ಪ್ರತಿಷ್ಠಿತ ಆಸ್ಕರ್ ಕಮಿಟಿಯಲ್ಲಿ ನಟ ಸೂರ್ಯ; ಈ ಸಾಧನೆ ಮಾಡಿದ ಮೊದಲ ತಮಿಳು ಸ್ಟಾರ್

Published : Jun 29, 2022, 04:13 PM IST
ಪ್ರತಿಷ್ಠಿತ ಆಸ್ಕರ್ ಕಮಿಟಿಯಲ್ಲಿ ನಟ ಸೂರ್ಯ; ಈ ಸಾಧನೆ ಮಾಡಿದ ಮೊದಲ ತಮಿಳು ಸ್ಟಾರ್

ಸಾರಾಂಶ

ತಮಿಳಿನ ಖ್ಯಾತ ನಟ ಸೂರ್ಯ ( Tamil Actor Surya) ಪ್ರತಿಷ್ಠಿತ ಆಸ್ಕರ್ ಕಮಿಟಿಗೆ (Oscar Committee) ಆಯ್ಕೆಯಾಗಿದ್ದಾರೆ.  ಈ ಮೂಲಕ ಆಸ್ಕರ್ ಆಯೋಜಕರ ಸದಸ್ಯತ್ವ ಸಮಿತಿಗೆ ಆಹ್ವಾನಿಸಲ್ಪಟ್ಟ ಮೊದಲ ತಮಿಳು ನಟ ಎನ್ನುವ ಖ್ಯಾತಿ ಗಳಿಸಿದ್ದಾರೆ.

ತಮಿಳಿನ ಖ್ಯಾತ ನಟ ಸೂರ್ಯ ( Tamil Actor Surya) ಪ್ರತಿಷ್ಠಿತ ಆಸ್ಕರ್ ಕಮಿಟಿಗೆ (Oscar Committee) ಆಯ್ಕೆಯಾಗಿದ್ದಾರೆ.  ಈ ಮೂಲಕ ಆಸ್ಕರ್ ಆಯೋಜಕರ ಸದಸ್ಯತ್ವ ಸಮಿತಿಗೆ ಆಹ್ವಾನಿಸಲ್ಪಟ್ಟ ಮೊದಲ ತಮಿಳು ನಟ ಎನ್ನುವ ಖ್ಯಾತಿ ಗಳಿಸಿದ್ದಾರೆ. ಮಂಗಳವಾರ (ಜೂನ್ 28), 2022ರ ತರಗತಿಗೆ ಸೇರಲು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್  397 ಕಲಾವಿದರು ಮತ್ತು ಕಾರ್ಯನಿರ್ವಾಹಕರನ್ನು ಆಹ್ವಾನಿಸಿದೆ. ಈ ಪಟ್ಟಿಯಲ್ಲಿ ಭಾರತದಿಂದ ಮೂವರಿಗೆ ಆಹ್ವಾನ ಸಿಕ್ಕಿದೆ. ತಮಿಳು ನಟ ಸೂರ್ಯ ಸೇರಿದಂತೆ ಬಾಲಿವುಡ್ ಖ್ಯಾತ ನಟಿ ಕಾಜೋಲ್ ಮತ್ತು ನಿರ್ದೇಶಕಿ ರೀಮಾ ಕಗ್ತಿ ಅವರಿಗೆ ಆಸ್ಕರ್ ಕಮಿಟಿಯಿಂದ ಆಹ್ವಾನ ಸಿಕ್ಕಿದೆ. 

ನಟ ಸೂರ್ಯ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಇತ್ತೀಚಿಗೆ ರಿಲೀಸ್ ಆದ ಜೈ ಭೀಮ್  ಮತ್ತು ಸೂರರೈ ಪೋಟ್ರು ಸಿನಿಮಾಗಳು ಅಂತಾರಾಷ್ಟೀಯ ಮಟ್ಟದಲ್ಲಿ ಖ್ಯಾತಿಗಳಿಸುವಂತೆ ಮಾಡಿವೆ. ಈ ಎರಡು ಸಿನಿಮಾಗಳು ಸಹ ಒಟಿಟಿಯಲ್ಲಿ ರಿಲೀಸ್ ಆಗಿದ್ದು ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಎರಡು ಸಿನಿಮಾಗಳು ಅತೀ ದೊಡ್ಡ ಮಟ್ಟದ ಪ್ರೇಕ್ಷಕರನ್ನು ತಲುಪಿದೆ, ಅಲ್ಲದೇ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಎರಡು ಸೂಪರ್ ಹಿಟ್ ಸಿನಿಮಾಗಳ ಬೆನ್ನಲ್ಲೇ ಆಸ್ಕರ್ ಕಮಿಟಿಯಿಂದ ಆಹ್ವಾನ ಸಿಕ್ಕಿದೆ.  ಸೂರ್ಯನಿಗೆ ಆಸ್ಕರ್ ಕಮಿಟಿಯಂದ ಆಹ್ವಾನ ಸಿಕ್ಕಿರುವುದು ಅಭಿಮಾನಿಗಳಿಗೆ ಸಂತಸಕ್ಕೆ ಕಾರಣವಾಗಿದೆ. 

ಸೂರ್ಯ ಆಸ್ಕರ್ ಆಯೋಜಕರ ಸದಸ್ಯತ್ವದ ಶ್ರೇಣಿಗೆ ಸೇರಲು ಆಯ್ಕೆಯಾಗಿದ್ದಾರೆ. 2022ರ ವರ್ಗವು 71 ಆಸ್ಕರ್ ನಾಮನಿರ್ದೇಶಿತರನ್ನು ಮತ್ತು 15 ವಿಜೇತರನ್ನು ಒಳಗೊಂಡಿರುತ್ತದೆ. ಅಂದಹಾಗೆ ಆಸ್ಕರ್ ಸಮಿತಿಗೆ ಸೇರಿದ ಮೊದಲ ತಮಿಳು ನಟ ಸೂರ್ಯ ಆಗಿದ್ದು ಇದು ನಿಜಕ್ಕೂ ತಮಿಳು ದಕ್ಷಿಣ ಭಾರತೀಯ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಇನ್ನು 2021ರ ಆಸ್ಕರ್ ವಿಜೇತರಾದ ಅರಿಯಾನಾ ಡಿಬೋಸ್, ಟ್ರಾಯ್ ಕೋಟ್ಸೂರ್ ಮತ್ತು ನಿರ್ದೇಶಕರಿ ಸಿಯಾನ್ ಹೆಡರ್ ಅವರನ್ನು ಸಹ ಆಹ್ವಾನಿಸಲಾಗಿದೆ. 

ಆಹ್ವಾನಿತರು ಯಾವ ಶಾಖೆ ಎಂದು ಮೊದಲು ಆಯ್ಕೆಮಾಡಿಕೊಳ್ಳಬೇಕು ಮತ್ತು ಅದರ ಭಾಗವಾಗಬೇಕು. ನಿರ್ದೇಶಕರು, ಬರಹಗಾರರು ಸೇರಿದಂತೆ ಒಟ್ಟು 17 ಶಾಖೆಗಳಿವೆ ಎಂದು ವರದಿಯಾಗಿದೆ. ಇನ್ನು ಈ ವರ್ಷದ ಆಹ್ವಾನಿತರಲ್ಲಿ ಬಿಲ್ಲಿ ಎಲಿಶ್, ಜೆಸ್ಸಿ ಬಕ್ಲೆ, ಔಲ್ಗಾ ಮೆರೆಡಿಜ್, ಕೊಡಿ ಸ್ಮಿತ್, ಅನ್ಯಾ ಟೇಲರ್ ಜಾಯ್ ಸೇರಿದಂತೆ ಇನ್ನು ಅನೇಕರಿಗೆ ಆಹ್ವಾನ ಸಿಕ್ಕಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?