
ಗೋವಾದಲ್ಲಿ ಹೊಸ ವರ್ಷದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಭಾನುವಾರ ಮಲೈಕಾ ಗೆಳೆಯ ಅರ್ಜುನ್ ಕಪೂರ್ ಅವರಿಗೆ ರುಚಿಕರವಾದ ಅಡುಗೆ ಮಾಡಿ ಬಡಿಸಿದ್ದಾರೆ.
ನಟನ ತನ್ನ ಖುಷಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅರ್ಜುನ್ ತನ್ನ ಗೆಳತಿ ತಯಾರಿಸಿದ ಯಮ್ಮೀ ಫುಡ್ ಒಳಗೊಂಡ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಅವಳು ಭಾನುವಾರ ನಿಮಗಾಗಿ ಅಡುಗೆ ಮಾಡುವಾಗ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
47 ಅಂದ್ರೆ ನಂಬಲ್ಲ: ಮಲೈಕಾ ಹಾಟ್ ವಾಟರ್ ಬೇಬಿ ಲುಕ್
ಮಲೈಕಾ ಅರೋರಾ ತನ್ನ ಸೋಶಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ನಟನ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಡೇಟ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಈ ಬಾಲಿವುಡ್ ಸ್ಟಾರ್ ಕಪಲ್ ಸದ್ಯ ಗೋವಾದಲ್ಲಿದ್ದಾರೆ.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಇಬ್ಬರೂ ತಮ್ಮ ಗೋವಾ ವೆಕೇಷನ್ ಫೋಟೋಸ್ ಶೇರ್ ಮಾಡುತ್ತಲೇ ಇದ್ದಾರೆ. ಭಾನುವಾರ, ಮಲೈಕಾ ಅರೋರಾ ಅವರು ತಮ್ಮ ಸ್ವಿಮ್ಮಿಂಗ್ ಪೂಲ್ ಫೋಟೋ ಶೇರ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.