ಎಲ್ಲ ಹೆಂಗಸರಂತೆ ಗರ್ಭಿಣಿ ಆಗಿಲ್ವಾ ದೀಪಿಕಾ ಪಡುಕೋಣೆ? ಸೋಷಿಯಲ್​ ಮೀಡಿಯಾದಲ್ಲಿ ಇದೆಂಥ ಚರ್ಚೆ?

By Suchethana D  |  First Published Aug 21, 2024, 9:44 PM IST

ಎಲ್ಲ ಹೆಂಗಸರಂತೆ ಗರ್ಭಿಣಿ ಆಗಿಲ್ವಾ ದೀಪಿಕಾ ಪಡುಕೋಣೆ? ಸೋಷಿಯಲ್​ ಮೀಡಿಯಾದಲ್ಲಿ ಇದೆಂಥ ಚರ್ಚೆ? ಇಂಥ ಚರ್ಚೆ ಹುಟ್ಟುಹಾಕಿರೋದಾದ್ರೂ ಯಾಕೆ? ಇಲ್ಲಿದೆ ವಿವರ... 
 


ನಟಿ ದೀಪಿಕಾ ಪಡುಕೋಣೆ ಬರುವ ಸೆಪ್ಟೆಂಬರ್​ನಲ್ಲಿ ಅಂದರೆ ಮುಂದಿನ ತಿಂಗಳ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಕುರಿತು  ಅವರೇ ಖುದ್ದು ಹಿಂದೆ ತಿಳಿಸಿದ್ದರು.  ಇವರಿಗೆ ಗಂಡು ಮಗು ಆಗಲಿದೆ ಎಂದು ಜ್ಯೋತಿಷಿಗಳು ಇದಾಗಲೇ ಹೇಳಿಯಾಗಿದೆ. ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕವೂ ತಾವು ನಟಿಸುತ್ತಿದ್ದ ಎಲ್ಲಾ ಚಿತ್ರಗಳ ಶೂಟಿಂಗ್​ಗಳನ್ನೂ ಮುಗಿಸಿ ಭೇಷ್​ ಅನ್ನಿಸಿಕೊಂಡಿದ್ದಾರೆ ನಟಿ. ಆದರೆ ಇದಾಗಲೇ ನಟಿಗೆ ಸೀಮಂತ ಮಾಡಲಾಗಿದೆ ಎನ್ನುವ ಫೋಟೋಗಳು ಸೋಷಿಯಲ್​  ಮೀಡಿಯಾದಲ್ಲಿ ಹರಿದಾಡಿದ್ದವು. ಅದಾದ ಬಳಿಕ  ಅವಧಿಗೆ ಮುನ್ನವೇ ಈಕೆಗೆ ಮಗು ಜನಿಸಿದೆ ಎಂದು  ದೀಪಿಕಾ ಮತ್ತು  ಪತಿ ರಣವೀರ್  ಜೊತೆಗೆ ಮಗುವಿರುವ ಫೋಟೋ ವೈರಲ್​ ಆಗುತ್ತಿವೆ. ದೀಪಿಕಾ ಅವರು ಆಸ್ಪತ್ರೆಯಲ್ಲಿ ಇರುವುದನ್ನು ಈ ಫೋಟೋದಲ್ಲಿ ನೋಡಬಹುದು. ಇವೆಲ್ಲಾ ಫೇಕ್​ ಫೋಟೋಗಳು ಎಂದು ಗೊತ್ತಾಗಿದ್ದು, ಸದ್ಯ ಗರ್ಭಿಣಿ ದೀಪಿಕಾ ಮಗುವಿನ ನಿರೀಕ್ಷೆಯಲ್ಲಿಯೇ ಇದ್ದಾರೆ.

ಇವೆಲ್ಲವುಗಳ ನಡುವೆಯೇ ನಟಿ ದೀಪಿಕಾ ಮಾಮೂಲಿಯಾಗಿ ಗರ್ಭಿಣಿಯಾಗಿಲ್ಲ ಎನ್ನುವ ಬಿಸಿಬಿಸಿ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ. ಅಷ್ಟಕ್ಕೂ ಹೀಗೆ ಚರ್ಚೆ ನಡೆಯಲು ಕಾರಣ, ದೀಪಿಕಾ ಪಡುಕೋಣೆ ಒಬ್ಬರೇ ಇಲ್ಲಿಯವರೆಗೂ ಗರ್ಭಿಣಿಯಾಗಿದ್ದಾರೆ ಎನ್ನುವ ರೀತಿಯಲ್ಲಿ ಪಾಪರಾಜಿಗಳು ಅವರ ಹಿಂದೆ ಮುಂದೆ ತಿರುಗುವುದಕ್ಕಾಗಿ! ಹೌದು. ದೀಪಿಕಾ ಗರ್ಭಿಣಿ ಎನ್ನುವ ಸುದ್ದಿ ಗೊತ್ತಾದಾಗಿನಿಂದಲೂ  ಕ್ಯಾಮೆರಾ ಕಣ್ಣುಗಳ ಅವರ ಮೇಲೆ ನೆಟ್ಟಿವೆ. ಸಾಮಾನ್ಯವಾಗಿ ಚಿತ್ರ ತಾರೆಯರು ಹೋದಲ್ಲಿ, ಬಂದಲ್ಲಿ ಹೀಗೆ ಅಸಹ್ಯ ಎನ್ನುವಷ್ಟರ ಮಟ್ಟಿಗೆ ಪಾಪರಾಜಿಗಳು ಹಿಂದೆ ಮುಂದೆ ಸುತ್ತುವುದು ಇದ್ದೇ ಇದೆ ಬಿಡಿ. ಅದು ಅವರಿಗೆ ಬಿಜಿನೆಸ್​. ದುಡ್ಡು ಕಮಾಯಿ ಮಾಡುವ ಮಾರ್ಗ. ಆದರೆ ದೀಪಿಕಾ ವಿಷಯದಲ್ಲಿ ಇದು ಒಂದು ಹೆಜ್ಜೆ ಮುಂದೆಯೇ ಹೋಗಿದೆ. ಇಡೀ ಜಗತ್ತಿನಲ್ಲಿ ದೀಪಿಕಾ ಮಾತ್ರ ತಾಯಿಯಾಗ್ತಿರೋ ಮೊದಲ ಮಹಿಳೆನಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ! ಆ ಪರಿಯಲ್ಲಿ ಆಕೆ ಹೋದಲ್ಲೆಲ್ಲಾ ಪಾಪರಾಜಿಗಳು ಬಿಡುತ್ತಿಲ್ಲ. 

Tap to resize

Latest Videos

ಗರ್ಭಿಣಿ ದೀಪಿಕಾಗೆ ಇದೆಂಥ ಅಗ್ನಿಪರೀಕ್ಷೆನಪ್ಪಾ? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರಬಾರದು ಅಂತಿರೋ ಫ್ಯಾನ್ಸ್​

ಇದೇ ವೇಳೆ, ದೀಪಿಕಾ ಚಿತ್ರರಂಗದಿಂದ ದೂರ  ಆಗ್ತಾರಾ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳ ತಲೆ ಕೆಡಿಸಿದೆ. ಇದಕ್ಕೆ ಕಾರಣವೂ ಇದೆ. ರಣವೀರ್​ ಸಿಂಗ್​ ಮತ್ತು ದೀಪಿಕಾ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದದಾರೆ. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್​ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು.  ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಮದುವೆಯಾದ ಮೇಲೆ ಚಿತ್ರರಂಗ ತೊರೆಯಲಿಲ್ಲ. ಆದರೆ ಮಗುವಾದ ಮೇಲೆ ಚಿತ್ರರಂಗ ತೊರೆಯುವುದಾಗಿ ಅವರು ಈ ಹಿಂದೆ ನೀಡಿದ್ದ ಹೇಳಿಕೆ ಈಗ ವೈರಲ್​ ಆಗುತ್ತಿದೆ.   

ಅಷ್ಟಕ್ಕೂ ಈ ಮಾತನ್ನು ದೀಪಿಕಾ  ಅವರು ರಣವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುವಾಗ ಹೇಳಿದ್ದರು. ಸಾಂಸಾರಿಕ ಜೀವನದ ಸಂತೋಷಕ್ಕಾಗಿ ಮದುವೆಯಾಗಿ ಮಗುವಾದ ಮೇಲೆ ಚಿತ್ರರಂಗ ತೊರೆಯುತ್ತೇನೆ ಎಂದು ಹೇಳಿದ್ದರು. ಅವರು ಇದಾಗಲೇ ತಮ್ಮ ಕೈಯಲ್ಲಿ ಇರುವ ಎಲ್ಲಾ ಚಿತ್ರಗಳ ಶೂಟಿಂಗ್​ ಮುಗಿಸಿದ್ದು, ಸದ್ಯ ಯಾವುದೇ ಪ್ರಾಜೆಕ್ಟ್​ಗಳಿಗೆ ಸಹಿ ಹಾಕಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಗುವಾದ ಮೇಲೆ ದೀಪಿಕಾ ಚಿತ್ರರಂಗ ತೊರೆಯಲಿದ್ದಾರೆಯೇ ಎನ್ನುವ ಅನುಮಾನ ಬಂದಿದೆ. ಇದರಿಂದ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್​ ಕೂಡ ತಲ್ಲಣಗೊಂಡಿದೆ. 

ಅಮ್ಮನಾಗಲು ಎರಡೇ ತಿಂಗಳು ಬಾಕಿ: ನಟಿ ದೀಪಿಕಾ ಪಡುಕೋಣೆ ಸೀಮಂತದ ಫೋಟೋಗಳು ವೈರಲ್​ ?

click me!