
ಲಾಸ್ ಎಂಜಲೀಸ್(ಜ.05): ಹಾಲಿವುಡ್ ಬೆಳ್ಳಿತೆರೆ ಹಾಗೂ ಕಿರುತೆರೆ ಜನಪ್ರಿಯ ನಟಿ ತಾನ್ಯಾ ರಾಬರ್ಟ್ಸ್ ಡಿಸೆಂಬರ್ 24ರಂದು ತಮ್ಮ ಸಾಕು ನಾಯಿಯ ಜೊತೆ ವಾಕಿಂಗ್ ಮಾಡುವಾಗ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ತಾನ್ಯಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಂದಿನಿಂದ ಚಿಕಿತ್ಸೆಯಲ್ಲಿದ್ದ ತಾನ್ಯಾ ಜನವರಿ 3ರಂದು ಕೊನೆ ಉಸಿರೆಳೆದಿದ್ದಾರೆ.
ತಾನ್ಯಾ ರಾಬರ್ಟ್ಸ್‌ಗೆ ಕೋವಿಡ್19 ಟೆಸ್ಟ್ ಮಾಡಲಾಗಿತ್ತು, ಪರಿಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೂ, ತಾನ್ಯಾ ಸಾವಿಗೆ ನಿಖರವಾದ ಕಾರಣ ಏನೆಂದು ತಿಳಿದು ಬಂದಿಲ್ಲ. ಕೆಲವರು ವಯೋ ಸಹಜ ಕಾಯಿಲೆ ಅಥವಾ ಹೃದಯಾಘಾತ ಎಂದು ಹೇಳುತ್ತಾರೆ. ವೈದ್ಯರು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಜನವರಿ 4ರಂದು ಲಾಸ್ ಎಂಜಲೀಸ್‌ನಲ್ಲಿ ನಟಿಯ ಅಂತ್ಯ ಸಂಸ್ಕಾರ ನಡೆಸಲಾಯಿತು.
ಸಿನಿಮಾ ಜಗತ್ತಿನ ಪತ್ತೆದಾರ ಜೇಮ್ಸ್ ಬಾಂಡ್ ಇನ್ನಿಲ್ಲ
ಜೇಮ್ಸ್ ಬಾಂಡ್ ಸರಣಿಯಲ್ಲಿ ಬರುವ 'ಎ ವೀವ್ ಟು ಎ ಕಿಲ್' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ತಾನ್ಯಾ ರಾಬರ್ಟ್ಸ್, 'ದ ಬೀಸ್ಟ್ ಮಾಸ್ಟರ್', 'ಶೀನಾ', 'ಬಾಡಿ ಸ್ಲ್ಯಾಮ್', 'ನೈಟ್ ಐಸ್' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಲಿವುಡ್ ಸೆಲೆಬ್ರಿಟಿಗಳು ತಾನ್ಯಾ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.