ಮದುವೆ ಆಗದೇ ಮಗು ಪಡೆದರೂ ಸಮಸ್ಯೆ ಇಲ್ಲ; ಮೊಮ್ಮಗಳಿಗೆ ಜಯಾ ಬಚ್ಚನ್ ಡೇಟಿಂಗ್ ಸಲಹೆ

By Shruthi Krishna  |  First Published Oct 30, 2022, 1:15 PM IST

ಜಯಾ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರಿಗೆ ಡೇಯಿಂಗ್ ಸಲಹೆ ಕೊಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಮದುವೆ ಆಗದೆ ಮಗು ಪಡೆದರೂ ಯಾವುದೇ ಸಮಸ್ಯೆ ಇಲ್ಲ ಎಂದು ಜಯಾ ಬಚ್ಚನ್ ಹೇಳಿದ್ದಾರೆ. 


ಬಾಲಿವುಡ್ ಹಿರಿಯ ನಟಿ, ಬಿಗ್ ಬಿ ಅಮಿತಾಭ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಆಗಾಗ ಸುದ್ದಿಯಲ್ಲಿರುತ್ತಾರೆ. ನೇರ ನುಡಿಗೆ ಹೆಸರುವಾಸಿಯಾಗಿರುವ ಜಯಾ ಬಚ್ಚನ್ ಆಗಾಗ ತನ್ನ ಹೇಳಿಕೆಗಳಿಂದ ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಇದೀಗ ಜಯಾ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರಿಗೆ ಡೇಯಿಂಗ್ ಸಲಹೆ ಕೊಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಹೌದು ಅಜ್ಜಿ ಜಯಾ ಬಚ್ಚನ್ ಮೊಮ್ಮಗಳಿಗೆ ನೀಡಿದ ಡೇಟಿಂಗ್ ಸಲಹೆ ವೈರಲ್ ಆಗಿದೆ. ಮದುವೆ ಆಗದೆ ಮಗು ಪಡೆದರೂ ಯಾವುದೇ ಸಮಸ್ಯೆ ಇಲ್ಲ ಎಂದು ಜಯಾ ಬಚ್ಚನ್ ಹೇಳಿದ್ದಾರೆ. 

ಇತ್ತೀಚಿಗಷ್ಟೆ ಜಯಾ ಬಚ್ಚನ್ ಮೊಮ್ಮಗಳು ನವ್ಯಾ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಪ್ರಮುಖ ವಿಷಯ ಎಂದರೆ ಸಂಬಂಧಗಳು. ಯುವ ಪೀಳಿಗೆಗೆ ಸಲಹೆ ನೀಡಿದ ಜಯಾ ಬಚ್ಚನ್, ನಾನು ಕ್ಲಿನಿಕಲ್ ಆಗಿ ನೋಡುತ್ತೇನೆ. ಬೆಸ್ಟ್ ಫ್ರೆಂಡ್ ಮದುವೆಯಾಗಿ ಎಂದು ಹೇಳುತ್ತೇನೆ. ನಿಮಗೆ ಉತ್ತಮ ಸ್ನೇಹಿತ ಇರಬೇಕು ಅವರ ಜೊತೆ ಎಲ್ಲಾ ವಿಚಾರ ಚರ್ಚಿಸಬೇಕು ಮತ್ತು ನಿನ್ನೊಂದಿಗೆ ಮಗುವನ್ನು ಪಡೆಯಬೇಕು ಯಾಕೆಂದರೆ ನಿನ್ನನ್ನು ತುಂಬಾ ಇಷ್ಟಪಡುತ್ತೇನೆ ಎಂದು ಹೇಳಬೇಕು. ತುಂಬಾ ಒಳ್ಳೆಯವರು ನಿಮ್ಮನ್ನು ಮದುವೆಯಾಗೋಣ ಎಂದು ಹೇಳಬೇಕು. ಸಮಾಜ ಅದನ್ನು ಕೇಳುತ್ತದೆ. ಆದರೆ ಮದುವೆಯಾಗದೆ ಮಗುವನ್ನು ಪಡೆದರೂ ನನಗೇನು ಸಮಸ್ಯೆ ಇಲ್ಲ' ಎಂದು ಜಯಾ ಬಚ್ಚನ್ ಹೇಳಿದರು. 

ಎಷ್ಟು ಹುಡುಗಿಯರ ಜೊತೆಯಾದ್ರೂ ಡೇಟಿಂಗ್ ಮಾಡು, ಆದರೆ...; ಮಗನಿಗೆ ಶಾರುಖ್ ಪತ್ನಿಯ ಸಲಹೆ

Tap to resize

Latest Videos

ಇನ್ನು ಸಂಬಂಧಗಳಲ್ಲಿ ದೈಹಿಕ ಆಕರ್ಷಣೆ ಹೇಗೆ ಮುಖ್ಯ ಎನ್ನುವುದನ್ನು ವಿವರಸಿದರು.   ದೈಹಿಕ ಆಕರ್ಷಣೆ ಮತ್ತು ಹೊಂದಾಣಿಕೆ ಕೂಡ ತುಂಬಾ ಮುಖ್ಯ ಎಂದು ಹೇಳಿದರು. ನಮ್ಮ ಕಾಲದಲ್ಲಿ ತುಂಬಾ ಪ್ರಯೋಗ ಮಾಡಲು ಸಾಧ್ಯವಾಗಿಲ್ಲ. ಆದರೆ ಇಂದಿನ ಪೀಳಿಗೆಯವರು ಮಾಡುತ್ತಾರೆ, ಯಾವ ಮಾಡಬಾರದು. ಯಾಕೆಂದರೆ ದೀರ್ಘಕಾಲದ ಸಂಬಂಧಕ್ಕೆ ಕಾರಣವಾಗುತ್ತದೆ. ದೈಹಿಕ ಸಂಬಂಧ ವಿಲ್ಲದಿದ್ದರೇ ಸಂಬಂಧ ಬಹಳ ಕಾಲ ಉಳಿಯುವುದಿಲ್ಲ. ಕೇವಲ ಪ್ರೀತಿ, ಹೊಂದಾಣಿ ಮೇಲೆ ಶಾಶ್ವತವಾಗಿ ದೀರ್ಘಕಾಲ ಇರಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ದೈಹಿಕ ಸಂಬಂಧ ತುಂಬಾ ಮುಖ್ಯ ಎಂದು ಹೇಳಿದರು. 

ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟಿಂಗ್ ಮಾಡ್ಬೇಡ; ಪುತ್ರಿ ಸುಹಾನಾಗೆ ಶಾರುಖ್ ಪತ್ನಿ ಸಲಹೆ

ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ಇನ್ನು ಬಣ್ಣದ ಲೋಕಕ್ಕೆ ಕಾಲಿಟ್ಟಿಲ್ಲ. ಚಿತ್ರರಂಗಕ್ಕೆ ಬರುವ ಸೂಚನೆ ಕೂಡ ನೀಡಿಲ್ಲ. ಆದರೆ ನವ್ಯಾ ಸಹೋದರ ಅಗಸ್ತ್ಯ ನಂದಾ ಈಗಾಗಲೇ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ವೆಬ್ ಸೀರಿಸ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸಹೋದರನ ಹಾಗೆ ನವ್ಯಾ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ.   

   

click me!