ಗಣೇಶ, ಏಸು ಇಬ್ಬರಿಗೂ ಸಮಾನ ಸ್ಥಾನ ಎಂದ ನಟಿ Namrata Shirodkar

By Suvarna NewsFirst Published Feb 21, 2023, 5:07 PM IST
Highlights

ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿರುವ ನಟಿ ನಮ್ರತಾ ಶಿರೋಡ್ಕರ್​ ಮದುವೆಯಾದ ಮೇಲೆ ಚಿತ್ರರಂಗದಿಂದ ದೂರ ಸರಿದಿದ್ದಾರೆ. ಅವರು ತಮ್ಮ ಮನೆಯಲ್ಲಿ ಆಚರಿಸುವ ಎರಡು ಹಬ್ಬಗಳ ಕುರಿತು ಮಾತನಾಡಿದ್ದಾರೆ. ಏನು ಹೇಳಿದ್ದಾರೆ ಅವರು? 

ನಮ್ರತಾ ಶಿರೋಡ್ಕರ್​ (Namrutha Shirodkar) 1990-2000ನೇ ಸಾಲಿನಲ್ಲಿ ಬಾಲಿವುಡ್​ನಲ್ಲಿ ಅತ್ಯಂತ ಬೇಡಿಕೆಯುಳ್ಳ ನಟಿಯರಲ್ಲಿ ಈಕೆ ಕೂಡ ಒಬ್ಬರು. 1993ರಲ್ಲಿ ಫೆಮಿನಾ ಮಿಸ್​ ಇಂಡಿಯಾ ಕಿರೀಟ ದಕ್ಕಿಸಿಕೊಂಡು ಬಾಲಿವುಡ್​ನಲ್ಲಿಯೂ ಬೇಡಿಕೆಯಿದ್ದ ನಟಿ ಈಗ ತೆರೆಮರೆಗೆ ಸರಿದು ಬಹಳ ವರ್ಷಗಳೇ ಆಗಿಹೋಗಿವೆ. ಸಲ್ಮಾನ್ ಖಾನ್ ನಟನೆಯ 'ಜಬ್ ಪ್ಯಾರ್ ಕೈಸೆ ಹೋತಾ ಹೈ' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ ನಮ್ರತಾ ಶಿರೋಡ್ಕರ್ ಅವರು, 1999ರಲ್ಲಿ ತೆರೆಕಂಡ 'ವಾಸ್ತವ್' ಚಿತ್ರದ ಮೂಲಕ ನಾಯಕಿಯಾಗಿ ಬೆಳೆದರು. ಆಮೇಲೆ ದಕ್ಷಿಣ ಭಾರತದ ಚಿತ್ರಗಳಲ್ಲೂ ನಟಿಸಿ ಜನಪ್ರಿಯತೆ ಪಡೆದರು. ಕಚ್ಚೆ ಧಾಗೆ (1999), ಎಜುಪುನ್ನಾ ತರಕನ್ (1999), ವಾಸ್ತವ್: ದಿ ರಿಯಾಲಿಟಿ (1999) ಮತ್ತು ಪುಕಾರ್ (2000) ನಂತಹ ಚಲನಚಿತ್ರಗಳಲ್ಲಿನ ಅವರ ಅಭಿನಯಕ್ಕೆ ಜನ ಮನಸೋತರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ IIFA ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. 2000ನೇ ಸಾಲಿನಲ್ಲಿ ತೆರೆಕಂಡ ಆಸ್ತಿತ್ವ (2000), ದಿಲ್ ವಿಲ್ ಪ್ಯಾರ್ ವ್ಯಾರ್ (2002), LOC ಕಾರ್ಗಿಲ್ (2003)ಗಳಲ್ಲಿ ಮಿಂಚಿದರು.  2004ರಲ್ಲಿ ತೆರೆ ಕಂಡ ಬ್ರೈಡ್ ಅಂಡ್ ಪ್ರಿಜುಡೀಸ್  ಸಾಗರೋತ್ತರದಲ್ಲಿ ಅದರಲ್ಲಿಯೂ ವಿಶೇಷವಾಗಿ ಲಂಡನ್​ನಲ್ಲಿ (London)ಯಶಸ್ವಿ ಪ್ರದರ್ಶನ ಕಂಡಿತು.

ಇಂತಿಪ್ಪ ಬೆಡಗಿ ಏಕಾಏಕಿ ಚಿತ್ರರಂಗದಿಂದ ದೂರವೇ ಉಳಿದರು. ಇದಕ್ಕೆ ಕಾರಣ, ಇವರು  2005 ರಲ್ಲಿ ತೆಲುಗು ನಟ ಮಹೇಶ್ ಬಾಬು (Mahesh Babu) ಅವರನ್ನು ವಿವಾಹವಾಗಿದ್ದು. 2000ರಲ್ಲಿ ರಿಲೀಸ್ ಆಗಿದ್ದ 'ವಂ‍ಶಿ' ಚಿತ್ರದಲ್ಲಿ ಮಹೇಶ್‌ ಬಾಬು, ನಮ್ರತಾ ಒಟ್ಟಿಗೆ ನಟಿಸಿದ್ದರು. ಇಬ್ಬರು ಜೊತೆಯಾಗಿ ಕೆಲಸ ಮಾಡಿದ್ದು ಒಂದೇ ಸಿನಿಮಾದಲ್ಲಿ. ಆದರೆ ಅವರ ಮೊದಲ ಸಿನಿಮಾವೇ ಇಬ್ಬರ ನಡುವಿನ ಸ್ನೇಹ, ಪ್ರೀತಿ, ಮದುವೆಗೆ ಬುನಾದಿಯಾಯಿತು. 2005ರ ಫೆಬ್ರವರಿ 10ರಂದು ಅದ್ದೂರಿಯಾಗಿ ಇವರಿಬ್ಬರೂ ಮದುವೆ ಆಗಿದ್ದಾರೆ. ವೈವಾಹಿಕ ಜೀವನ ಮತ್ತು ಚಿತ್ರರಂಗ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿ ನಮ್ರತಾ ಅವರಿಗಿತ್ತು. ನನಗೆ ಕೆಲಸ ಮಾಡದಿರುವ ಹುಡುಗಿ ಪತ್ನಿಯಾಗಿ ಬರಬೇಕು ಎಂದು ಮಹೇಶ್ ಬಾಬು ಮೊದಲೇ ಸ್ಪಷ್ಟವಾಗಿ ಹೇಳಿದ್ದರು. ನಟನೆ ಮಾಡದಿದ್ದರೂ ಕೂಡ ಮದುವೆಯಾದಮೇಲೆ ನಾನು ಕೆಲಸ ಬಿಡಬೇಕು ಎಂದು ಅವರು ಹೇಳಿದ್ದರು. ಇದೇ ಕಾರಣಕ್ಕೆ ನಮ್ರತಾ ಕುಟುಂಬವನ್ನು ಆಯ್ಕೆ ಮಾಡಿಕೊಂಡರು. ಮದುವೆಯಾಗಿ ನಟನೆಯಿಂದ ದೂರ ಸರಿದರು. ಪತಿಯ ಸಿನಿಮಾ ಕೆಲಸಗಳಿಗೆ ಸಹಕಾರ ನೀಡುವುದು, ಮಕ್ಕಳ ಆರೈಕೆ, ಕುಟುಂಬ ನೋಡಿಕೊಳ್ಳುವುದಕ್ಕೆ ಸೀಮಿತರಾದರು. ಭಾವಿ ಪತಿಗೆ ಕೊಟ್ಟ ಮಾತನ್ನು ಉಳಿಸಿಕೊಂಡರು ನಮ್ರತಾ.

Latest Videos

ಇಸ್ಲಾಮ್​ ಸ್ವೀಕರಿಸುವೆ... ವಿದಾಯದ ನುಡಿ ಬರೆದು ಕಣ್ಣೀರಿಟ್ಟ ಮತ್ತೋರ್ವ ಖ್ಯಾತ ನಟಿ

ಇದೀಗ ಎರಡು ಮಕ್ಕಳು ಹಾಗೂ ಪತಿಯೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿರುವ ನಮ್ರತಾ ಸಂದರ್ಶನವೊಂದರಲ್ಲಿ ಶಿರಡಿ ಸಾಯಿಬಾಬಾ (Shiradi Saibaba) ಅವರ ಮೇಲಿರುವ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ನಾನು ಶಿರಡಿ ಸಾಯಿಬಾಬಾ ಅವರ ದೊಡ್ಡ ಆರಾಧಕಿ. ಎಲ್ಲಾ ದೇವರೂ ಒಂದೇ ಎಂದು ನಂಬಿರುವವಳು ನಾನು. ಆ ದೇವರು ದೊಡ್ಡವರು, ಈ ದೇವರು ಚಿಕ್ಕವರು ಎನ್ನುವ ಭೇದಭಾವ ಸರಿಯಲ್ಲ. ಆದರೆ ನಾನು ಬಾಬಾರನ್ನು ತುಂಬಾ ನಂಬಿದ್ದೇನೆ. ಇದಕ್ಕೆ  ಕಾರಣ ನನ್ನ ಅಮ್ಮ. ಅವರು ಕೂಡ ಶಿರಡಿ ಸಾಯಿಬಾಬಾರ ಭಕ್ತೆ. ನಮ್ಮ ಕುಟುಂಬದ ಮೇಲೆ ಅವರ ಶ್ರೀರಕ್ಷೆ ಇದೆ ಎಂದಿದ್ದಾರೆ. ಇದೇ ವೇಳೆ ತಮ್ಮ ಮನೆಯಲ್ಲಿ ಆಚರಿಸುವ ಎರಡು ಮುಖ್ಯ ಹಬ್ಬಗಳ ಕುರಿತು ನಮ್ರತಾ ಮಾತನಾಡಿದ್ದಾರೆ. ಕುತೂಹಲ ಏನೆಂದರೆ ಇವರ  ಮನೆಯಲ್ಲಿ ಗಣೇಶನ ಹಬ್ಬದ ಜೊತೆಗೆ ಕ್ರಿಸ್​ಮಸ್​ ಕೂಡ ತುಂಬಾ ಅದ್ಧೂರಿಯಾಗಿ ಆಚರಿಸಲಾಗುತ್ತದೆಯಂತೆ. ಎಲ್ಲಾ ದೇವರನ್ನೂ ಸಮಾನರನ್ನಾಗಿ ಕಾಣುವ ಹಿನ್ನೆಲೆಯಲ್ಲಿ ನಮ್ಮ ಮನೆಯಲ್ಲಿ ಗಣೇಶನ ಹಬ್ಬದಂತೆ ಕ್ರಿಸ್​ಮಸ್​ ದಿನವನ್ನೂ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದಿದ್ದಾರೆ. 

ಅಂದಹಾಗೆ 50 ವರ್ಷದ ನಮ್ರತಾ ಈಗ  ಇಬ್ಬರು ಮಕ್ಕಳ ತಾಯಿ. ಇವರು ನಟಿ ಶಿಲ್ಪಾ ಶಿರೋಡ್ಕರ್​ ಅವರ ಸಹೋದರಿ. ಮದುವೆಯ ನಂತರ ಖುಷಿಯಿಂದ ಇರುವುದಾಗಿ ಹೇಳಿಕೊಂಡಿರೋ ನಮ್ರತಾ, 'ಮಹೇಶ್ ಜೊತೆ ಮದುವೆಯಾದಮೇಲೆ ನನ್ನ ಬದುಕು ಬದಲಾಯ್ತು. ತಾಯ್ತನ ಕೂಡ ಅದ್ಭುತವಾದ ಅನುಭವ. ಇದರ ಬದಲು ಇನ್ಯಾವುದೂ ಖುಷಿ ಕೊಡದು' ಎಂದಿದ್ದಾರೆ. ನನ್ನ ಮಗ ಗೌತಮ್ (Goutam) ತುಂಬ ನಾಚಿಕೆ ಸ್ವಭಾವದವನು. ಸಿತಾರಾ (Sitara) ಸಿಕ್ಕಾಪಟ್ಟೆ ಆಕ್ಟಿವ್, ಎಲ್ಲ ಕಡೆಯೂ ಇರುತ್ತಾಳೆ ಎಂದಿದ್ದಾರೆ ನಮ್ರತಾ. ನಾನು ನಟನೆ ಬಿಟ್ಟೆ ಎಂದು ನನಗೆ ಬೇಸರವಿಲ್ಲ. ಅದಕ್ಕಿಂತ ನನಗೆ ಖುಷಿಯ ಜೀವನ ಸಿಕ್ಕಿದೆ ಎಂದಿದ್ದಾರೆ. ಜೊತೆಗೆ ತಮ್ಮ ಕುಟುಂಬದ ವಿಚಾರನ್ನೂ ಶೇರ್​ ಮಾಡಿಕೊಂಡಿರೋ ನಮ್ರತಾ, 'ಮಹೇಶ್ ಬಾಬು ಅವರು ಮಾತನಾಡೋದು ಕಮ್ಮಿ, ಸಿನಿಮಾದ ನಂತರ ಅವರಿಗೆ ಮನೆಯೇ ಪ್ರಪಂಚ. ಹಾಗಾಗಿ ಶೂಟಿಂಗ್‌ಗೆ ಬ್ರೇಕ್ ಇದ್ದ ಸಮಯದಲ್ಲಿ ಕುಟುಂಬದ ಜೊತೆ ವಿದೇಶದ ಪ್ರವಾಸಕ್ಕೆ ಸಮಯ ಕೊಡುತ್ತಾರೆ. ಇನ್ನೂ ಮಕ್ಕಳಾದ ಗೌತಮ್, ಸಿತಾರಾ ತಮಗೆ ಏನೇ ಬೇಕಿದ್ದರೂ ಮಹೇಶ್ ಅವರನ್ನೇ ಕೇಳುತ್ತಾರೆ. ಅವರೂ ಎಲ್ಲದಕ್ಕೂ ಓಕೆ ಎನ್ನುತ್ತಾರೆ. ಈ ವಿಷ್ಯಕ್ಕೆ ನನಗೂ ಮಹೇಶ್‌ಗೂ ಜಗಳವಾಗುತ್ತದೆ ಎಂದು ಮಾತನಾಡಿದ್ದಾರೆ. ಮಕ್ಕಳು ಕೇಳಿದನ್ನೆಲ್ಲ ಕೊಡಿಸಬಾರದು' ಎಂದು ಹೇಳಿಕೊಂಡಿದ್ದಾರೆ. 

Bedroom Secret ಬಹಿರಂಗಗೊಳಿಸಿದ ಬಾಲಿವುಡ್​ನ ಖ್ಯಾತ ತಾರಾ ಜೋಡಿ!
 

click me!