
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ನಟಿ ಕಂಗನಾ ರಣಾವತ್ ನಡುವಿನ ವಾಕ್ಸಮರ ಮುಂದುವರಿಯುತ್ತಲೇ ಇದೆ. ಈ ನಡುವೆ ಕಂಗನಾ ಟ್ವೀಟ್ ಮಾಡಿದ್ದು, ಈಗಿನ ಕಾಂಗ್ರೆಸ್ ಪರಿಸ್ಥಿತಿಗೆ ಶಿವಸೇನೆ ಕಾರಣವೇ ಎಂದು ಪ್ರಶ್ನಿಸಿದ್ದಾರೆ.
ಬಾಲಾ ಸಾಬ್ ಥ್ಯಾಕರೆ ನನ್ನ ನೆಚ್ಚಿನ ವ್ಯಕ್ತಿಯಲ್ಲೊಬ್ಬರು. ಒಂದು ದಿನ ಶಿವಸೇನೆ ಘಟಬಂದನ್ ಮಾಡಿಕೊಂಡು ಕಾಂಗ್ರೆಸ್ ಆಗಬಹುದೆಂಬ ಭಯ ಅವರಿಗಿತ್ತು. ಈಗ ಕಾಂಗ್ರೆಸ್ ಪಕ್ಷದ ಪರಿಸ್ಥತಿಯ ಬಗ್ಗೆ ಅಂದೇ ಊಹಿಸಿದ್ದರಾ ಬಾಲಾ ಸಾಹೇಬ್ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಶಿವಸೇನೆ ಈಗ ಸೋನಿಯಾ ಸೇನೆ: ಉದ್ಧವ್ ವಿರುದ್ಧ ಕಂಗನಾ ಗರಂ
ನಾನೊಬ್ಬ ಮಹಿಳೆಯಾಗಿ ನನ್ನನ್ನು ನಿಮ್ಮ ಸರ್ಕಾರ ಈ ರೀತಿ ನಡಿಸಿಕೊಂಡ ಬಗ್ಗೆ ನಿಮಗೆ ಯಾವುದೇ ಆಕ್ಷೇಪ ಇಲ್ಲವೇ..? ಎಂದು ಕಂಗನಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾನನಷ್ಟ ಕೇಸು ದಾಖಲು..!
ಕಂಗನಾಳ ಮುಂಬೈ ಬಂಗಲೆಯನ್ನು ಬಿಎಂಸಿ ಅಕ್ರಮ ಕಟ್ಟಡ ಎಂದು ಗುರುತಿಸಿ ತೆರವು ಮಾಡಿತ್ತು. ಮಹಾರಾಷ್ಟ್ರ ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ನಡುವೆ ಕಂಗನಾ ವಿರುದ್ಧ ಮಾನನಸ್ಟ ದೂರು ಕೂಡಾ ದಾಖಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.