Actress Sridevi ಸಾವಿಗೆ 5 ವರ್ಷ: ಭಾವುಕ ನುಡಿನಮನ ಸಲ್ಲಿಸಿದ ಮಗಳು ಜಾಹ್ನವಿ ಕಪೂರ್​

By Suvarna News  |  First Published Feb 21, 2023, 5:13 PM IST

ನಟಿ ಶ್ರೀದೇವಿ ಮೃತಪಟ್ಟು ಐದು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಮಗಳು ಜಾಹ್ನವಿ ಕಪೂರ್​ ಹಾಗೂ ಪತಿ ಬೋನಿ ಕಪೂರ್​ ಭಾವುಕ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ. ಏನದು?
 


ಭಾರತೀಯ ಚಿತ್ರರಂಗದ ಲೆಜೆಂಡರಿ ನಟಿ ಎಂದು ಕರೆಸಿಕೊಂಡಿರೋ ಶ್ರೀದೇವಿ (Sridevi) ನಿಗೂಢವಾಗಿ ಸಾವನ್ನಪ್ಪಿ ಇದೇ 24ರಂದು ಐದು ವರ್ಷ ಕಳೆದಿದೆ.  ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ (sad end) ಕಂಡವರು. ಇದೇ ಫೆ.28 ಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆಯುತ್ತವೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ  (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.  1963ರಲ್ಲಿ ಹುಟ್ಟಿದ್ದ ಈ ತಾರೆ ಇಂದು ಬದುಕಿರುತ್ತಿದ್ದರೆ, 60 ವರ್ಷ ವಯಸ್ಸಾಗಿರುತ್ತಿತ್ತು. ಆದರೆ 2018ರಲ್ಲಿ ಈಕೆ ದುರಂತ ಅಂತ್ಯ ಕಂಡರು. 

 2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ,  ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್​ (Bony Kapoor), ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್​ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್​ ಬಾತ್​ರೂಮ್​ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್​ಟಬ್​ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಫೆಬ್ರವರಿ 24ರಂದು ಅವರ ಪುಣ್ಯ ಸ್ಮರಣೆಯಾಗಿದ್ದು, ಅವರ ಮಗಳು ಜಾಹ್ನವಿ ಕಪೂರ್​ ಈ ಸಂದರ್ಭದಲ್ಲಿ ಭಾವನಾತ್ಮಕವಾಗಿ ಪೋಸ್ಟ್​ ಮಾಡಿದ್ದಾರೆ. 

Tap to resize

Latest Videos

Jr NTR ಜೊತೆ ರೊಮಾನ್ಸ್​ ಮಾಡಲು ಜಾಹ್ನವಿ ಕಪೂರ್‌ಗೆ​ ಈ ಪರಿ ಸಂಭಾವನೆಯಾ?

‘ಅಮ್ಮಾ... ಈಗಲೂ ನಾನು ನಿಮಗಾಗಿ ಎಲ್ಲ ಕಡೆಗಳಲ್ಲಿ ಹುಡುಕುತ್ತಿದ್ದೇನೆ. ನಿಮಗೆ ಹೆಮ್ಮೆ ತರುವೆನೆಂಬ ಭರವಸೆಯಲ್ಲಿ ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವೆ. ನಾನು ಎಲ್ಲಿಯೇ ಹೋದರೂ ಏನೇ ಮಾಡಿದರೂ ಅದು ನಿಮ್ಮಿಂದಲೇ ಶುರುವಾಗುತ್ತದೆ ಹಾಗೂ ನಿಮ್ಮಲ್ಲೇ ಮುಗಿಯುತ್ತದೆ’ ಎಂದು ಜಾಹ್ನವಿ ಕಪೂರ್​  ಇನ್​ಸ್ಟಾಗ್ರಾಮ್​ನಲ್ಲಿ (Instagram) ಪೋಸ್ಟ್​ ಮಾಡಿದ್ದಾರೆ. ಅದೇ ಇನ್ನೊಂದೆಡೆ,  ಪತಿ ಬೋನಿ ಕಪೂರ್​ ಕೂಡ ಭಾವನಾತ್ಮಕ ನುಡಿ ಶೇರ್​ ಮಾಡಿಕೊಂಡಿದ್ದಾರೆ.  ‘ನೀನು ನಮ್ಮನ್ನು ಬಿಟ್ಟು ಹೋಗಿ 5 ವರ್ಷ ಆಯಿತು. ನಿನ್ನ ನೆನಪು ಮತ್ತು ಪ್ರೀತಿಯೇ ನಮ್ಮನ್ನು ಮುಂದುವರಿಸುತ್ತಿದೆ. ಅವು ನಮ್ಮ ಜೊತೆ ಸದಾ ಇರುತ್ತವೆ’ ಎಂದು ಬರೆದುಕೊಂಡಿದ್ದಾರೆ.

ಇವರ ಜೀವನವೀಗ  ಪುಸ್ತಕ ರೂಪದಲ್ಲಿ ಹೊರಬರುತ್ತಿದೆ.  ಈ ವಿಷಯವನ್ನು  ಶ್ರೀದೇವಿಯವರ ಪತಿ,  ಬೋನಿ ಕಪೂರ್ (Bony Kapoor)ಬಹಿರಂಗಪಡಿಸಿದ್ದಾರೆ. ಧೀರಜ್ ಕುಮಾರ್ (DheerajKumar) ಈಗ ಶ್ರೀದೇವಿಯ ಜೀವನವನ್ನು ಪುಸ್ತಕ ರೂಪದಲ್ಲಿ ತರುತ್ತಿದ್ದಾರೆ. ಈ ಪುಸ್ತಕವು ಮುಂದೊಂದು ದಿನ ಸಿನಿಮಾ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಈ ವಿಷಯವನ್ನು ಅವರು ಮಾಧ್ಯಮದವರ ಜೊತೆ ಶೇರ್​ ಮಾಡಿಕೊಂಡಿದ್ದಾರೆ, 'ಶ್ರೀದೇವಿಗೆ ನಟನೆ ಎಂದರೆ ಸರ್ವಸ್ವವಾಗಿತ್ತು. ಇದೇ ಆಕೆಯ ಜೀವವಾಗಿತ್ತು.  ಅದೇ ಇನ್ನೊಂದೆಡೆ, ವೈಯಕ್ತಿಕ ಜೀವನದಲ್ಲಿ ಆಕೆ ಬಹಳ ಶಿಸ್ತಿನ, ಹೆಚ್ಚು ಜನರೊಟ್ಟಿಗೆ ಬೆರೆಯದ ವ್ಯಕ್ತಿಯಾಗಿದ್ದರು. ಆದರೆ ನಮ್ಮದೇ ಕುಟುಂಬದ ವ್ಯಕ್ತಿಯಂತಿರುವ ಬರಹಗಾರ ಧೀರಜ್ ಕುಮಾರ್ ಈಗ ಶ್ರೀದೇವಿಯ ಜೀವನವನ್ನು ಪುಸ್ತಕ ರೂಪದಲ್ಲಿ ತರುತ್ತಿದ್ದಾರೆ ಎಂದಿದ್ದಾರೆ ಬೋನಿ ಕಪೂರ್​. ಅಂದಹಾಗೆ ಈ ಪುಸ್ತಕದ ಹೆಸರು 'ಶ್ರೀದೇವಿ: ದಿ ಲೈಫ್ ಆಫ್ ಎ ಲೆಜೆಂಡ್' ಬರೆದಿದ್ದಾರೆ. ಇನ್ನು ಲೇಖಕ  ಧೀರಜ್ ಕುಮಾರ್‌ ಅವರ ಕುರಿತು ಹೇಳಿರುವ ಅವರು, ಧೀರಜ್​ಕುಮಾರ್​ ಸಂಶೋಧಕರು, ಬರಹಗಾರರು, ಅಂಕಣ ಬರಹಗಾರರು. ಶ್ರೀದೇವಿಯ ಜೀವನದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ.  ನಮ್ಮ ಕುಟುಂಬದವರನ್ನು ಸೇರಿದಂತೆ ಹಲವರೊಟ್ಟಿಗೆ ಮಾತುಕತೆ ನಡೆಸಿ ಇದನ್ನು ಬರೆದಿದ್ದು,  ಪುಸ್ತಕ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ ಎಂದಿದ್ದಾರೆ. 

Sridevi Biopic: ಶ್ರೀದೇವಿ ಜೀವನ ಚರಿತ್ರೆ ಶೀಘ್ರ ಬಿಡುಗಡೆ: ನಿಗೂಢ ಸಾವಿನ ರಹಸ್ಯ ಬಯಲಾಗುತ್ತಾ?

 

click me!