ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಮತ್ತು ಸೈರಾ ಬಾನು 29 ವರ್ಷಗಳ ದಾಂಪತ್ಯದಿಂದ ಬೇರ್ಪಟ್ಟಿದ್ದಾರೆ. ಅದೇ ದಿನ ಎಆರ್ ರೆಹಮಾನ್ ಅವರ ಮ್ಯೂಸಿಕ್ ಟೀಂನ ಕಲಾವಿದೆ ಮೋಹಿನಿ ಡೇ ಸಹ ಪತಿಯಿಂದ ಪ್ರತ್ಯೇಕವಾಗಿರುವುದಾಗಿ ಘೋಷಿಸಿದ್ದಾರೆ.
ಚೆನ್ನೈ: ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ತಮ್ಮ 29 ವರ್ಷದ ದಾಂಪತ್ಯ ಜೀವನದಿಂದ ಹೊರ ಬಂದಿದ್ದಾರೆ. ಎಆರ್ ರೆಹಮಾನ್ ಮತ್ತು ಸೈರಾ ಬಾನು ಮಂಗಳವಾರ ಸಂಜೆ ತಾವು ವಿಚ್ಚೇದನ ಪಡೆದುಕೊಂಡಿರೋದನ್ನು ಘೋಷಣೆ ಮಾಡಿದ್ದರು. ಈ ಘೋಷಣೆ ಬೆನ್ನಲ್ಲೇ ಎಆರ್ ರೆಹಮಾನ್ ಅವರ ಮ್ಯೂಸಿಕ್ ಟೀಂನಲ್ಲಿರೋ ಕಲಾವಿದೆ ಮೋಹಿನಿ ಡೇ ಸಹ ಅದೇ ದಿನ ಪತಿಯಿಂದ ಪ್ರತ್ಯೇಕವಾಗಿರುವ ಬಗ್ಗೆ ಹೇಳಿಕೊಂಡಿದ್ದರು. ಮೋಹಿನಿ ಡೇ ಮತ್ತು ಎಆರ್ ರೆಹಮಾನ್ ಡಿವೋರ್ಸ್ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್‌ಗೆ ಗುರಿಯಾಗಿತ್ತು. ಬೇರೆ ಬೇರೆ ಶೀರ್ಷಿಕೆಯಡಿ ರೆಹಮಾನ್ ಮತ್ತು ಮೋಹಿನಿ ಡೇ ಅವರ ಫೋಟೋಗಳನ್ನು ಟ್ರೋಲ್ ಮಾಡಲಾಗಿತ್ತು. ಈ ಟ್ರೋಲ್ ಕುರಿತು ಎಆರ್ ರೆಹಮಾನ್ ಮತ್ತು ಸಾಯಿರಾ ಬಾನು ಅವರ ವಕೀಲರು ಪ್ರತಿಕ್ರಿಯಿಸಿದ್ದಾರೆ.
ಒಂದೇ ದಿನ ಎರಡು ಡಿವೋರ್ಸ್ ವಿಷಯ ಹೊರಗೆ ಬಂದಿರೋದರಿಂದ ಇಬ್ಬರಿಗೆ ಏನಾದ್ರೂ ಸಂಬಂಧ ಇದೆಯಾ ಅನ್ನೋ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದರು. ಈ ಅನುಮಾನಕ್ಕೆ ಸಾಯಿರಾ ಬಾನು ಮತ್ತು ಎಆರ್ ರೆಹಮಾನ್ ಅವರ ವಕೀಲರಾದ ವಂದನಾ ಶಾ ಪ್ರತಿಕ್ರಿಯೆ ನೀಡಿದ್ದಾರೆ. ರೆಹಮಾನ್ ಮತ್ತು ಸಾಯಿರಾ ವಿಚ್ಚೇದನಕ್ಕೂ ಮೋಹಿನಿ ಡೇ ಅವರಿಗೂ ಯಾವುದೇ ಸಂಬಂಧವಿಲ್ಲ. ಇದು ರೆಹಮಾನ್ ಮತ್ತು ಸಾಯಿರಾ ಅವರ ಒಮ್ಮತದ ನಿರ್ಧಾರವಾಗಿದ್ದು, ಈ ವಿಷಯವನ್ನು ಮಂಗಳವಾರ ಸಂಜೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅವರಿಬ್ಬರ ಸಂಬಂಧದಲ್ಲಿ ಭಾವನಾತ್ಮಕ ಒತ್ತಡವಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
undefined
ಯಾರು ಈ ಮೋಹಿನಿ ಡೇ?
ಪಶ್ಚಿಮ ಬಂಗಾಳದ ಕೋಲ್ಕತ್ತಾ ನಿವಾಸಿ ಮೋಹಿನಿ ಡೇ (29) ಗಾನ್ ಬಂಗಾಲ ವಿಂಡ್ ಆಫ್ ಚೇಂಜ್ ತಂಡದ ಸದಸ್ಯೆಯಾಗಿದ್ದು, ಬಾಸ್ ಪ್ಲೇಯರ್ ಅಗಿದ್ದಾರೆ. ಎಆರ್ ರೆಹಮಾನ್ ಜೊತೆಯಲ್ಲಿ 40 ಅಧಿಕ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮೋಹಿನಿ ನೀ ಭಾಗವಹಿಸಿದ್ದಾರೆ. ಮಂಗಳವಾರವೇ ಮೋಹಿನಿ ಡೇ ಇನ್‌ಸ್ಟಾಗ್ರಾಂನಲ್ಲಿ ವಿಚ್ಛೇದನದ ವಿಷಯವನ್ನು ಶೇರ್ ಮಾಡಿಕೊಂಡಿದ್ದರು. ಮೋಹಿನಿ ಡೇ ಪತಿ ಮಾರ್ಕ್ ಹ್ಯಾರ್ಟ್‌ಸಚ್ ಸಹ ಓರ್ವ ಸಂಗೀತ ಕಲಾವಿದರಾಗಿದ್ದು, ಇಬ್ಬರು ಜೊತೆಯಾಗಿ ಇನ್‌ಸ್ಟಾಗ್ರಾಂನಲ್ಲಿ ಡಿವೋರ್ಸ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಮೊಹಮ್ಮದ್ ಅಲಿಯಿಂದ AR ರೆಹಮಾನ್‌ವರೆಗೆ: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಸ್ಟಾರ್ ಸೆಲೆಬ್ರಿಟಿಗಳಿವರು!
ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಪ್ರೀತಿ ಸಿಗಬೇಕು ಎಂಬುವುದು ನಾವು ಬಯಸುತ್ತೇವೆ. ಎಲ್ಲರೂ ಬಯಸೋದು ಸಹ ಪ್ರೀತಿ. ನಮಗೆ ಬೆಂಬಲ ನೀಡಿದ್ದ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ. ನಮ್ಮ ಈ ನಿರ್ಧಾರವರನ್ನು ಎಲ್ಲರೂ ಗೌರವಿಸುತ್ತೀರಿ ಎಂದು ನಂಬಿದ್ದೇವೆ ಎಂದು ಮೋಹಿನಿ ಡೇ ಮತ್ತು ಮಾರ್ಕ್ ಹ್ಯಾರ್ಟ್‌ಸಚ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ನವೆಂಬರ್ 19 ರಂದು ಸಂಗೀತ ಮಾಂತ್ರಿಕ ಎಆರ್ ರೆಹಮಾನ್‌ಗೆ ಅವರ ಪತ್ನಿ ಸಾಯಿರಾ ಬಾನು ವಿಚ್ಛೇದನ ನೀಡಿದ್ದರು. ಮದುವೆಯಾಗಿ 29 ವರ್ಷಗಳ ಬಳಿಕ ದಾಂಪತ್ಯದಿಂದ ಬೇರ್ಪಡುವುದಾಗಿ ತಿಳಿಸಿದ್ದರು. 1995ರಲ್ಲಿ ವಿವಾಹವಾಗಿದ್ದ ಈ ಜೋಡಿಗೆ ಮೂರು ಮಕ್ಕಳಿದ್ದಾರೆ. ಸಂಬಂಧದಲ್ಲಿ ಭಾವನಾತ್ಮಕ ಒತ್ತಡವಿರೋ ಕಾರಣ ಬೇರೆಯಾಗಿದ್ದೇವೆ ಎಂದು ಸಾಯಿರಾ ಬಾನು ಮತ್ತು ಎಆರ್ ರೆಹಮಾನ್ ತಿಳಿಸಿದ್ದರು.
ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಎಆರ್ ರೆಹಮಾನ್ ಬಳಿಯಲ್ಲಿರೋ ಐಷಾರಾಮಿ ಕಾರ್ ಕಲೆಕ್ಷನ್ ಬಹಿರಂಗ