಯಲ್ಲಿದೆ. ಪತ್ನಿ ಆರತಿಯಿಂದ ದೂರವಾಗಿರುವ ಜಯಂ ರವಿ ವಿಚ್ಛೇದನ ಪಡೆಯದೇ ಇದ್ದರೂ ಈಗ ತಮ್ಮ ಗೆಳತಿ ಗಾಯಕಿ ಕೆನೀಶಾ ಫ್ರಾನ್ಸಿಸ್ ಅವರ ಜೊತೆ ತಿರುಪತಿ ವೆಂಕಟರಮಣನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಆದರೆ ಇವರ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಅವರ ಪತ್ನಿ ಅರತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಗೆಳತಿ ಕೆನೀಶಾ ಜೊತೆ ಜಯಂ ರವಿ ತಿರುಪತಿ ಭೇಟಿ

ಜಯಂ ರವಿ ಅವರು ಮಂಗಳವಾರ ತಮ್ಮದೇ ಆದ ಸ್ವಂತ ಸ್ಟುಡಿಯೋವನ್ನು ಆರಂಭಿಸಿದಾರೆ. ಚೆನ್ನೈನ ಟ್ರೆಡ್ ಸೆಂಟರ್‌ನಲ್ಲಿ ಅವರು ರವಿ ಮೋಹನ್ ಹೆಸರಿನ ಸ್ಟುಡಿಯೋವನ್ನು ತೆರೆದಿದ್ದಾರೆ. ಈ ಸ್ಟುಡಿಯೋದ ಉದ್ಘಾಟನೆಗೂ ಮೊದಲು ಸೋಮವಾರ ಅವರು ತಮ್ಮ ಗೆಳತಿ ಹಾಗೂ ಸ್ಪಿರಿಚುವಲ್ ಹೀಲರ್ ಆಗಿರುವ ಕೆನೀಶಾ ಫ್ರಾನ್ಸಿಸ್‌ ಅವರ ಜೊತೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ದರು. ಇವರಿಬ್ಬರು ಬಾಲಾಜಿಯ ಸನ್ನಿಧಿಗೆ ಭೇಟಿ ನೀಡಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಆರತಿ ರವಿ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟೊಂದನ್ನು ಮಾಡಿದ್ದು ಸಂಚಲನ ಸೃಷ್ಟಿಸಿದೆ. ಅವರು ತಮ್ಮ ಪತಿಗೆ ಈ ಪೋಸ್ಟ್ ಮೂಲಕ ಸಂದೇಶ ನೀಡಲು ಬಯಸಿದ್ದಾರೆ ಎಂದು ಅವರ ಅಭಿಮಾನಿಗಳು ಊಹಿಸಿದ್ದಾರೆ.

ಪತ್ನಿ ಆರತಿಯಿಂದ ಇನ್ಸ್ಟಾದಲ್ಲಿ ಪೋಸ್ಟ್‌:

ಸೋಮವಾರ ಸಂಜೆ ರವಿ ಮೋಹನ್ ಹಾಗೂ ಕಿನೀಶಾ ಅವರು ತಿರುಪತಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್ ನೀಡಿದ್ದಾರೆ. ಇದೇ ಸಮಯದಲ್ಲಿ ಆರತಿ ರವಿಯವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟೊಂದನ್ನು ಮಾಡಿದ್ದಾರೆ. ಆ ಪೋಸ್ಟ್‌ನಲ್ಲಿ ಅವರು ನೀವು ದೇವರಿಗೆ ಮೋಸ ಮಾಡಲಾಗದು. ನೀವು ಇತರರಿಗೆ ಮೋಸ ಮಾಡಬಹುದು. ನೀವು ನಿಮಗೂ ಮೋಸ ಮಾಡಿಕೊಳ್ಳಬಹುದು. ಆದರೆ ನೀವು ದೇವರಿಗೆ ಮೋಸ ಮಾಡಲಾಗದು ಎಂದು ಆರತಿಯವರು ಶೇರ್ ಮಾಡಿದ ಪೋಸ್ಟ್‌ನಲ್ಲಿದೆ.

ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ರವಿ ಮೋಹನ್:

ಈ ವರ್ಷದ ಮೇ 21ರಂದು ರವಿ ಮೋಹನ್ ಹಾಗೂ ಆರತಿ ರವಿ ಪ್ರತ್ಯೇಕವಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಟ ಜಯಂ ರವಿ ಆರತಿಯಿಂದ ವಿಚ್ಛೇದನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದರೆ, ಪತ್ನಿ ಆರತಿಯವರು ತಿಂಗಳಿಗೆ 40 ಲಕ್ಷ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಮೇ 21ರಂದು ನಡೆದ ಕೋರ್ಟ್ ವಿಚಾರಣೆ ವೇಳೆ ಒಟ್ಟಿಗೆ ಜೀವಿಸುವುದಕ್ಕಾಗಿ ಪತ್ನಿ ಆರತಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸುವಂತೆ ರವಿ ನ್ಯಾಯಾಲಯವನ್ನು ಒತ್ತಾಯಿಸಿದರು. ಹೀಗಾಗಿ ಇಬ್ಬರು ತಮ್ಮ ಅರ್ಜಿಗಳನ್ನು ಮರು ಪರಿಶೀಲಿಸುವಂತೆ ಸಲಹೆ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.

ಕಳೆದ ವರ್ಷ ನಟ ಜಯಂ ರವಿ ಅವರು ತಾನು ತ್ನಿ ಆರತಿಯಿಂದ ವಿಚ್ಛೇದನ ಪಡೆಯುವುದಾಗಿ ಘೋಷಿಸಿ ಸಂಚಲನ ಸೃಷ್ಟಿಸಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ಆರತಿ ರವಿಯವರು ತನ್ನ ಒಪ್ಪಿಗೆಯಿಲ್ಲದೆ ಏಕಮುಖವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ವಿಚ್ಛೇದನ ಘೋಷಿಸಿದ ನಂತರ ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿಲ್ಲ ಎಂದು ರವಿ ಮೋಹನ್ ಅವರು ಹೇಳಿದರು. ಬಹಳಷ್ಟು ಚಿಂತನೆ ಮತ್ತು ಚರ್ಚೆಗಳ ನಂತರ, ಆರತಿ ಜೊತೆಗಿನ ವಿವಾಹವನ್ನು ಮುರಿದುಕೊಳ್ಳಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ಆತುರದಿಂದ ತೆಗೆದುಕೊಳ್ಳಲಾಗಿಲ್ಲ ಮತ್ತು ಇದು ವೈಯಕ್ತಿಕ ಕಾರಣಗಳಿಂದ ಬಂದಿದೆ. ಇದರಲ್ಲಿ ಇಬ್ಬರ ಹಿತಾಸಕ್ತಿಯೂ ಇದೆ ಎಂದು ನಾನು ನಂಬುತ್ತೇನೆ ಎಂದು ಜಯಂ ರವಿ ಅವರು ಬರೆದುಕೊಂಡಿದ್ದರು.

ಡಿವೋರ್ಸ್ ಘೋಷಣೆಯ ನಂತರವೇ ಜಯಂ ರವಿ ಅವರು ತಮ್ಮ ಹೆಸರನ್ನು ರವಿ ಮೋಹನ್ ಎಂದು ಬದಲಿಸಿಕೊಂಡಿದ್ದರು. ರವಿ ಮೋಹನ್ ಅವರು ತಮಿಳಿನ ಖ್ಯಾತ ಸಿನಿಮಾ ನಿರ್ಮಾಪಕರಾದ ಎ ಮೋಹನ್ ಅವರ ಪುತ್ರರಾಗಿದ್ದಾರೆ. ಜಯಂ ರವಿ ಅವರು ಜಯಂ, ದಾಸ್, ಮಳೈ, ಬೊಮ್ಮರಿಲು, ಪೆರ್ನಮೈ, ರೋಮಿಯೋ ಜೂಲಿಯೆಟ್, ಭೂಮಿ, ಸೈರನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇವರ ಪತ್ನಿ ಆರತಿ ಅವರು ಟೆಲಿವಿಷನ್ ಪ್ರೊಡ್ಯುಸರ್‌ ಅವರು ಸುಜಾತ ವಿಜಯಕುಮಾರ್ ಅವರ ಪುತ್ರಿಯಾಗಿದ್ದಾರೆ. ರವಿ ಮೋಹನ್ ಹಾಗೂ ಆರತಿ ದಂತೊಗೆ ಆರವ್ ಹಾಗೂ ಆಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?