ಬಾರ್ಬಿ ಹಾಡಿಗೆ ನೀರೊಳಗೆಯೇ ಮಸ್ತ್ ಡಾನ್ಸ್ ಮಾಡಿದ ಯುವತಿ: ನೆಟ್ಟಿಗರಿಂದ ಭಾರಿ ಮೆಚ್ಚುಗೆ

Published : Jul 25, 2023, 04:59 PM IST
ಬಾರ್ಬಿ ಹಾಡಿಗೆ ನೀರೊಳಗೆಯೇ ಮಸ್ತ್ ಡಾನ್ಸ್ ಮಾಡಿದ ಯುವತಿ: ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಸಾರಾಂಶ

ಬಾರ್ಬಿ ವಿಶ್ವದಾದ್ಯಂತ ಸದ್ದ ಮಾಡುತ್ತಿದೆ. ಬಾರ್ಬಿ ಹಾಡಿಗೆ ಯುವತಿಯೊಬ್ಬಳು ಮಾಡಿದ ಡಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀರೊಳಗೆ ಮಸ್ತ್ ಡಾನ್ಸ್ ಮಾಡಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ. 

ಬಾರ್ಬಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಬಾರ್ಬಿ ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜುಲೈ 21ರಂದು ಬಾರ್ಬಿ ಸಿನಿಮಾ ರಿಲೀಸ್ ಆಗಿದೆ. ಬಾರ್ಬಿ ಸಿನಿಮಾಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬಾರ್ಬಿಯ ಹಾಡುಗಳು ಸಹ ಪ್ರೇಕ್ಷಕರ ಮನಗೆದ್ದಿವೆ. ಒಂದು ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿಗೆ ಅನೇಕರು ಡಾನ್ಸ್ ಮಾಡುತ್ತಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. 

ಯುವತಿಯೊಬ್ಬಳು ನೀರಿನೊಳಗೆ ಡಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ನೀರೊಳಗೆ ಡಾನ್ಸ್ ವಿಡಿಯೋ ನೋಡಿ ಫ್ಯಾನ್ಸ್ ಅಚ್ಚರಿ ಪಟ್ಟಿದ್ದಾರೆ. ಅಂದಹಾಗೆ ಈ ವಿಡಿಯೋವನ್ನು ಕ್ರಿಸ್ಟಿನಾ ಮಕುಶೆಂಕೊ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಡಾನ್ಸ್ ದಿ ನೈಟ್ ಹಾಡಿಗೆ ಮಸ್ತ ಡಾನ್ಸ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿ, 'ಅಕ್ವಾ ಬಾರ್ಬಿ' ಎಂದು ಹೇಳಿದ್ದಾರೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿ ಇದನ್ನು ಸಿನಿಮಾದಲ್ಲಿ ಯಾಕೆ ಸೇರಿಸಿಲ್ಲ ಎಂದು ಹೇಳುತ್ತಿದ್ದಾರೆ. 

Oppenheimer: ಸೆಕ್ಸ್ ವೇಳೆ ಭಗವದ್ಗೀತೆ ಓದುವ ದೃಶ್ಯ, ವಿವಾದದಲ್ಲಿ ಕ್ರಿಸ್ಟೋಫರ್ ನೋಲನ್ ಸಿನಿಮಾ

ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಶೇರ್ ಮಾಡಿರುವ ವಿಡಿಯೋಗೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ. ಇದು ಬಾರ್ಬಿಯ ಮತ್ಸ್ಯಕನ್ಯೆಯ ಅವತಾರ ಎಂದು ಹೇಳುತ್ತಿದ್ದಾರೆ. ಎಂಥ ಪ್ರತಿಭೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಅನೇಕರು ದೃಶ್ಯ ಸಿನಿಮಾದಲ್ಲೂ ಇರಬೇಕಿತ್ತು ಎಂದು ಹೇಳುತ್ತಿದ್ದಾರೆ.

ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಕೊಂಡು ಬಾರ್ಬಿಡಾಲ್ ಆಗ್ಬಹುದು..! ಖರ್ಚು ಕೇಳಿದ್ರೆ ಮೂರ್ಛೆ ಹೋಗ್ತೀರಾ

‘ಬಾರ್ಬಿ’ ಸಿನಿಮಾದಲ್ಲಿ ಜನಪ್ರಿಯ ಗೊಂಬೆ ಬಾರ್ಬಿಯ ಫ್ಯಾಂಟಸಿ ಕತೆಯನ್ನು ಒಳಗೊಂಡಿದೆ. ಒಂದೊಮ್ಮೆ ಬಾರ್ಬಿ ತನ್ನ ಬೊಂಬೆಗಳ ಲೋಕದಿಂದ ಭೂಮಿಗೆ ಬಂದರೆ ಏನಾಗಬಹುದು ಎಂಬ ಕತೆಯನ್ನು ಇರಿಸಿಕೊಂಡು ಸಿನಿಮಾ ಮಾಡಲಾಗಿದೆ. ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಮೊದಲ ದಿವನೇ 172 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾರ್ಬಿ ಸಿನಿಮಾ ಎದುರು ಆಪನ್‌ಹೈಮರ್ ಸಿನಿಮಾ ರಿಲೀಸ್ ಆಗಿದ್ದರೂ ಸಹ ಬಾರ್ಬಿ ಉತ್ತಮ ಕಲೆಕ್ಷನ್ ಮಾಡಿ ಬೀಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈ ನಟಿ ಈಗ ಕನಸಿನ ಅರಮನೆಯಲ್ಲಿ ಪ್ರಾಣಸಖಿ.. ಸನ್ನಿ ಲಿಯೋನ್ ಅಂದ್ರೆ ಮೂಗು ಮುರಿಯೋ ಕಾಲ ಹೋಯ್ತು!
The Rise of Ashoka ಶೂಟಿಂಗ್​ನಲ್ಲಿ ಹಾರಿ ಹಾರಿ ಬಿದ್ದ ಹಾರಿಬಲ್​ ವಿಡಿಯೋ ಶೇರ್​ ಮಾಡಿದ ನಟಿ Saptami Gowda