ರವೀನಾ ಟಂಡನ್ ಮಗಳು ಭಾರತದ ಕ್ರಿಕೆಟರ್‌ ಜೊತೆಗೆ ರಹಸ್ಯ ಡೇಟಿಂಗ್?

By Bhavani Bhat  |  First Published Nov 30, 2024, 9:00 PM IST

ರವೀನಾ ಟಂಡನ್ ಪುತ್ರಿ ರಾಶಾ ಥಡಾನಿ, ಕ್ರಿಕೆಟಿಗ ಕುಲದೀಪ್ ಯಾದವ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಕುಲದೀಪ್ ರಾಶಾ ಅವರ ಸಾಮಾಜಿಕ ಮಾಧ್ಯಮ ಚಿತ್ರಗಳಿಗೆ ಲೈಕ್ ಮಾಡಿರುವುದು ಈ ವದಂತಿಗೆ ಕಾರಣವಾಗಿದೆ. 


ಜನಪ್ರಿಯ ನಟಿ, ಕನ್ನಡದ ಕೆಜಿಎಫ್‌ನಲ್ಲೂ ನಟಿಸಿರುವ ರವೀನಾ ಟಂಡನ್ ಅವರ ಮಗಳು ರಾಶಾ ಥಡಾನಿ ಅವರು ಭಾರತೀಯ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳಾ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಅದಕ್ಕೆ ಕಾರಣ ಇಲ್ಲದಿಲ್ಲ. 

ರಾಶಾ ಥಡಾನಿ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯ. ತನ್ನ ಅತ್ಯಾಕರ್ಷಕ ಚಿತ್ರಗಳನ್ನು ಆಗಾಗ ಇಂಟರ್ನೆಟ್‌ನಲ್ಲಿ ಹಂಚಿಕೊಂಡು ಹವಾ ಎಬ್ಬಿಸುತ್ತಿರುತ್ತಾಳೆ. ಅದಕ್ಕಾಗಿ ಆಗಾಗ ಸುದ್ದಿ ಮಾಡುತ್ತಿದ್ದಾರೆ. ಇದೀಗ ರಾಶಾ ಒಬ್ಬ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳಾ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಟೀಮ್ ಇಂಡಿಯಾದ 'ಚೈನಾಮನ್' ಸ್ಪಿನ್ನರ್ ಕುಲದೀಪ್ ಯಾದವ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ರಾಶಾ ಅವರ ಕೆಲವು ಚಿತ್ರಗಳನ್ನು ಲೈಕ್‌ ಮಾಡಿದಾಗ ಈ ಇಡೀ ಸಂಬಂಧದ ಸುದ್ದಿ ಗಮನ ಸೆಳೆಯಿತು.

Tap to resize

Latest Videos

ಕುಲದೀಪ್ ಹಾಗೂ ರಾಶಾ ಅವರ ಸಾಮಾಜಿಕ ಮಾಧ್ಯಮ ಸಂವಾದವು, ಅವರಿಬ್ಬರು ಡೇಟಿಂಗ್‌ ಮಾಡ್ತಿದಾರಾ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲದ ಅಲೆಯನ್ನು ಹುಟ್ಟುಹಾಕಿದೆ. ತಮನ್ನಾ ಮತ್ತು ಅವಳ ಇತರ ಸ್ನೇಹಿತರೊಂದಿಗೆ ಇದ್ದ ಚಿತ್ರಗಳನ್ನು ರಾಶಾ ಇತ್ತೀಚೆಗೆ ಅಪ್‌ಲೋಡ್‌ ಮಾಡಿದ್ದಳು. ಈ ಚಿತ್ರಗಳ ಮೇಲೆ ಕುಲ್ದೀಪ್ ಲೈಕ್ ಒತ್ತಿದದರು. ಇದು ವದಂತಿಗಳ ಸುಂಟರಗಾಳಿಯನ್ನು ಹುಟ್ಟುಹಾಕಲು ಸಾಕಾಗಿದೆ.

ಏತನ್ಮಧ್ಯೆ, ಇದುವರೆಗೆ ಕುಲದೀಪ್ ಅಥವಾ ರಾಶಾ ಡೇಟಿಂಗ್ ವದಂತಿಗಳನ್ನು ಖಚಿತಪಡಿಸಿಲ್ಲ. ಇಬ್ಬರೂ ಈ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿಲ್ಲವಾದ್ದರಿಂದ, ಈ ಊಹಾಪೋಹಗಳು ಆಧಾರರಹಿತವಾಗಿರಬಹುದು ಎಂದು ಸೂಚಿಸುತ್ತದೆ. ಅವರಲ್ಲಿ ಒಬ್ಬರು ವದಂತಿಗಳನ್ನು ದೃಢೀಕರಿಸುವ ಅಥವಾ ನಿರಾಕರಿಸುವವರೆಗೆ, ಇದು ಕೇವಲ ಅಭಿಮಾನಿಗಳು ಮತ್ತು ಮಾಧ್ಯಮದ ಊಹೆಯ ವಿಷಯವಾಗಿ ಉಳಿಯುತ್ತದೆ.

ರಾಶಾ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ತಯಾರಿ ನಡೆಸುತ್ತಿದ್ದಾಳಂತೆ. ಆಕೆಯ ರಂಗಪ್ರವೇಶಕ್ಕಾಗಿ ಒಳ್ಳೆಯ ಚಲನಚಿತ್ರದ ಅಥವಾ ಉತ್ತಮ ನಿರ್ದೇಶಕರ ಹುಡುಕಾಟದಲ್ಲಿದ್ದಾಳೆ ಆಕೆಯ ತಾಯಿ ರವೀನಾ ಟಂಡನ್.‌ ಬಾಲಿವುಡ್‌ ಚಲನಚಿತ್ರೋದ್ಯಮಕ್ಕೆ ರಾಶಾ ಅವಳ ಸಂಭಾವ್ಯ ಪ್ರವೇಶವು ಅವಳನ್ನು ಚರ್ಚೆಯ ವಿಷಯವನ್ನಾಗಿ ಮಾಡಿದೆ. ಈ ನಡುವೆ ಕುಲದೀಪ್ ಜೊತೆಗಿನ ಅವಳ ಡೇಟಿಂಗ್‌ ಸುದ್ದಿ ಕಾಕತಾಳೀಯವಾಗಿರಬಹುದು.

ಒಂದೇ ವರ್ಷ 35 ಸಿನಿಮಾದಲ್ಲಿ ನಟಿಸಿ ದಾಖಲೆ ಬರೆದ ಸೌತ್ ಇಂಡಿಯನ್ ಸ್ಟಾರ್ ಯಾರು?
 

ಏತನ್ಮಧ್ಯೆ, ಕುಲ್ದೀಪ್ ತಮಗೆ ಆಗಿರುವ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆ ಮುಗಿಸಿ ಇತ್ತೀಚೆಗೆ ಜರ್ಮನಿಯಿಂದ ಮರಳಿದ್ದಾರೆ. ಅವರ ಚೇತರಿಕೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅವರು ವೃತ್ತಿಪರ ಕ್ರಿಕೆಟ್‌ಗೆ ಹಿಂದಿರುಗಲು ಯತ್ನಿಸುತ್ತಿದ್ದಾರೆ. ಸದ್ಯ ಅದನ್ನು ಹೊರತುಪಡಿಸಿ ಬೇರೆ ಯಾವುದರತ್ತಲೂ ಅವರು ಗಮನಹರಿಸುವುದು ಅಸಂಭವ ಅನ್ನಿಸುತ್ತಿದೆ. ರಾಶಾ ಮತ್ತು ಕುಲದೀಪ್ ಅವರ ಡೇಟಿಂಗ್ ವದಂತಿಗಳು ಅಂತರ್ಜಾಲದಲ್ಲಿ ಸುತ್ತು ಹಾಕಿದ್ದರೂ, ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.

ಒಂಟಿಯಾಗಿರುವ ಶೆರ್ಲಿನ್ ಚೋಪ್ರಾ ಅಮ್ಮನಾಗಲು ಸಾಧ್ಯವಿಲ್ಲ! ಕಾಡ್ತಿದೆ ಈ ರೋಗ
 

click me!