ವಂಚಕ ಸುಕೇಶ್ ಚಂದ್ರಶೇಖರ್ನಿಂದ ದುಬಾರಿ ಗಿಫ್ಟ್ ಪಡೆದು ಈಗ ಸಂಕಷ್ಟಕ್ಕೆ ಸಿಲುಕಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಲವ್ ಲೆಟರ್ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Monet Laundering case) ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹಾಗೂ ಆತನಿಂದ ಐಷಾರಾಮಿ ಉಡುಗೊರೆ ಪಡೆದು ತಗ್ಲಾಕ್ಕೊಂಡಿರೋ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೇಸ್ ಇನ್ನೂ ಮುಗಿದಿಲ್ಲ. ನೂರಾರು ಕೋಟಿ ಆಸ್ತಿ ಇದ್ದರೂ, ಮತ್ತಷ್ಟು ವೈಭೋಗ ಜೀವನಕ್ಕಾಗಿ ಸುಕೇಶ್ನ ಮೋಹದ ಬಲೆಗೆ ಬಿದ್ದು, ಈಗ ಕೋರ್ಟ್ ಅಲೀಯುವಂತಾಗಿದೆ ಜಾಕ್ವೆಲಿನ್. ಕೋಟಿ ಕೋಟಿ ಬೆಲೆ ಬಾಳುವ ವಜ್ರಾಭರಣಗಳು ಸೇರಿದಂತೆ ಈಕೆ ಪಡೆದಿರುವ ಉಡುಗೊರೆಗೆ ಲೆಕ್ಕವೇ ಇಲ್ಲ. ನಂತರ ಯಾವಾಗ ಸುಕೇಶ್ ಜೈಲು ಸೇರಿದನೋ, ಅವನ ಹಿಂದೆ ಜಾಕ್ವೆಲಿನ್ ಹೆಸರೂ ಕೇಳಿಬಂದಿದ್ದು, ಇವರ ವಿರುದ್ಧವೂ ದೂರು ದಾಖಲಾಗಿದೆ. ಸುಕೇಶ್ ಜೈಲಿನಲ್ಲಿ ಇದ್ದರೂ, ಇವರ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇರುವ ಕಾರಣ, ಅಕ್ರಮ ಕೇಸ್ನಲ್ಲಿ ಜಾಕ್ವೆಲಿನ್ (Jacqueline Fernandez) ಹೆಸರು ಮತ್ತಷ್ಟು ಬಲಗೊಳ್ಳುತ್ತಲಿದೆ.
ಈ ಮಧ್ಯೆಯೇ ಈ ಕೇಸ್ಗೂ ತಮಗೂ ಸಂಬಂಧ ಇಲ್ಲ ಎಂದು ನಟಿ ಇದಾಗಲೇ ಕೋರ್ಟ್ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಈಗ ಸುಕೇಶ್ ಜೈಲಿನಿಂದ ಬರೆಯುತ್ತಿರುವ ಲವ್ ಲೆಟರ್ಗಳು ನಟಿಯನ್ನು ಇನ್ನಷ್ಟು ಚಿಂತೆಗೀಡು ಮಾಡುತ್ತಿದೆ. ಈಗ ಲವ್ ಲೆಟ್ ವಿರುದ್ಧ ನಟಿ, ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸುಕೇಶ್ ಚಂದ್ರಶೇಖರ್ ನ್ಯಾಯಾಂಗ ಬಂಧನದಲ್ಲಿದ್ದು ಅವರಿಂದ ತಮಗೆ ಯಾವುದೇ ಪತ್ರಗಳನ್ನು ನೀಡದಂತೆ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ ಮತ್ತು ಮಂಡೋಲಿ ಜೈಲಿನ ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶಿಸುವಂತೆ ಕೋರಿದ್ದಾರೆ ಜಾಕ್ವೆಲಿನ್. ಸುಕೇಶ್ ಜೈಲಿನಲ್ಲಿ ಇದ್ದ ದಿನದಿಂದಲೂ ಆಗಾಗ್ಗೆ ಜಾಕ್ವೆಲಿನ್ಗೆ ಪತ್ರ ಬರೆಯುತ್ತಲೇ ಇದ್ದಾನೆ. ಪ್ರೇಮಿಗಳ ದಿನಕ್ಕೆ ಪತ್ರ ಬರೆದಿದ್ದ ಸುಕೇಶ್, ನಂತರ ಮೇಲಿಂದ ಮೇಲೆ ಜಾಕ್ವೆಲಿನ್ಗೆ ಲವ್ ಲೆಟರ್ ಬರೆಯುವುದು ಮುಂದುವರೆದಿದೆ. ಸಾಲದು ಎಂಬುದಕ್ಕೆ ನವರಾತ್ರಿಯ ಸಮಯದಲ್ಲಿ ತನ್ನ ಪ್ರಿಯತಮೆಗಾಗಿ ಸುಕೇಶ್ ಜೈಲಿನಲ್ಲಿಯೇ ಉಪವಾಸ ಮಾಡುವುದಾಗಿಯೂ ಹೇಳಿದ್ದ. ಇದೇ ಟ್ರೂ ಲವ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
ವೈಭೋಗ ಜೀವನದ ದುರಾಸೆಗೆ ಬಿದ್ದು ವಂಚಕನ ಬಲೆಗೆ: ತನ್ನ ತಪ್ಪಿಲ್ಲವೆಂದು ಕೋರ್ಟ್‌ಗೆ ರಾ ರಾ ರಕ್ಕಮ್ಮ ಬೆಡಗಿ!
ಇದೇ 13ನೇ ತಾರೀಖು ಇನ್ನೊಂದು ಪತ್ರ ಬರೆದಿದ್ದ ಸುಕೇಶ್, ಇದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಎಂದಿದ್ದ. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದ. ನಿನ್ನ ವಿಚಾರದಲ್ಲಿ ನಾನೆಷ್ಟು ಖುಷಿಯಾಗಿದ್ದೇನೆ ಎಂಬುದರ ಬಗ್ಗೆ ನಿನಗೆ ತಿಳಿದಿರಲಾರದು, ನಿಜವಾಗಿಯೂ ಭಾರತದ ಸಿನಿಮೋದ್ಯಮ ಹೊಂದಿರುವ ಒಬ್ಬ ಶ್ರೇಷ್ಠ ನಟಿ ನೀನು. ಪ್ರಶಸ್ತಿ ಸಮಾರಂಭದಲ್ಲಿ ನೀನು ಧರಿಸಿದ್ದ ಬಿಳಿ ಬಣ್ಣದ ಗವನ್‌ನಲ್ಲಿ ಬಹಳ ಸುಂದರವಾಗಿ ನೀನು ಕಂಗೊಳಿಸುತ್ತಿದ್ದೆ. ಬೇಬಿ ನಾನು ಮತ್ತೆ ಮತ್ತೆ ನಿನ್ನ ನೆನಪುಗಳಲ್ಲಿ ಸಿಲುಕಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿತ್ತು. ಹೀಗೆ ಈತ ಪತ್ರ ಬರೆದ ಸಂದರ್ಭದಲ್ಲಿ ಅದು ಮೀಡಿಯಾಗಳಲ್ಲಿ ಬಿತ್ತರವಾಗುತ್ತಿದ್ದು, ಇದು ನನಗೆ ಆತಂಕ ತರುತ್ತಿದೆ ಎಂದು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ನಟಿ ಹೇಳಿದ್ದಾರೆ. ಈ ರೀತಿಯ ಸುದ್ದಿಗಳು ತಮಗೆ ಕಿರುಕುಳ ಉಂಟು ಮಾಡುತ್ತಿದೆ ಹಾಗೂ ತಮ್ಮ ಸುರಕ್ಷತೆ ಹಾಗೂ ಯೋಗಕ್ಷೇಮದ ಮೇಲೆ ಗಾಢವಾಗಿ ಪರಿಣಾಮ ಬೀರುತ್ತದೆ ಎಂದಿದ್ದಾರೆ.
2019 ರ ಅಕ್ಟೋಬರ್‌ನಲ್ಲಿ ಬಂಧನಕ್ಕೊಳಗಾಗಿದ್ದ ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರನ್ನು ವಂಚನೆ ಮತ್ತು ಸುಲಿಗೆ ಮಾಡಿದ ಆರೋಪ ಹೊತ್ತಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ದಾಖಲಿಸಿದ ಎಫ್‌ಐಆರ್ ಆಧರಿಸಿ ಈ ಜಾರಿ ನಿರ್ದೇಶನಾಲಯ ಪ್ರಕರಣವನ್ನು ಆಧರಿಸಿದೆ. ರೆಲಿಗೇರ್ ಫಿನ್‌ವೆಸ್ಟ್ ಲಿಮಿಟೆಡ್‌ನಲ್ಲಿ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದ ಪ್ರಕರಣ. ಸುಕೇಶ್ ಚಂದ್ರಶೇಖರ್ ಮತ್ತು ಅವನ ಸಹಚರರು ಸರ್ಕಾರಿ ಅಧಿಕಾರಿಗಳಂತೆ ನಟಿಸಿ ಪತಿಗೆ ಜಾಮೀನು ನೀಡುವುದಾಗಿ ಭರವಸೆ ನೀಡಿ ಅದಿತಿಯಿಂದ ಹಣ ಪಡೆದಿದ್ದಾರೆ ಎನ್ನಲಾಗಿದೆ. ಚಂದ್ರಶೇಖರ್ ಅವರು ರೋಹಿಣಿ ಜೈಲಿನಲ್ಲಿದ್ದಾಗ ಕೇಂದ್ರ ಸರ್ಕಾರದ ಅಧಿಕಾರಿಯಂತೆ ಸ್ಪೂಫ್ ಕಾಲ್ ಮೂಲಕ ಹಣ ವರ್ಗಾವಣೆ ಮಾಡಲು ಅದಿತಿಗೆ ಮನವೊಲಿಸಿದರು ಮತ್ತು ಅವರ ಪತಿಗೆ ಜಾಮೀನು ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಅದೇ ಇನ್ನೊಂದೆಡೆ ಈತ ಕೊಟ್ಟ ಕೋಟಿ ಕೋಟಿ ಬೆಲೆ ಬಾಳುವ ಉಡುಗೊರೆಯನ್ನು ಪಡೆದುಕೊಂಡು ಈತನಿಗೆ ಅತೀ ಹತ್ತಿರವಾಗಿದ್ದ ನಟಿಯರ ಪೈಕಿ ಜಾಕ್ವೆಲಿನ್ ಕೂಡ ಒಬ್ಬರು. ಇವರಿಬ್ಬರ ಖಾಸಗಿ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಇವರಿಗೂ ಸಂಕಷ್ಟ ಸುತ್ತಿಕೊಂಡಿದೆ.
ಇಬ್ಬರು ಪತ್ನಿಯರ ಜೊತೆ ಮಗ ಸೋಹೈಲ್ ಬರ್ತ್ಡೇಗೆ ಬಂದ ಸಲ್ಮಾನ್ ಖಾನ್ ಅಪ್ಪ! ಸಲ್ಲು ಭಾಯಿ ಗರಂ ಆಗಿದ್ದೇಕೆ?