2ನೇ ಮದುವೆಗೆ ಹೃತಿಕ್ ರೋಷನ್ ಸಜ್ಜು; ಶೀಘ್ರದಲ್ಲೇ ಪ್ರೇಯಸಿ ಸಬಾ ಜೊತೆ ಹಸೆಮಣೆ ಏರಲಿರುವ ನಟ?

Published : Jul 20, 2022, 12:55 PM IST
2ನೇ ಮದುವೆಗೆ ಹೃತಿಕ್ ರೋಷನ್ ಸಜ್ಜು; ಶೀಘ್ರದಲ್ಲೇ ಪ್ರೇಯಸಿ ಸಬಾ ಜೊತೆ ಹಸೆಮಣೆ ಏರಲಿರುವ ನಟ?

ಸಾರಾಂಶ

ಹೃತಿಕ್ ಮತ್ತು ಸಬಾ ಇಬ್ಬರು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಹೃತಿಕ್ ಮತ್ತು ಸಬಾ ಇಬ್ಬರು ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುವ ಬಗ್ಗೆ ಯೋಚಿಸುತ್ತಿದ್ದಾರೆ. 

ಬಾಲಿವುಡ್ ಸ್ಟಾರ್ ನಟ, ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್  ಸುಸೇನ್ ಖಾನ್‌ರಿಂದ ದೂರ ಆದ ಬಳಿಕ ಮತ್ತೋರ್ವ ಯುವತಿಯ ಜೊತೆ ಪ್ರೀತಿಯಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕಳೆದೊಂದು ವರ್ಷದಿಂದ ಸಬಾ ಅಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಕದ್ದು ಮುಚ್ಚಿ ಓಡಾಡುತ್ತಿದ್ದ ಹೃತಿಕ್ ಆಂಡ್ ಸಬಾ ಜೋಡಿ ಇದೀಗ ರಾಜಾರೋಷವಾಗಿ ಸುತ್ತಾಡುತ್ತಿದ್ದಾರೆ. ಫಾರಿನ್, ಪಬ್, ಮೋಜು, ಮಸ್ತಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸಬಾ ಆಜಾದ್ ಮತ್ತು ಹೃತಿಕ್ ರೋಷನ್ ಲಂಡನ್ ಗೆ ಹಾರಿದ್ದು ಅಲ್ಲಿಂದ ರೊಮ್ಯಾಟಿಂಕ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಲವ್ ಬರ್ಡ್ಸ್ ಈಗ ಲಂಡನ್‌ನಲ್ಲಿ ಉತ್ತಮ ಸಮಯ ಕಳೆಯುತ್ತಿದ್ದಾರೆ. ಹೃತಿಕ್ ಮತ್ತು ಸಬಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಇದೀಗ ಹೃತಿಕ್ ಮತ್ತು ಸಬಾ ಇಬ್ಬರು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಹೃತಿಕ್ ಮತ್ತು ಸಬಾ ಇಬ್ಬರು ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುವ ಬಗ್ಗೆ ಯೋಚಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸ್ಟಾರ್ ಲವ್ ಬರ್ಡ್ ಹಸೆಮಣೆ ಏರಲಿದೆ ಎನ್ನುವ ಮಾತುಬಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಹಿೃತಿಕ್ ಆಪ್ತರು ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸ್ಟಾರ್ ಜೋಡಿಯ ಆಪ್ತರೊಬ್ಬರು ಮಾಹಿತಿ ನೀಡಿದ್ದು, 'ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ. ಹೃತಿಕ್ ಅವರ ಕುಟುಂಬವು ಸಬಾವನ್ನು ಸ್ವೀಕರಿಸಿದ್ದಾರೆ. ವಾಸ್ತವವಾಗಿ, ಹೃತಿಕ್ ಅವರಂತೆಯೇ ಅವರ ಕುಟುಂಬ ಸಹ ಸಬಾ ಅವರ ಸಂಗೀತದ ಕೆಲಸವನ್ನು ತುಂಬಾ ಇಷ್ಟಪಡುತ್ತಾರೆ. ಇತ್ತೀಚಿಗೆ, ಸಬಾ, ಹೃತಿಕ್ ಅವರ ಮನೆಗೆ ಭೇಟಿ ನೀಡಿದಾಗ, ಯಾವುದೇ ಪೂರ್ವಸಿದ್ಧತೆ ಯಿಲ್ಲದೆ ಗಾಯನ ಸಭೆ ಮಾಡಿದರು. ಅದನ್ನು ಕುಟುಂಬ ಮತ್ತು ಹೃತಿಕ್ ಸಂಪೂರ್ಣವಾಗಿ ಆನಂದಿಸಿದರು. ಹೃತಿಕ್ ಮತ್ತು ಸಬಾ ಖಂಡಿತವಾಗಿಯೂ ಒಟ್ಟಿಗೆ ಇದ್ದಾರೆ' ಎಂದು ಹೇಳಿದರು.

ಗರ್ಲ್‌ಫ್ರೆಂಡ್ ಜೊತೆ ಲಂಡನ್ ಕ್ಲಬ್‌ನಲ್ಲಿ ಹೃತಿಕ್ ರೋಷನ್ ಮಸ್ತ್ ಮಜಾ; ಫೋಟೋ ವೈರಲ್

ಇನ್ನು ಹೃತಿಕ್ ರೋಷನ್ ಮಾಜಿ ಪತ್ನಿ ಬಗ್ಗೆ ಮಾತನಾಡಿ , 'ಸಾಬಾ ಮತ್ತು ಸುಸ್ಸೇನ್ ಇಬ್ಬರ ಸಂಬಂಧ ಸುಂದರವಾಗಿದೆ. ಸುಸ್ಸೇನ್ ಹಾಡುಗಳನ್ನು ಮತ್ತು ವಿಶೇಷವಾಗಿ ಸಬಾ ಬರೆಯುವ ಲಾವಣಿಗಳನ್ನು ಇಷ್ಟಪಡುತ್ತಾರೆ. ಹೃತಿಕ್ ಕೂಡ ಸಬಾ ಅವರ ಸಂಗೀತ ರಚನೆಗಳನ್ನು ಇಷ್ಟಪಡುತ್ತಾರೆ. ಇನ್ನು ಹೃತಿಕ್ ಅವರ ಮಕ್ಕಳಾದ ರೆಹಾನ್ ಮತ್ತು ಹೃದಾನ್ ಕೂಡ ಸಬಾ ಸಂಗೀತ ಕಾರ್ಯಕ್ರಮಕ್ಕೆ ಕರೆದೊಯ್ದಿದ್ದಾರೆ. ಹೃತಿಕ್ ಅವರ ತಾಯಿ ಮತ್ತು ಸಹೋದರಿ ಕೂಡ ಸಬಾ ಅವರನ್ನು ತುಂಬಾ ಇಷ್ಟಪಡುತ್ತಾರೆ' ಎಂದು ಹೇಳಿದರು. 

ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಅವರು ಸಂತೋಷದ ಸಂಬಂಧ ಹೊಂದಿದ್ದಾರೆ. ಅವರು ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆಯುತ್ತಾರೆ ಮತ್ತು ರಜಾ ದಿನಗಳನ್ನು ಒಟ್ಟಿಗೆ ಕಳಯುತ್ತಿದ್ದಾರೆ. ಇಬ್ಬರು ಹೆಚ್ಚಾಗಿ ಒಟ್ಟಿಗೆ ಸಮಯ ಕಳೆಯುತ್ತಿರುವುದರಿಂದ ಸದ್ಯದಲ್ಲೇ ಮದುವೆಯಾಗುವ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ರಾಕಿ ಪಾತ್ರ ಮಾಡಬೇಕಿದ್ದ ಆ ಬಿಗ್ ಸ್ಟಾರ್ ಯಾರು? ವೈರಲ್ ಆಗ್ತಿದೆ ಹೊಸ ಕತೆ!

2013ರಲ್ಲಿ ಸುಸೇನ್‌ರಿಂದ ದೂರಾದ ಹೃತಿಕ್ 

ಹೃತಿಕ್ ರೋಷನ್ ಈ ಮೊದಲು ಸುಸೇನ್ ಖಾನ್ ಜೊತೆ ಮದುವೆಯಾಗಿದ್ದರು. ಸುಮಾರು 14 ವರ್ಷಗಳು ಒಟ್ಟಿಗೆ ಸಂಸಾರ ಮಾಡಿದ್ದ ಈ ಜೋಡಿ 2013ರಲ್ಲಿ ವಿಚ್ಛೇದನ ಪಡೆದು ದೂರ ದೂರ ಆದರು. 2014ರಲ್ಲಿ ಅಧಕೃತವಾಗಿ ದೂರ ಆದರು. ಆದರೂ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದಾರೆ. ಇಬ್ಬರು ಮಕ್ಕಳಿಗಾಗಿ ಹೃತಿಕ್ ಮತ್ತು ಸುಜೇನ್ ಇಬ್ಬರು ಆಗಾಗ ಒಟ್ಟಿಗೆ ಸಮಯ ಕಳೆಯುತ್ತಾರೆ. ಇದೀಗ ಹೃತಿಕ್ ಸಬಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಸುಸೇನ್ ಕೂಡ ಆರ್ಸ್ಲಾನ್ ಗೋನಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇವರೆಲ್ಲರೂ ಆಗಾಗ ಒಟ್ಟಿಗೆ ಸಮಯ ಕಳೆಯುತ್ತಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!