ನಟ ಸೋನು ಸೂದ್‌ನಿಂದ 20 ಕೋಟಿ ಮೌಲ್ಯದ ತೆರಿಗೆ ವಂಚನೆ

Published : Sep 18, 2021, 02:29 PM ISTUpdated : Sep 18, 2021, 02:49 PM IST
ನಟ ಸೋನು ಸೂದ್‌ನಿಂದ 20 ಕೋಟಿ ಮೌಲ್ಯದ ತೆರಿಗೆ ವಂಚನೆ

ಸಾರಾಂಶ

ಮೂರನೇ ದಿನವೂ ಸೋನು ಸೂದ್ ಮನೆಯಲ್ಲಿ ಐಟಿ ದಾಳಿ 20 ಕೋಟಿ ಮೌಲ್ಯದ ತೆರಿಗೆ ವಂಚಿಸಿದ್ರಾ ಸೂದ್ ?

ನಟ ಸೋನು ಸೂದ್ ಮತ್ತು ಆತನ ಸಹಚರರು ₹ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಇಲಾಖೆ ನಟನಿಗೆ ಸಂಬಂಧಿಸಿದ ಮುಂಬೈ ನಿವಾಸ ಸೇರಿದಂತೆ ಹಲವಾರು ನಿವೇಶನಗಳನ್ನು ಅವರ ಮೂರು ದಿನಗಳವರೆಗೆ ಪರಿಶೀಲಿಸಿದೆ.

ಸತತ ಮೂರು ದಿನಗಳು ನಡೆದ ರೈಡ್ ನಂತರ ಸೂದ್ ಮತ್ತು ಆತನ ಸಹವರ್ತಿಗಳು ಹೂಡಿಕೆಗಳನ್ನು ಮಾಡಲು ಮತ್ತು ಆಸ್ತಿಗಳನ್ನು ಪಡೆದುಕೊಳ್ಳಲು ನಕಲಿ ಸಾಲ ಬಳದಿದ್ದಾರೆ ಎಂದು ಇಲಾಖೆ ಹೇಳಿದೆ.

ಬಾಲಿವುಡ್ ನಟ ಸೋನು ಸೂದ್ ಮತ್ತು ನಟನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಎರಡು ದಿನಗಳ ದಾಳಿಯ ನಂತರ, ಆದಾಯ ತೆರಿಗೆ ಇಲಾಖೆಯು ಶನಿವಾರ ಸೂದ್ ಮತ್ತು ಆತನ ಸಹಚರರಿಂದ 20 ಕೋಟಿ ಮೌಲ್ಯದ ತೆರಿಗೆ ವಂಚನೆಯನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದೆ.

ಸೋನು ಸೂದ್ ಮೇಲೆ ಐಟಿ ಕಣ್ಣು.. ಆರು ಸ್ಥಳಗಳ ಮೇಲೆ ನಿಗಾ!

ಇಲಾಖೆಯು ಮುಂಬೈನ ಸೂದ್‌ ಅವರ ವಿವಿಧ ಸ್ಥಳದಲ್ಲಿ ಕಾರ್ಯಾಚರಣೆಯನ್ನು ನಡೆಸಿತ್ತು. ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ ಮತ್ತು ಗುರುಗ್ರಾಮಗಳಲ್ಲಿ ಒಟ್ಟು 28 ನಿವೇಶನಗಳನ್ನು ಎರಡು ದಿನಗಳಲ್ಲಿ ಶೋಧಿಸಲಾಯಿತು. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೇಳಿಕೆಯಲ್ಲಿ ನಟ ಮತ್ತು ಆತನ ಸಹಚರರ ಆವರಣದಲ್ಲಿ ಶೋಧದ ಸಮಯದಲ್ಲಿ, ತೆರಿಗೆ ವಂಚನೆಗೆ ಸಂಬಂಧಿಸಿದ ಅಪರಾಧ ಸಾಕ್ಷ್ಯಗಳು ಸಿಕ್ಕಿವೆ" ಎಂದು ಹೇಳಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?