ರಾಮ್​ಗೂ ನನಗೂ ಅದೇನೋ ನಂಟು: ಬರಿಗಾಲಿನಲ್ಲೇ ಅಯೋಧ್ಯೆಗೆ ಬಂದು- ಹೋದ ನಟ ಜಾಕಿ ಶ್ರಾಫ್​

Published : Jan 23, 2024, 10:28 PM IST
ರಾಮ್​ಗೂ ನನಗೂ ಅದೇನೋ ನಂಟು: ಬರಿಗಾಲಿನಲ್ಲೇ ಅಯೋಧ್ಯೆಗೆ ಬಂದು- ಹೋದ ನಟ ಜಾಕಿ ಶ್ರಾಫ್​

ಸಾರಾಂಶ

ಬರಿಗಾಲಿನಲ್ಲೇ ಅಯೋಧ್ಯೆಗೆ ಬಂದು ಹೋದ ಬಾಲಿವುಡ್​ ನಟ ಜಾಕಿ ಶ್ರಾಫ್​: ಶ್ರೀರಾಮನ ಕುರಿತು ಹೇಳಿದ್ದೇನು? ವಿಡಿಯೋ ವೈರಲ್  

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಯಿತು. ವಿವಿಧ ಕ್ಷೇತ್ರಗಳ, ದೇಶ-ವಿದೇಶಗಳ ಗಣ್ಯಾತಿಗಣ್ಯರು ಖುದ್ದು ಅಯೋಧ್ಯೆಯಲ್ಲಿದ್ದು ಈ ಅಭೂತಪೂರ್ವ ಕ್ಷಣವನ್ನು ಕಣ್ತುಂಬಿಸಿಕೊಂಡರು. ಕೆಲವರು ಪಾದಯಾತ್ರೆ ಮಾಡಿಕೊಂಡು, ಇನ್ನು ಕೆಲವರು ಬರಿಗಾಲಿನಲ್ಲಿ, ಕೆಲವರು ಗಾಲಿಖುರ್ಚಿಯಲ್ಲಿಯೇ, ಮತ್ತೆ ಕೆಲವರು ಉಪವಾಸ ಕೈಗೊಂಡು... ಹೀಗೆ ಶ್ರೀರಾಮನಿಗಾಗಿ ತಮ್ಮದೇ ಆದ ರೀತಿಯಲ್ಲಿ ಸಮರ್ಪಣಾ ಭಾವದಲ್ಲಿ ಈ ಕಾರ್ಯದಲ್ಲಿ ಪಾಲ್ಗೊಂಡರು.  ಸಿನಿಮಾ ಜಗತ್ತಿನ  ದೊಡ್ಡ ದಂಡೇ ಅಯೋಧ್ಯೆಯಲ್ಲಿ ನೆರೆದಿತ್ತು. ಅಂಥವರಲ್ಲಿ ಒಬ್ಬರು ಜಾಕಿ ಶ್ರಾಫ್​.

 ರಾಮಲಲ್ಲಾ ಪ್ರಾಣಪ್ರತಿಷ್ಠಪನಾ ಕಾರ್ಯದ ಹಿನ್ನೆಲೆಯಲ್ಲಿ   ಪ್ರಧಾನಿ ನರೇಂದ್ರ ಮೋದಿಯವರು 11 ದಿನಗಳ ಉಪವಾಸವನ್ನೂ ಕೈಗೊಂಡಿದ್ದರು. ಇದಾದ ಬಳಿಕ,  ತಮ್ಮ ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿನ ದೇಗುಲಗಳ ಸ್ವಚ್ಛತೆಗೆ ಪ್ರಧಾನಿಯವರು  ಕರೆ ನೀಡಿದ್ದರು. ಖುದ್ದು ದೇಗುಲದ ಆವರಣವನ್ನು ಶುಚಿಗೊಳಿಸುವ ಮೂಲಕ ಪ್ರಧಾನಿಯವರು ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿ ದೇಗುಲಗಳ ಆವರಣವನ್ನು ಶುಚಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಯ ಮೇರೆಗೆ  ಬಾಲಿವುಡ್​ ನಟ ಜಾಕಿ ಶ್ರಾಫ್​ ಅವರು  ಮುಂಬೈನ ಬಹು ಪುರಾತನ ಶ್ರೀರಾಮನ ದೇಗುಲದ ಶುಚಿ ಮಾಡಿದ್ದರು.  ಇದರ ವಿಡಿಯೋ ವೈರಲ್​ ಆಗಿತ್ತು. ರಾಮ ಮಂದಿರದ ಮೆಟ್ಟಿಲುಗಳನ್ನು ಶ್ರದ್ಧೆಯಿಂದ ಉಜ್ಜಿ ಉಜ್ಜಿ ತೊಳೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದರಲ್ಲಿ ನಟ ಅತ್ಯಂತ ಶ್ರದ್ಧೆಯಿಂದ ಪ್ರತಿ ಮೆಟ್ಟಿಲುಗಳನ್ನು ಬ್ರಷ್‌ನಿಂದ ಉಜ್ಜಿ ಉಜ್ಜಿ ತೊಳೆಯುವುದನ್ನು ನೋಡಬಹುದು.  ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ದೇಗುಲದ ಆವರಣವನ್ನು ತಿಕ್ಕಿತಿಕ್ಕಿ ತೊಳೆದ ನಟ ಜಾಕಿ ಶ್ರಾಫ್​
 
ಇದೀಗ ನಟ ಜಾಕಿ ಶ್ರಾಫ್​, ಅಯೋಧ್ಯೆಗೆ ಬರಿಗಾಲಿನಿಂದ ಹೋಗಿ ಬಂದಿದ್ದಾರೆ. ಬರುವಾಗ ಶ್ರೀರಾಮನ ಮೂರ್ತಿಯನ್ನು ತಂದಿದ್ದಾರೆ. ಅಸಲಿಗೆ ಈ ವಿಷಯ ಬೆಳಕಿಗೆ ಬರುತ್ತಲೇ ಇರಲಿಲ್ಲ. ಆದರೆ. ನಟ ವಿವೇಕ್​ ಒಬೆರಾಯ್​ ಅವರು ಇದನ್ನು ಗಮನಿಸಿ ತಮ್ಮ ಸೋಷಿಯಲ್​  ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅವರು ಕೂಡ ಅಯೋಧ್ಯೆಗೆ ಹೋಗಿದ್ದರು. ವಾಪಸಾಗುವಾಗ ಇಬ್ಬರೂ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ. ಆಗ  ಶೂ ಹಾಕಿಕೊಳ್ಳದೆ ಬಂದಿದ್ದೀರಾ ಎಂದು ಜಾಕಿ ಶ್ರಾಫ್​ ಅವರನ್ನು ಕೇಳಿದಾಗ ನಟ,  ನಕ್ಕು  ರಾಮನ ಭೂಮಿಗೆ ಬರಲು ಶೂ ಬೇಕಿಲ್ಲ ಎಂದಿದ್ದಾರೆ.

  ಅಯೋಧ್ಯೆಯಲ್ಲಿ ಜಾಕಿ ಶ್ರಾಫ್ ಅವರಿಗೆ ರಾಮನ ವಿಗ್ರಹ ನೀಡಿ ಗೌರವಿಸಲಾಗಿದೆ.  ಕೈಯಲ್ಲಿ ರಾಮನನ್ನು ಹಿಡಿದು ಜೈ ಶ್ರೀರಾಮ್ ಎಂದು ಜಾಕಿ ಕೂಗಿದರು.  ನನಗೆ ರಾಮ ಲಲ್ಲಾ ಅವರ ಆಶೀರ್ವಾದ ಸಿಕ್ಕಿದೆ. ನನಗೆ ಹೆಮ್ಮೆ ಅನಿಸುತ್ತಿದೆ ಎಂದರು. ಅಷ್ಟಕ್ಕೂ ಜಾಕಿ ಶ್ರಾಫ್​ಗೂ ರಾಮಂಗೂ ಏನೋ ನಂಟಂತೆ. ಏಕೆಂದರೆ ಸಿನಿಮಾಗಳಲ್ಲಿ ಹೆಚ್ಚಾಗಿ ಇನ್ಸ್​ಪೆಕ್ಟರ್ ಪಾತ್ರ ಸಿಕ್ಕಾಗಲೆಲ್ಲಾ ತಮ್ಮ ಹೆಸರು ಕಾಕತಾಳೀಯ ಎಂಬಂತೆ ರಾಮ್​ ಆಗಿರುತ್ತಿತ್ತು. ಇದು ನನಗೆ, ರಾಮ್​ಗೆ ಇರುವ ನಂಟು ಎಂದಿದ್ದಾರೆ  ನಟ. 

ಬಾಲರಾಮನ ಪ್ರಾಣಪ್ರತಿಷ್ಠೆಯಾಗ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ನಟಿ ಕಂಗನಾ ರಣಾವತ್​: ವಿಡಿಯೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?