ಇನ್ ರಿಲೇಷನ್ ಶಿಪ್ ಎಂದ ವಿಜಯ್ ದೇವರಕೊಂಡ, ಕನ್ನಡ ನಟಿಯೊಂದಿಗೆ ನಂಟಾ?

Published : Nov 21, 2024, 11:57 AM IST
ಇನ್ ರಿಲೇಷನ್ ಶಿಪ್ ಎಂದ ವಿಜಯ್ ದೇವರಕೊಂಡ, ಕನ್ನಡ ನಟಿಯೊಂದಿಗೆ ನಂಟಾ?

ಸಾರಾಂಶ

ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ್ ದೇವರಕೊಂಡ ತಮ್ಮ ರಿಲೇಶನ್ಶಿಪ್ ಬಗ್ಗೆ ಮಾತನಾಡಿದ್ದಾರೆ.  ಪ್ರೀತಿ, ಮದುವೆ ಬಗ್ಗೆ ತಮ್ಮ ಅಭಿಪ್ರಾಯ ಹೇಳಿರುವ ಅವರು, ಸಹ ನಟಿ ಜೊತೆ ಡೇಟಿಂಗ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.   

ಸೌತ್ ಸ್ಟಾರ್ ವಿಜಯ್ ದೇವರಕೊಂಡ (South star Vijay Devarakonda) ಹೆಸರು ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ  (national crush actress Rashmika Mandanna )ಜೊತೆ ಬಹಳ ಹಿಂದಿನಿಂದಲೂ ತಳುಕು ಹಾಕಿಕೊಂಡಿದೆ. ಇವರಿಬ್ಬರೂ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಫ್ಯಾನ್ಸ್ ಕೂಡ ಈ ಜೋಡಿಯನ್ನು ಒಟ್ಟಿಗೆ ನೋಡಲು ಇಷ್ಟಪಡ್ತಾರೆ. ರಶ್ಮಿಕಾ ಜೊತೆಗಿನ ಸಂಬಂಧದ ವದಂತಿ ಮಧ್ಯೆ ವಿಜಯ್ ದೇವರಕೊಂಡ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ರಿಲೇಶನ್ಶಿಪ್ (Relationship) ನಲ್ಲಿರೋದನ್ನು ಅವರು ದೃಢಪಡಿಸಿದ್ದಾರೆ. ಇದನ್ನು ಕೇಳಿದ ಕೆಲ ಹುಡುಗಿಯರಿಗೆ ಹಾರ್ಟ್ ಬ್ರೇಕ್ ಆಗಿದೆ. 

ಕರ್ಲಿ ಟೇಲ್ಸ್ ಜೊತೆ ಪ್ರೀತಿ ಮತ್ತು ಮದುವೆ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ.  ತಾನು ಡೇಟಿಂಗ್ನಲ್ಲಿರೋದನ್ನು ಅವರು ಒಪ್ಪಿಕೊಂಡಿದ್ದಾರೆ. ಆದ್ರೆ ಹುಡುಗಿ ಯಾರು ಎಂಬುದನ್ನು ವಿಜಯ್ ದೇವರಕೊಂಡ ಬಾಯ್ಬಿಟ್ಟಿಲ್ಲ. 

ಪ್ರೀತಿ ಬಗ್ಗೆ ವಿಜಯ್ ಹೇಳಿದ್ದೇನು? : ಕರ್ಲಿ ಟೇಲ್ಸ್ ಜೊತೆ ಮಾತನಾಡ್ತಾ, ಯಾರಾದ್ರೂ ನಿಮ್ಮನ್ನು ಪ್ರೀತಿ ಮಾಡಿದ್ರೆ ನಿಮಗೆ ಹೇಗೆ ಅನ್ನಿಸುತ್ತೆ ಎಂಬುದು ನನ್ನ ಅನುಭವಕ್ಕೆ ಬಂದಿದೆ. ಹಾಗೆಯೇ ಯಾರನ್ನಾದ್ರೂ ನೀವು ಪ್ರೀತಿ ಮಾಡಿದ್ರೆ ಹೇಗಾಗುತ್ತೆ ಎಂಬುದೂ ನನಗೆ ಗೊತ್ತು ಎಂದಿದ್ದಾರೆ. ನಾನು ಬೇಷರತ್ತಾಗಿ ಪ್ರೀತಿ ಮಾಡುವುದಿಲ್ಲ. ಏಕೆಂದರೆ ನನ್ನ ಪ್ರೀತಿಯು ನಿರೀಕ್ಷೆಯಿಂದ ಬರತ್ತೆ ಎಂದಿದ್ದಾರೆ.

ಗಂಡನ ಗೈರು, ಅಪ್ಪನ ನೆನೆಯುತ್ತಾ ಮಗಳ ಹುಟ್ಟುಹಬ್ಬ ಆಚರಿಸಿದ ಐಶ್ವರ್ಯಾ ರೈ

ಸಹ ನಟಿ ಜೊತೆ ಡೇಟಿಂಗ್ : ಬೇಷರತ್ತಾದ ಪ್ರೀತಿಯನ್ನು ನಿರೀಕ್ಷಿಸುವುದು ಸರಿಯೇ ಎಂದು ನನಗೆ ತಿಳಿದಿಲ್ಲ ಎಂದಿರುವ ವಿಜಯ್ ದೇವರಕೊಂಡ,  ಮಾತುಕತೆ ವೇಳೆ, ನನ್ನ ಒಬ್ಬ ಸಹ ನಟಿಯಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನನಗೆ 35 ವರ್ಷ, ನಾನು ಒಬ್ಬಂಟಿಯಾಗಿರುತ್ತೇನೆ ಎಂದು ನೀವು ಭಾವಿಸುತ್ತೀರಾ? :  ಯಾರನ್ನಾದರೂ ಬಹಳ ಸಮಯದಿಂದ ತಿಳಿದುಕೊಂಡು ಸ್ನೇಹ ಬೆಳೆಸಿದ ನಂತರವೇ ನಾನು ಅವರಿಗೆ ಹತ್ತಿರವಾಗ್ತೇನೆ ಎಂದಿರುದ ವಿಜಯ್ ದೇವರಕೊಂಡ, ನಾನು ಡೇಟ್‌ಗೆ ಹೊರಗೆ ಹೋಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನೀವು ಈಗ ಡೇಟ್ ನಲ್ಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ, ನನಗೆ 35 ವರ್ಷವಾಗಿದೆ,  ನಾನು ಒಬ್ಬಂಟಿಯಾಗಿರುತ್ತೇನೆ ಎಂದು ನೀವು ಭಾವಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. 

ಮದುವೆ ಬಗ್ಗೆ ನಟನ ಅಭಿಪ್ರಾಯವೇನು? : ಮದುವೆಯ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ, ಮದುವೆ ಮಹಿಳೆಯರಿಗೆ ಸಾಕಷ್ಟು ಸವಾಲಿನ ಸಂಗತಿಯಾಗಿದೆ. ಮದುವೆ ಯಾರ ವೃತ್ತಿಗೂ ಅಡ್ಡಿಯಾಗಬಾರದು. ಮಹಿಳೆಯರಿಗೆ ಮದುವೆ ಕಷ್ಟ. ಇದು ನೀವು ಯಾವ ವೃತ್ತಿಯಲ್ಲಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ. 

ಕಾನೂನು ಸಂಕಷ್ಟಕ್ಕೆ ಸಿಲುಕಿದ ಅಮರನ್; ಇಂಜಿನಿಯರಿಗ್ ವಿದ್ಯಾರ್ಥಿ ನಿದ್ದೆ, ಓದಿಗೆ ತೊಂದರೆ

ವಿಜಯ್ ದೇವರಕೊಂಡ ಈ ಮಾತುಗಳನ್ನು ಕೇಳಿದ ಫ್ಯಾನ್ಸ್, ಹುಡುಗಿ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲದಲ್ಲಿದ್ದಾರೆ. ಬಹುತೇಕರು, ಅದು ರಶ್ಮಿಕಾ ಎನ್ನುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಿನಿಮಾ ಮೂಲಕ ಹತ್ತಿರವಾಗಿದ್ದಾರೆ. ಈ ಬಾರಿ ರಶ್ಮಿಕಾ, ವಿಜಯ್ ದೇವರಕೊಂಡ ಮನೆಯಲ್ಲಿಯೇ ದೀಪಾವಳಿ ಆಚರಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ದೇವರಕೊಂಡ ಮನೆಯಲ್ಲಿ ತೆಗೆದ ಫೋಟೋ ಫೋಸ್ಟ್ ಮಾಡಿದ್ದ ರಶ್ಮಿಕಾ, ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡಗೆ ಫೋಟೋ ಕ್ರೆಡಿಟ್ ನೀಡಿದ್ದರು.  ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ 2  ಸಿನಿಮಾ ಮಾಡಿದ್ದಾರೆ. 2018ರ ಗೀತಾ ಗೋವಿಂದಂ ಹಾಗೂ 2019ರಲ್ಲಿ ಡಿಯರ್ ಕಾಮ್ರೇಡ್. ಗೀತಾ ಗೋವಿಂದಂ ಚಿತ್ರದ ಬಳಿಕ ರಶ್ಮಿಕಾ ಹಾಗೂ ದೇವರಕೊಂಡ ಆತ್ಮೀಯರಾಗಿದ್ದಾರೆ ಎಂಬ ಸುದ್ದಿ ಹಿಂದಿನಿಂದಲೂ ಇದೆ. ಮೂರ್ನಾಲ್ಕು ವರ್ಷಗಳಿಂದ ಇಬ್ಬರು ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿಗೆ, ಈಗ ವಿಜಯ್ ದೇವರಕೊಂಡ ಹೇಳಿಕೆ ರೆಕ್ಕೆ ನೀಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?