ಜವಾನ್ ಪಾರ್ಟ್-2 ಬಿಡುಗಡೆಯಾಗಲಿದೆಯೆ? ಏನಿರಲಿದೆ ಅದರ ಕಥೆ? ಇದರ ಬಗ್ಗೆ ನಿರ್ದೇಶಕ ಅಟ್ಲಿ ಹೇಳಿದ್ದೇನು?
ಜವಾನ್ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ 439 ಕೋಟಿ ಗಳಿಸಿದ್ದರೆ, ಜಾಗತಿಕವಾಗಿ 700 ಕೋಟಿ ಗಳಿಸಿದೆ. ಬಾಲಿವುಡ್ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ. ಜವಾನ್ ಚಿತ್ರ ನಾಗಾಲೋಟದಿಂದ ಓಡುತ್ತಲೇ ಇದೆ. ಇಲ್ಲಿಯವರೆಗೆ ಜವಾನ್ ಭಾರತದಲ್ಲಿ ಇದುವರೆಗೆ 439 ಕೋಟಿ ಗಳಿಸಿದ್ದರೆ, ಜಾಗತಿಕವಾಗಿ 700 ಕೋಟಿ ಗಳಿಸಿದೆ. ಬಾಲಿವುಡ್ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ. ಈ ಚಿತ್ರದಲ್ಲಿ ಎಂಟು ವಿಭಿನ್ನ ಶೇಡ್ಗಳಲ್ಲಿ ನಾಯಕ ನಟ ಶಾರುಖ್ ಕಾಣಿಸಿಕೊಂಡಿದ್ದರೆ, ಕಾಳಿ ಗಾಯಕ್ವಾಡ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಘಟಾನುಘಟಿ ತಾರೆಯರ ದಂಡು ಈ ಚಿತ್ರದಲ್ಲಿದೆ. ಇದರ ನಡುವೆಯೇ ಈಗ ಜವಾನ್-2 ಬಗ್ಗೆ ಸಕತ್ ಚರ್ಚೆಯಾಗುತ್ತಿದೆ.
ಇದರ ನಡುವೆಯೇ, ಕೆಲ ದಿನಗಳ ಹಿಂದೆ ಶಾರುಖ್ ಖಾನ್ ಕೂಡ ಇದರ ಹಿಂಟ್ ನೀಡಿದ್ದರು. ಅಭಿಮಾನಿಯೊಬ್ಬರು, ಸರ್, ನೀವೇಕೆ ಕಾಳಿ ವಿಜಯ್ ಸೇತುಪತಿ ಜೊತೆಗೆ ಡೀಲ್ ಮಾಡಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದರು. ತಾವು ವಿಜಯ್ ಸೇತುಪತಿಯವರ ಫ್ಯಾನ್ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಶಾರುಖ್ ಖಾನ್, ನಾನು ಕೂಡ ವಿಜಯ್ ಅವರ ದೊಡ್ಡ ಅಭಿಮಾನಿ ಎಂದಿದ್ದರು. ನಂತರ ತಮಾಷೆಯ ರೂಪದಲ್ಲಿ ನಾನು ಈಗಾಗಲೇ ಕಾಳಿಯ ಕಪ್ಪು ಹಣವನ್ನು ತೆಗೆದುಕೊಂಡು ಬಂದಿದ್ದೇನೆ. ಈಗ ಬೇರೆಯವರ ಕಪ್ಪು ಹಣವನ್ನು ಹೊರ ತೆಗೆಯುವುದಕ್ಕೆ ಕಾಯುತ್ತಿದ್ದೇನೆ. ವೀಸಾಗಾಗಿ ಕಾಯುತ್ತಿದ್ದೇನೆ ಎಂದು ಟ್ಟೀಟ್ ಮಾಡಿದ್ದರು. ಈ ಟ್ವೀಟ್ ಜವಾನ್ 2 ಬರುವ ಬಗ್ಗೆ ಸೂಚನೆ ನೀಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಚರ್ಚೆಯಾಗುತ್ತಿದೆ.
ವಿಜಯ್ ಸೇತುಪತಿಯನ್ನು ಮದ್ವೆಯಾಗಲಿದ್ದಾರಂತೆ ಶಾರುಖ್ ಖಾನ್: ಟೈಮ್ ಕೂಡ ಫಿಕ್ಸ್!
ಇದಕ್ಕೆ ಕಾರಣವೂ ಇದೆ. ಜವಾನ್ ಚಿತ್ರದ ಕ್ಲೈಮ್ಯಾಕ್ಸ್ ಮುಗಿದ ಮೇಲೆ ಪಾರ್ಟ್ 2 ಬರುವ ರೀತಿಯಲ್ಲಿ ಒಂದು ದೃಶ್ಯವನ್ನು ತೋರಿಸಲಾಗಿದೆ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಡಬಲ್ ರೋಲ್ನಲ್ಲಿದ್ದು, ಓಪನ್ ಎಂಡಿಂಗ್ನಲ್ಲಿ ಕನ್ಕ್ಲೂಡ್ ಆಗಿದೆ. ಕೊನೆಯ ಸೀನ್ನಲ್ಲಿ ಶಾರುಖ್ ಖಾನ್ ಅವರು ಆಜಾದ್ ಹಾಗೂ ವಿಕ್ರಮ್ ರಾಥೋಡ್ ಆಗಿ ಬರಲಿದ್ದಾರೆ ಎಂಬ ಹಿಂಟ್ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಶಾರುಖ್ ಟ್ವೀಟ್ ಕೂಡ ಹೋಲಿಕೆಯಾಗುತ್ತಿದೆ. ಜವಾನ್ ಸೀಕ್ವೆಲ್ ಬಂದೇ ಬರುತ್ತೆ ಅಂತಾ ಫ್ಯಾನ್ಸ್ ಸಂಭ್ರಮದಲ್ಲಿದ್ದಾರೆ. ‘ಜವಾನ್ 2’ ಬರುವ ಬಗ್ಗೆ ಈ ಮೂಲಕ ನಟ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಇದು ಅಷ್ಟು ಖಚಿತವಾಗಿರಲಿಲ್ಲ. ಆದರೆ ಇದೀಗ ಖುದ್ದು ನಿರ್ದೇಶಕ ಅಟ್ಲಿ ಅವರು ಜವಾನ್ 2 ಸಿನಿಮಾವನ್ನು ಮಾಡುವುದಾಗಿ ಖಚಿತ ಪಡಿಸಿದ್ದಾರೆ.
ಪಿಂಕ್ವಿಲ್ಲಾ ಜೊತೆ ನಡೆದ ಸಂದರ್ಶನದಲ್ಲಿ ಅಟ್ಲಿಯವರು ಮಾತನಾಡಿದ್ದು, ಜವಾನ್ 2 ಬರುವುದಾಗಿ ಹೇಳಿದ್ದಾರೆ. ಸ್ಕ್ರಿಪ್ಟ್ ತುಂಬಾ ಸ್ಟ್ರಾಂಗ್ ಆಗಿದ್ದರೆ ಜವಾನ್ 2 ಸಿನಿಮಾ ಮಾಡುವುದಾಗಿ ಹೇಳಿದ್ದು, ಸೀಕ್ವೆಲ್ ಬರುವುದು ಬಹುತೇಕ ಖಚಿತವಾಗಿದೆ. ಅಟ್ಲಿಯವರು ಹೇಳಿದ್ದೇನೆಂದರೆ, ನನ್ನ ಪ್ರತಿ ಸಿನಿಮಾ ಕೂಡಾ ಓಪನ್ ಎಂಡ್ನಲ್ಲಿಯೇ ಮುಗಿಯುತ್ತದೆ. ಆದರೆ ಆ ಸಿನಿಮಾಗಳಿಗೆ ಸೀಕ್ವೆಲ್ ಮಾಡಬೇಕೆಂದು ನಾನೆಂದೂ ಯೋಚಿಸಿಲ್ಲ. ಆದರೆ ಜವಾನ್ ಸಿನಿಮಾಗೆ ಯಾವುದಾದರೂ ಸ್ಟ್ರಾಂಗ್ ಕಥೆ ಸಿಕ್ಕಿದರೆ ಪಾರ್ಟ್ 2 ಮಾಡುತ್ತೇನೆ. ನಾನು ಓಪನ್ ಎಂಡ್ ಇಟ್ಟಿರುವ ಕಾರಣ ಬೇಕಾದರೆ ಸೀಕ್ವೆಲ್ ಈಗ ಅಥವಾ ಮುಂದೆಯೂ ಮಾಡಬಹುದು ಎಂದಿದ್ದು, ಖಂಡಿತವಾಗಿಯೂ ಜವಾನ್ ಸಿನಿಮಾಗೆ ಒಂದು ಸೀಕ್ವೆಲ್ ಮಾಡುವ ಇಚ್ಛೆ ಇದೆ ಎಂದಿದ್ದಾರೆ.
ಜವಾನ್ ನಿರ್ದೇಶಕರಿಂದ ಪ್ರಿಯಾಮಣಿಗೆ ಮಹಾಮೋಸ! ಶಾಕಿಂಗ್ ವಿಚಾರ ತಿಳಿಸಿದ ನಟಿ