Jacqueline Fernandez Love Bite: ಆರೋಪಿ ಜೊತೆ ರೊಮ್ಯಾನ್ಸ್, ಜಾಕಿ ಕುತ್ತಿಗೆಯಲ್ಲಿ ಲವ್‌ ಬೈಟ್

Suvarna News   | Asianet News
Published : Jan 08, 2022, 04:42 PM ISTUpdated : Jan 08, 2022, 05:33 PM IST
Jacqueline Fernandez Love Bite: ಆರೋಪಿ ಜೊತೆ ರೊಮ್ಯಾನ್ಸ್, ಜಾಕಿ ಕುತ್ತಿಗೆಯಲ್ಲಿ ಲವ್‌ ಬೈಟ್

ಸಾರಾಂಶ

ವಿಕ್ರಾಂತ್ ರೋಣ ಚೆಲುವೆಯ ಲವ್ ಬೈಟ್ ರಿವೀಲ್ ವಂಚಕನ ಜೊತೆ ರೊಮ್ಯಾನ್ಸ್, ಕಿಸ್ಸಿಂಗ್, ಹಗ್ಗಿಂಗ್ ಬಾಲಿವುಡ್ ನಟಿಯ ಇಂಟಿಮೇಟ್ ಫೋಟೊಗಳು ವೈರಲ್

ಸುಕೇಶ್ ಚಂದ್ರಶೇಖರ್ ಜೊತೆ ಫ್ರೆಂಡ್‌ಶಿಪ್ ಮಾಡೋಕೆ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಯಾಕಾದರೂ ಮನಸಾಯಿತೋ ಇದೀಗ ಅದೇ ವಿಚಾರ ನಟಿಯನ್ನು ಬೆಂಬಿಡದೆ ಕಾಡುತ್ತಿದೆ. ಅಂತಿಂಥವನಲ್ಲ, ಬರೋಬ್ಬರಿ 200 ಕೋಟಿ ವಂಚನೆ ಮಾಡಿ ಜೈಲು ಸೇರಿದವನನ್ನೇ ನಂಬಿ ಆತನೊಂದಿಗೆ ರೊಮ್ಯಾನ್ಸ್ ಮಾಡಿ ಇದೀಗ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿಯ ಇಂಟಿಮೇಟ್ ಫೋಟೋಗಳು ವೈರಲ್ ಆಗುತ್ತಿದ್ದು, ಈ ಪ್ರಕರಣದಲ್ಲಿ ನಟಿಯ ಹಸೆರು ಹೆಚ್ಚು ಪ್ರಸ್ತುತವಾಗಿದೆ.

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಕೆಯ ಹೆಸರು ತಳುಕು ಹಾಕಿಕೊಂಡಿದ್ದರಿಂದ ಜಾಕ್ವೆಲಿನ್ ಫರ್ನಾಂಡೀಸ್ ಎಲ್ಲೆಡೆ ಸುದ್ದಿಯಾಗಿದ್ದಾರೆ. ಪ್ರಕರಣದ ಪ್ರಮುಖ ಶಂಕಿತ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ನಟಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈಗ ಜಾಕ್ವೆಲಿನ್ ಮತ್ತು ಸುಕೇಶ್ ಲೀಕ್ ವೈರಲ್ ಆಗಿದ್ದು, ಈ ಫೋಟೋ ಅವರ ಸಂಬಂಧದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುವಂತಿದೆ.

ಮುತ್ತಿನ ಹಿಂದಿದೆ ಕಾಸ್ಟ್ಲಿ ಗಿಫ್ಟ್ಸ್ ಕಥೆ, ನಟಿಗೆ ಸಿಕ್ಕಿದ್ದು 100 ಕೋಟಿಯ ಉಡುಗೊರೆ

ಜಾಕ್ವೆಲಿನ್ ಫೆರ್ನಾಂಡಿಸ್ ಇತ್ತೀಚೆಗೆ ವಿವಾದಾತ್ಮಕ ಕಾರಣಗಳಿಗಾಗಿ ಸುದ್ದಿ ಮಾಡುತ್ತಿದ್ದಾರೆ. ಈ ಹಿಂದೆ ಸುಖೇಶ್ ಚಂದ್ರಶೇಖರ್ ಜೊತೆಗಿನ ಆಕೆಯ ಮೆತ್ತಗಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಈಗ ಪ್ರತ್ಯೇಕವಾಗಿ ನಟಿ ಮತ್ತು ಸುರೇಶ್ ಅವರ ಹೊಸ ಲವ್ ಸೆಲ್ಫಿ ಎಲ್ಲೆಡೆ ಓಡಾಡುತ್ತಿದೆ. ಫೋಟೋದಲ್ಲಿ, ಜಾಕ್ವೆಲಿನ್ ಕುತ್ತಿಗೆಯಲ್ಲಿ ಲವ್ ಬೈಟ್ ಗೋಚರಿಸುತ್ತದೆ. ಸುಕೇಶ್ ಕೂಡ ಆಕೆಗೆ ಕಿಸ್ ನೀಡುತ್ತಿರುವುದು ಕಂಡುಬಂದಿದೆ.

ಜಾಕ್ವೆಲಿನ್ ಪ್ರಿಂಟೆಡ್ ಟಾಪ್ ಧರಿಸಿದ್ದು, ಕಾನ್ಮ್ಯಾನ್ ಸುಕೇಶ್ ತಿಳಿ ಗುಲಾಬಿ ಬಣ್ಣದ ಹೂಡಿ ಧರಿಸಿದ್ದಾರೆ. ಈ ಚಿತ್ರವನ್ನು ನೋಡಿದರೆ, ಅವರಿಬ್ಬರ ನಡುವೆ ಆತ್ಮೀಯ ಬಾಂಧವ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ. ಜಾಕ್ವೆಲಿನ್ ಈ ಹಿಂದೆ ಸುಕೇಶ್ ಜೊತೆ ಡೇಟಿಂಗ್ ಅನ್ನು ನಿರಾಕರಿಸಿದ್ದರು. ಆದಾರೂ ಈ ಫೊಟೋ ಮಾತ್ರ ನಟಿಯ ಹೇಳಿಕೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಜಾಕ್ವೆಲಿನ್ ತನ್ನ ಹೇಳಿಕೆಯಲ್ಲಿ ತಾನು ಈ ಪ್ರಕರಣದಲ್ಲಿ ಬಲಿಪಶು ಎಂದು ಹೇಳಿದ್ದಾರೆ. ಸುಕೇಶ್ ತನ್ನನ್ನು ದಕ್ಷಿಣ ಭಾರತದ ಮಾಧ್ಯಮ ಬ್ಯಾರನ್ ಎಂದು ಬೇರೆ ಹೆಸರಿನೊಂದಿಗೆ ಪರಿಚಯಿಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ತನಗಿಂತ 15 ವರ್ಷ ಹಿರಿಯ ನಿರ್ದೇಶಕನ ಪ್ರೀತಿಗೆ ಬಿದ್ದಳು ಸುಂದರಿ!

ಸುಖೇಶ್ ಈ ಹಿಂದೆ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದರು. ನಾನು ಜಾಕ್ವೆಲಿನ್ ಜೊತೆ ಸಂಬಂಧ ಹೊಂದಿದ್ದೆ. ಅದಕ್ಕಾಗಿಯೇ ನಾನು ಅವರಿಗೆ ಉಡುಗೊರೆಗಳನ್ನು ನೀಡಿದ್ದೇನೆ. ಯಾವುದೇ ರೀತಿಯ ವ್ಯವಹಾರ ನಡೆದಿರುವುದು ನನ್ನ ವೈಯಕ್ತಿಕ ಜೀವನ ಮತ್ತು ಉಡುಗೊರೆಗಳಲ್ಲಿ ಬಳಸಲಾದ ಯಾವುದೇ ಮೊತ್ತವು ಯಾವುದೇ ಆದಾಯದ ಭಾಗವಾಗಿಲ್ಲ. ನ್ಯಾಯಾಲಯವು ಈ ಪ್ರಕರಣಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಇಂಡಿಯಾ ಟುಡೇ ಮೂಲಕ ಹೇಳಿದ್ದಾರೆ.

ಜಾಕ್ವೆಲಿನ್ ಸುಕೇಶ್ ಅವರಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಉಡುಗೊರೆಗಳಲ್ಲಿ ಅರೇಬಿಯನ್ ಕುದುರೆ, ವಜ್ರದ ಕಿವಿಯೋಲೆಗಳು, ಐಷಾರಾಮಿ ಕಾರುಗಳು, ಒಂದು ಜೋಡಿ ಲೂಯಿ ವಿಟಾನ್ ಶೂಗಳು ಮತ್ತು ಹೆಚ್ಚಿನವು ಸೇರಿವೆ ಎಂದು ವರದಿಯಾಗಿದೆ. ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಜೋಡಿಯ ಫೋಟೋದಲ್ಲಿ ಜಾಕ್ವೆಲಿನ್ ಸುಕೇಶ್ ಅವರ ಕೆನ್ನೆಗೆ ಚುಂಬಿಸುತ್ತಿರುವುದನ್ನು ತೋರಿಸಿದೆ. ಇನ್ನೊಂದು ಫೊಟೋದಲ್ಲಿ ಅವಳ ಕೆನ್ನೆಗೆ ಆತ ಮುತ್ತಿಡುವುದನ್ನು ತೋರಿಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?