ಪರಿಹಾರ ನಿಧಿಗೆ 25 ಕೋಟಿ ನೀಡಿದ ನಟನನ್ನು ಟೀಕಿಸಿದ ಶರ್ತೃಘ್ನ ಸಿನ್ಹಾ ಫುಲ್ ಟ್ರೋಲ್!

Suvarna News   | Asianet News
Published : Apr 20, 2020, 02:21 PM IST
ಪರಿಹಾರ ನಿಧಿಗೆ  25 ಕೋಟಿ ನೀಡಿದ ನಟನನ್ನು ಟೀಕಿಸಿದ ಶರ್ತೃಘ್ನ ಸಿನ್ಹಾ ಫುಲ್ ಟ್ರೋಲ್!

ಸಾರಾಂಶ

ಪ್ರಧಾನಿ ಪರಿಹಾರ  ನಿಧಿಗೆ 25 ಕೋಟಿ ನೀಡಿದ ಅಕ್ಷಯ್‌ ಕುಮಾರ್‌ನನ್ನು ಟೀಕಿಸಿ ಮಾತನಾಡಿದ ಶರ್ತೃಘ್ನ ಸಿನ್ಹಾ, ನೀವು ಇದನ್ನು ಮಾಡಿದ್ದು ಸರಿನಾ? ಎಂದ ಟ್ರೋಲಿಗರು....  

ಕೊರೋನಾ ವೈರಸ್‌ ವಿರುದ್ಧ ಹೋರಾಡಲು  ನಾಗರೀಕರು ಸಹಾಯ ಮಾಡುತ್ತಿದ್ದಾರೆ. ಪ್ರಧಾನಿ ಹಾಗೂ ಸಿಎಂ ಪರಿಹಾರ ನಿಧಿಗೆ ಧನ  ಸಹಾಯ ಮಾಡುವ ಮೂಲಕ ಸಿನಿ ತಾರೆಯರು ಸಾಥ್‌ ನೀಡುತ್ತಿದ್ದಾರೆ. 

ಪ್ರಧಾನಿ ಪರಿಹಾರ ನಿಧಿಗೆ ಬಾಲಿವುಡ್‌ ಆಕ್ಷನ್ ಪ್ರಿನ್ಸ್  ಅಕ್ಷಯ್‌ ಕುಮಾರ್ 25 ಕೋಟಿ ನೀಡಿದ್ದಾರೆ.  ಅಕ್ಷಯ್ ದೇಣಿಗೆ ನೀಡಿರುವ ಬಗ್ಗೆ ಬಾಲಿವುಡ್‌ ಚಿತ್ರರಂಗದ  ಹಿರಿಯ ಕಲಾವಿದ ಹಾಗೂ ಮಾಜಿ ಕೇಂದ್ರ ಸಚಿವ ಶರ್ತೃಘ್ನ ಸಿನ್ಹಾ ತೀವ್ರ ಟೀಕೆ ಮಾಡಿದ್ದಾರೆ. 

25 ಕೋಟಿ ರೂ ನೆರವಿನ ಬಳಿಕ ಮತ್ತೆ 3 ಕೋಟಿ ; ಅಕ್ಷಯ್ ಕುಮಾರ್‌ಗೆ ಯಾರೂ ಇಲ್ಲ ಸರಿಸಾಟಿ!

ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಶರ್ತೃಘ್ನ ಸಿನ್ಹಾ ದೊಡ್ಡ ಮೊತ್ತದಲ್ಲಿ ಹಣ ಕೊಟ್ಟ ತಕ್ಷಣ ಅವರಿಗೆ ಸಮಾಜದ ಬಗ್ಗೆ ಹೆಚ್ಚು ಕಾಳಜಿ ಇದೆಯಂತಲ್ಲ . ಕೊಟ್ಟ ಹಣದ ಮೇಲೆ ಆತನ ಗುಣವನ್ನು ಅಳೆಯಲಾಗುವುದಿಲ್ಲ ಎಂದು ಮಾತನಾಡಿದ್ದಾರೆ . 

ಅಕ್ಷಯ್‌ ಕುಮಾರ್‌ #DilSe ಥ್ಯಾಂಕ್ಯೂ ಅಭಿಯಾನಕ್ಕೆ ಸ್ಟಾರ್‌ಗಳ ಸಾಥ್‌

ಅಷ್ಟೇ ಅಲ್ಲದೆ  'ಹಣ ನೀಡಿದವರು ಸೋಷಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ ಹಾಕಿ ಫ್ರೀ ಪ್ರಚಾರ ಪಡೆಯುತ್ತಿದ್ದಾರೆ' ಎಂದು ನೀಡಿರುವ ಹೇಳಿಕೆಯಿಂದ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಸಹಾಯ ಮಾಡುವುದು ಅವರ ವೈಯಕ್ತಿಕ ವಿಚಾರ ಅದನ್ನು ನೀವು ಹೇಳುವುದು ಸೂಕ್ತವಲ್ಲ ಎಂದು ಮಾತನಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?