ಮಾಜಿ ಮಾವನ ಸ್ಥಾನ ಕಿತ್ತುಕೊಂಡ್ರಾ ಸಮಂತಾ? ಬಿಗ್ ಬಾಸ್ ನಿರೂಪಣೆಯಿಂದ ನಾಗಾರ್ಜುನ ಔಟ್

By Shruiti G Krishna  |  First Published Jun 3, 2022, 2:41 PM IST

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ವಿಚ್ಛೇದನದ ಬಳಿಕ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸದಾ ಸದ್ದು ಮಾಡುತ್ತಿರುವ ನಟಿ ಸಮಂತಾ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಬಿಗ್ ಬಾಸ್ ತೆಲುಗು ಸೀಸನ್ 6 ನಡೆಸಿಕೊಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.


ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ(Samantha) ವಿಚ್ಛೇದನದ ಬಳಿಕ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸದಾ ಸದ್ದು ಮಾಡುತ್ತಿರುವ ನಟಿ ಸಮಂತಾ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಬಿಗ್ ಬಾಸ್ ತೆಲುಗು ಸೀಸನ್ 6 ನಡೆಸಿಕೊಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ಕೇಳಿ ಸಮಂತಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ಈ ಮೊದಲು ಬಿಗ್ ಬಾಸ್‌ಅನ್ನು(Bigg Boss) ಖ್ಯಾತ ನಟ, ಸಮಂತಾ ಮಾಜಿ ಮಾವ ನಾಗಾರ್ಜುನ(Nagarjuna) ನಡೆಸಿಕೊಡುತ್ತಿದ್ದರು. ಆದರೀಗ ಮಾಜಿ ಮಾವನ ಸ್ಥಾನಕ್ಕೆ ಸಮಂತಾ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಸಮಂತಾ ಈಗಾಗಲೇ ತೆಲುಗು ಬಿಗ್ ಬಾಸ್-6ಗೆ ಸಹಿ ಮಾಡಿದ್ದಾರಂತೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ ಎನ್ನಲಾಗಿದೆ. ಅಂದಹಾಗೆ ಸಮಂತಾಗೆ ಈಗಾಗಲೇ ಬಿಗ್ ಬಾಸ್ ಹೋಸ್ಟ್ ಮಾಡಿರುವ ಅನುಭವವಿದೆ. ಬಿಗ್ ಬಾಸ್ ಸೀಸನ್ 4ನಲ್ಲಿ ಸಮಂತಾ ಒಂದು ಎಪಿಸೋಡ್ ನಡೆಸಿಕೊಟ್ಟಿದ್ದರು. ವಾರಾಂತ್ಯದಲ್ಲಿ ಬಿಗ್ ಬಾಸ್ ನಡೆಸಿಕೊಟ್ಟು ಅಚ್ಚರಿ ಮೂಡಿಸಿದ್ದರು. ನಾಗಾರ್ಜುನ ಅವರ ಅನುಪಸ್ಥಿತಿಯಲ್ಲಿ ಸಮಂತಾ ಮಾವನ ಸ್ಥಾನದಲ್ಲಿ ನಿಂತು ಅಭಿಮಾನಿಗಳನ್ನು ರಂಜಿಸಿದ್ದರು. ಮೊದಲ ಬಾರಿಗೆ ಬಿಗ್ ಬಾಸ್ ಹೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು.

Tap to resize

Latest Videos

ಇದೀಗ ಸಮಂತಾ ಸಂಪೂರ್ಣವಾಗಿ ಶೋ ಹೋಸ್ಟ್ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯ ಹರಿದಾಡುತ್ತಿರುವ ಸುದ್ದಿ ನಿಜನಾ ಎನ್ನುವುದು ಇನ್ನು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ. ಒಂದು ವೇಳೆ ನಿಜವೇ ಆಗಿದ್ದರೆ ಸಮಂತಾ ಪ್ರತಿವಾರ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಿಜಕ್ಕೂ ಸಮಂತಾ ಬಿಗ್ ಬಾಸ್ ನಡೆಸಿಕೊಡುತ್ತಾರಾ ಎಂದು ಕಾದು ನೋಡಬೇಕು.

ನಾಯಿ ಬೆಕ್ಕಿನ ಜೊತೆ ಸಾಯಿ ಎಂದ ನೆಟ್ಟಿಗನಿಗೆ ಕ್ಲಾಸ್‌ ತೆಗೆದುಕೊಂಡ ನಟಿ ಸಮಂತಾ!

ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ಖುಷಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ಪ್ರಾರಂಭವಾಗಿದೆ. ಫಸ್ಟ್ ಲುಕ್ ರಿಲೀಸ್ ಮಾಡಿದ್ದು ವಿಜಯ್-ಸಮಂತಾ ಲುಕ್ ವೈರಲ್ ಆಗಿತ್ತು. ಎರಡನೇ ಬಾರಿಗೆ ಸಮಂತಾ ಮತ್ತು ವಿಜಯ್ ಒಟ್ಟಿಗೆ ನಟಿಸುತ್ತಿದ್ದಾರೆ. ಮಹಾನಟಿ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ ಇದೀಗ ಖುಷಿ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

ಶೂಟಿಂಗ್ ವೇಳೆ ಅವಘಡ; ಪ್ರಪಾತಕ್ಕೆ ಉರುಳಿದ ವಾಹನ, ಸಮಂತಾ - ವಿಜಯ್ ದೇವರಕೊಂಡಗೆ ಗಾಯ

ಖುಷಿ ಸಿನಿಮಾದ ಜೊತೆಗೆ ಸಮಂತಾ ಯಶೋಧ ಸಿನಿಮಾದ ಚಿತ್ರೀಕರಣದಲ್ಲೂ ನಿರತರಾಗಿದ್ದಾರೆ. ಹಿಂದಿಯಲ್ಲಿ ಒಂದು ವೆಬ್ ಸೀರಿಸ್ ‌ನಲ್ಲೂ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಜೊತೆಗೆ ಬಿಗ್ ಬಾಸ್ ಮೂಲಕ ಕಿರುತೆರೆಗೆ ಬರ್ತಾರಾ ಎಂದು ಕಾದುನೋಡಬೇಕು.

click me!