
ಒಂದಾನೊಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿಯೂ ನಟಿಸುತ್ತ ಬಾಲಿವುಡ್ ಸ್ಟಾರ್ ನಟಿಯಾಗಿ ಮೆರೆದಿದ್ದ ನಟಿ ಜಯಪ್ರದಾ. ಅವರು ನಟಿ ಶ್ರೀದೇವಿಯ ಸಮಕಾಲೀನರು ಎನ್ನಬಹುದು. ಬಾಲಿವುಡ್ ಜಗತ್ತನ್ನು ಆಳಿದ ಕೆಲವೇ ನಟಿಯರಲ್ಲಿ ಈ ಜಯಪ್ರದಾ (Jayaprada) ಕೂಡ ಒಬ್ಬರು. ಆದರೆ, ನಟಿ ಜಯಪ್ರದಾ ಅವರು ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅವರಷ್ಟು ಖ್ಯಾತಿ ಪಡೆಯದಿದ್ದರೂ ಅವರಕೆ ಸಕತ್ ಕಾಂಪಿಟೀಶನ್ ಕೊಡುವಷ್ಟು ಬೆಳೆದಿದ್ದರು ಎಂಬುದು ಸತ್ಯ ಸಂಗತಿ.
ನಟಿ ಜಯಪ್ರದಾ ಅವರು ಅಂದು ರಾಜಕೀಯಕ್ಕೆ ಬಂದಿರಲಿಲ್ಲ. ಸಿನಿಮಾದಲ್ಲಿ ಭಾರೀ ಮಿಂಚುತ್ತಿದ್ದ ನಟಿ ಜಯಪ್ರದಾ ಅವರು ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಸ್ಟಾರ್ ನಟರೊಡನೆ ತೆರೆ ಹಂಚಿಕೊಂಡವರು. ಆದರೆ, ಸ್ವಲ್ಪ ಮಡಿವಂತಿಕೆ ಇಟ್ಟುಕೊಂಡಿದ್ದ ಜಯಪ್ರದಾ ಅವರು ಸಿನಿಮಾಗೆ ಅತ್ಯಂತ ಅಗತ್ಯವಿದ್ದರೆ ಮಾತ್ರ ಕಿಸ್ ಸೀನ್‌ನಲ್ಲಿ ನಟಿಸುತ್ತಿದ್ದರು. ಹೆಚ್ಚಾಗಿ ಅವರು ಅಂತಹ ದ್ರಶ್ಯಗಳಲ್ಲಿ ಭಾಗಿ ಆಗುತ್ತಿರಲಿಲ್ಲ.
ನಂದೇನಿದ್ರೂ ಸಿನಿಮಾದಲ್ಲಿ ತೋರಿಸ್ತೀನಿ ಸೆಟ್ಟಲ್ಲಲ್ಲ! ಕೋಳಿ ಜಗಳದಲ್ಲಿ ಈ ಮಾತು ಹೇಳಿದ್ಯಾರು?
ಆದರೆ, 'ಆಖ್ರೀ ರಾಸ್ತಾ' ಚಿತ್ರೀಕರಣದ ಸಮಯದಲ್ಲಿ ನಟಿ ಜಯಪ್ರದಾ ಅವರು ಮುತ್ತಿನ ಮತ್ತಿಗೆ ಒಳಗಾಗಲೇಬೇಕಿತ್ತು. ಅನಿವಾರ್ಯವಾಗಿ ಅವರು ಆ ಶೂಟಿಂಗ್‌ನಲ್ಲಿ ಪಾಲ್ಗೊಂಡರು. ಆದರೆ, ಎದುರಿದ್ದ ನಟ ದಲೀಪ್ ತಾಹಿಲ್ (Dalip Tahil) ನಟಿ ಜಯಪ್ರದಾರ ತುಟಿ ಕಚ್ಚಿ ಅತಿಯಾಗಿ ವರ್ತಿಸಿದ್ದರು. ಇದರಿಂದ ಸಿಟ್ಟಿಗೆದ್ದ ಜಯಪ್ರದಾ ಸಿನಿಮಾ ಶೂಟಿಂಗ್ ಸೆಟ್‌ನಿಂದಲೇ ಹೊರನಡೆದರು. ಅದಕ್ಕೂ ಮೊದಲು ಅವರು ದಲೀಪ್ ತಾಹಿಲ್ ಕೆನ್ನೆಗೆ ಒಂದೇಟು ಭಾರಿಸಿದ್ದರು.
ಜಯಪ್ರದಾ ಜೊತೆಗಿನ ಮಿಲನದ ಸೀನ್ ಆ ಚಿತ್ರೀಕರಣದ ವೇಳೆ, ದಲೀಪ್ ತಾಹಿಲ್ ಮೈಮೇಲಿನ ನಿಯಂತ್ರಣವನ್ನು ಕಳೆದುಕೊಂಡರು. ರೀಲ್ ಮತ್ತು ರಿಯಲ್ ನಡುವಿನ ವ್ಯತ್ಯಾಸವನ್ನು ಮರೆತು ವರ್ತಿಸಿದ ನಟ, ಜಯಪ್ರದಾರನ್ನು ನಿಜವಾಗಿಯೂ ರೇಪ್ ಮಾಡುವಂತೆ ಆಡಿಬಿಟ್ಟರು. ಇದರಿಂದ ನಟಿ ಜಯಪ್ರದಾ ಅಕ್ಷರಶಃ ಸಿಟ್ಟಿಗೆದ್ದರು. ನಟ ದಲೀಪ್ ತಾಹಿಲ್‌ಗೆ ಕಪಾಳಮೋಕ್ಷ ಮಾಡಿ, ಬಳಿಕ ಸೆಟ್ ತೊರೆದು ಹೋದರು.
ಕರುಂಗಾಲಿ ಮಾಲೆ ಧರಿಸಿ ಓಡಾಡ್ತಿರೋ ಭಾರತಿ ವಿಷ್ಣುವರ್ಧನ್; ಇದರ ರಹಸ್ಯ ತಿಳಿದರೆ..!
ಅದಾದ ಬಳಿಕ ನಟಿ ಜಯಪ್ರದಾ ಸಿನಿಮಾ ಕಥೆ ಕೇಳಿದಾಗಲೇ ಹೇಳುತ್ತಿದ್ದರು, ನಾನು ಕಿಸ್ ಸೀನ್‌ಗೆ ಒಪ್ಪೋದಿಲ್ಲ ಅಂತ. ಈ ಕಾರಣಕ್ಕೆ ಜಯಪ್ರದಾಗೆ ಸಾಕಷ್ಟು ಸಿನಿಮಾಗಳು ತಪ್ಪಿಹೋಗಿವೆ. ಆದರೆ, ಕಿಸ್ ದೃಶ್ಯದಲ್ಲಿ ಪಾಲ್ಗೊಂಡು ನೋವು ಅನುಭವಿಸುವ ಬದಲು ಒಂದೆರಡು ಸಿನಿಮಾ ಕೈ ತಪ್ಪಿದರೆ ಸಮಸ್ಯೆ ಏನೂ ಇಲ್ಲ ಎಂಬ ಮೆಂಟಾಲಿಟಿ ಹೊಂದಿದ್ದರಂತೆ ಜಯಪ್ರದಾ. ಹಾಗಂತ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.