* ವೈಷ್ಣೋ ದೇವಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದ ಶಿಲ್ಪಾ ಶೆಟ್ಟಿ
* ಪತಿ ರಾಜ್ ಕುಂದ್ರಾ ಪೋರ್ನ್ ತಯಾರಿಕೆ ಕೇಸ್ ನಲ್ಲಿ ಅರೆಸ್ಟ್
* ರಾಜ್ ಕುಂದ್ರಾ ವಿರುದ್ಧ 1500 ಪೇಜ್ ಚಾರ್ಜ್ ಶೀಟ್ ಸಲ್ಲಿಕೆ
ನವದೆಹಲಿ(ಸೆ. 16) ಅತ್ತ ಗಂಡ ಜೈಲು ಸೇರಿದ್ದರೆ ಇತ್ತ ಶಿಲ್ಪಾ ಶೆಟ್ಟಿ ದೇವರ ಮೊರೆ ಹೋಗಿದ್ದಾರೆ. ಜಮ್ಮು ಕಾಶ್ಮೀರದ ವೈಷ್ಣೋ ದೇವಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಜಮ್ಮುವಿನ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟದಲ್ಲಿರುವ ಯಾತ್ರಾಸ್ಥಳ ವೈಷ್ಣೋದೇವಿ ಗುಹೆಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಪತಿ ಮೇಲಿನ ಕೇಸ್ ನಲ್ಲಿ ಪತ್ನಿ ಶಿಲ್ಪಾಳೇ ಸಾಕ್ಷಿ
ಪತಿ ರಾಜ್ ಕುಂದ್ರಾ ವಿರುದ್ಧ 1500 ಪೇಜ್ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪೋರ್ನ್ ಚಿತ್ರ ತಯಾರಿಕೆಯಲ್ಲಿ ಕುಂದ್ರಾ ತೊಡಗಿದ್ದರು ಎಂಬುದು ಪ್ರಮುಖ ಆರೋಪ. ಜುಲೈನಲ್ಲಿಯೇ ಕುಂದ್ರಾ ಬಂಧನವಾಗಿದೆ. ವಿವಿಧ ಆಪ್ ಗಳ ಮೂಲಕ ರಾಜ್ ಕುಂದ್ರಾ ನಟಿಯರನ್ನು ಬಳಸಿಕೊಂಡು ಅಶ್ಲೀಲ ಚಿತ್ರ ಬಿಡುಗಡೆ ಮಾಡುತ್ತಿದ್ದರು. ಲೈವ್ ಟೆಲಿಕಾಸ್ಟ್ ಮಾಡುವ ಮೂಲಕ ಅಪಾರ ಹಣ ಸಂಪಾದನೆ ಮಾಡಿದ್ದರು ಎಂಬ ಆರೋಪ ಇದೆ.
ಪತಿಯ ಕೆಲಸದ ಬಗ್ಗೆ ನನಗೆ ಗೊತ್ತಿಲ್ಲ. ನಾಣು ನನ್ನ ಕೆಲಸದಲ್ಲಿ ಬ್ಯೂಸಿ ಇದ್ದೇನೆ ಎಂದು ಶಿಲ್ಪಾ ಹೇಳಿಕೊಂಡು ಬಂದಿದ್ದರು. ಶಿಲ್ಪಾ ಹೇಳಿಕೆಯನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂಬ ಮಾಹಿತಿ ಇದೆ.
Jammu & Kashmir: Actor Shilpa Shetty visited Mata Vaishno Devi Shrine in Katra, yesterday pic.twitter.com/imYSyvKJy1
— ANI (@ANI)