RGV Comments on RRR: ಕೊರೋನಾ ಹೆಚ್ಚಳ, RRR ರಿಲೀಸ್, ಯಾರನ್ನೂ ಥಿಯೇಟರ್‌ಗೆ ಬಿಡ್ಬೇಡಿ ಎಂದ RGV

By Suvarna NewsFirst Published Dec 26, 2021, 5:46 PM IST
Highlights

RGV ವಿಚಿತ್ರ ಹೇಳಿಕೆ ಕೊಡೋದು ಇದೇ ಮೊದಲಲ್ಲ. ಭಾರೀ ಸಿದ್ಧತೆ ನಂತರ ತ್ರಿಬಲ್ ಆರ್ ರಿಲೀಸ್‌ಗೆ ಸಿದ್ಧವಾಗಿರುವ ಸಂದರ್ಭ ಯಾರನ್ನೂ ಥಿಯೇಟರ್‌ಗೆ ಬಿಡ್ಬೇಡಿ ಅಂತಿದ್ದಾರೆ ಆರ್‌ಜಿವಿ.

ಎಡವಟ್ಟು ಹೇಳಿಕೆಗಳನ್ನು ಕೊಟ್ಟು ರಾಮ್ ಗೋಪಾಲ್ ವರ್ಮಾ(Ram Gopal Varma) ಅವರು ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಪ್ರತಿಬಾರಿ ಸುದ್ದಿಯಾದಾಗಲೂ ಇಂಥದ್ದೇ ಕೆಲವು ಕಾರಣಗಳಿರುತ್ತವೆ. ಈ ಬಾರಿ ಬಹುನಿರೀಕ್ಷಿತ ಸಿನಿಮಾ ತ್ರಿಬಲ್ ಆರ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ನಿರ್ದೇಶಕ ಆರ್‌ಜಿವಿ(RGV) ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(RRR) ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ರಿಲೀಸ್ ಬಗ್ಗೆ ಟ್ವೀಟ್ ಮಾಡಿ ಅವರು ಸುದ್ದಿಯಲ್ಲಿದ್ದಾರೆ. 

ಭಾರತದಲ್ಲಿ ಒಮಿಕ್ರೋನ್‌ ಕೇಸ್‌ಗಳ ಹೆಚ್ಚಳದ ಮಧ್ಯೆ ಆರ್‌ಜಿವಿ ಅವರು ಸರ್ಕಾರಕ್ಕೆ ಒಂದು ಐಡಿಯಾ ಕೊಟ್ಟಿದ್ದಾರೆ. ತಮ್ಮ ಐಡಿಯಾವನ್ನು ಟ್ವೀಟ್ ಮಾಡಿ, ಒಮಿಕ್ರೋನ್‌ಗೆ ಸಂಬಂಧಿಸಿ ಸರ್ಕಾರಕ್ಕೆ ನೀಡಲು ನನ್ನಲ್ಲಿ ಒಂದು ಗ್ರೇಟ್ ಐಡಿಯಾ ಇದೆ. ಡಬಲ್ ಡೋಸ್ ಲಸಿಕೆಯ ಪ್ರೂಫ್ ತೋರಿಸದ ಹೊರತಾಗಿ ಯಾರನ್ನನು ಆರ್‌ಆರ್‌ಆರ್‌ ಥಿಯೇಟರ್‌ಗೆ ಬಿಡಬಾರದು. ತ್ರಿಬಲ್ ಆರ್‌ನ್ನು ನೋಡುವ ಆಸಕ್ತಿ ಜನರನ್ನು ಕೇರ್‌ಲೆಸ್ ಮಾಡಲಿದೆ ಎಂದಿದ್ದಾರೆ.

ಮದ್ಯದ ಅಮಲಿನಲ್ಲಿ ಸಮಂತಾ ಮೇಲಿರುವ ಫೀಲಿಂಗ್‌ ಟ್ವೀಟ್‌ ಮಾಡಿದ RGV!

ಟ್ವಿಟ್ಟರ್ ಬಳಕೆದಾರರು, ಮೊದಲ ಬಾರಿಗೆ ನೀವು ಅರ್ಥಪೂರ್ಣವಾಗಿ ಮಾತನಾಡಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ, ಆದರೆ ಇನ್ನೊಬ್ಬರು, ಇದು ನಿಜವಾಗಿ ಒಳ್ಳೆಯದು ಎಂದು ಬರೆದಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆರ್‌ಆರ್‌ಆರ್ ಜನವರಿ 7, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ, ಮ್ಯಾಗ್ನಮ್ ಆಪಸ್ ಎಲ್ಲಾ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

I have a GREAT idea for the GOVERNMENT regarding OMICRON😎😎😎…They should not allow anyone into theatres unless they show proof of DOUBLE DOSE ..The DESIRE to see will CONQUER the CARELESSNESS of the PEOPLE 💪💪💪

— Ram Gopal Varma (@RGVzoomin)

ಇಬ್ಬರು ನಾಯಕರಲ್ಲದೆ, ಆರ್‌ಆರ್‌ಆರ್‌ನಲ್ಲಿ ಅಜಯ್ ದೇವಗನ್, ಆಲಿಯಾ ಭಟ್ ಮತ್ತು ಶ್ರಿಯಾ ಸರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಚಿತ್ರವು ಇಬ್ಬರು ಪೌರಾಣಿಕ ಕ್ರಾಂತಿಕಾರಿಗಳ ಕಾಲ್ಪನಿಕ ಕಥೆಯಾಗಿದೆ. ಸಿನಿಮಾದ ಹಾಡು ಈಗಾಗಲೇ ಹಿಟ್ ಆಗಿದೆ.

ಮೈಸಮ್ಮ ದೇವರಿಗೆ ವಿಸ್ಕಿ ಕುಡಿಸಿದ ಘಟನೆ

ಆರ್‌ಜಿವಿ ನಿರ್ದೇಶನ ಮಾಡುತ್ತಿರುವ ಹೊಸ 'ಕೊಂಡ' (Konda) ಸಿನಿಮಾ ಸಮಾರಂಭದಲ್ಲಿ ಭಾಗಿಯಾಗುವ ಮುನ್ನ ವರಾಂಗಲ್‌ಗೆ (Warangal) ತೆರಳಿ  ಅಲ್ಲಿನ ಮೈಸಮ್ಮ (Mysamma devi) ದೇವಿಗೆ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ವರ್ಮಾ ವಿಸ್ಕಿ (Whiskey) ಕುಡಿಸಿದ್ದಾರೆ. ಇದು ಮದ್ಯ ನೇವೇದ್ಯ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. 'ನಾನು ವೋಡ್ಕಾ (Vodka) ಮಾತ್ರವೇ ಕುಡಿಯುತ್ತೇನೆ. ಆದರೆ ದೇವತೆ ಮೈಸಮ್ಮನಿಗೆ ವಿಸ್ಕಿ ಕುಡಿಸಿದೆ,' ಎಂದು ಬರೆದುಕೊಂಡಿದ್ದು, ವಿಪರೀತ ಎನ್ನುವಂತೆ ಉದ್ಧಟತನ ತೋರಿದ್ದಾರೆ.

ವರ್ಮಾಗೆ ಟ್ರೋಲ್ ಮಾಡುತ್ತಿರುವ ಕೆಲವರು ಈ ದೇವರ ಗುಡಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ವರಾಂಗಲ್‌ನಲ್ಲಿರುವ ಮೈಸಮ್ಮ ದೇವರಿಗೆ ಕಳ್ಳು ಅಂದರೆ ಸಾರಾಯಿ ನೈವೇದ್ಯ ನೀಡುವುದು ತೆಲಂಗಾಣ (Telangana) ರಾಜ್ಯದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಆಂಧ್ರ- ತೆಲಂಗಾಣದಲ್ಲಿ (Andrapradesh-Telangana) ಈ ಸಂಪ್ರದಾಯ ಹೆಚ್ಚಾಗಿದೆ. ಕರ್ನಾಟಕದಲ್ಲೂ (Karnataka) ಕೆಲವು ದೇವರಿಗೆ ಈ ರೀತಿ ನೈವೇದ್ಯ ಅರ್ಪಿಸಲಾಗುತ್ತದೆ. 

click me!