ಮಿಸ್ ಇಂಡಿಯಾ ಆಗಿ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ಜೂಹಿ ಚಾವ್ಲಾ ಅಮಿರ್ ಖಾನ್ ಹಾಗೂ ಶಾರುಖ್ ಖಾನ್ ಹೋಲಿಸಿದ್ದು ಏಕೆ? ಇಲ್ಲಿದೆ ಓದಿ...
'ಸಲ್ತನತ್' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಜೂಹಿ ಚಾವ್ಲಾ ವೃತ್ತಿ ಜೀವನದಕ್ಕೆ ಬ್ರೇಕ್ ತಂದು ಕೊಟ್ಟಿದ್ದು ಮಾತ್ರ ತಮ್ಮ ಮೊದಲ ಕನ್ನಡ ಸಿನಿಮಾ 'ಪ್ರೇಮಲೋಕ'ದ ಶಶಿಕಲಾ ಪಾತ್ರ . ಆ ನಂತರ ಬಾಲಿವುಡ್‌ನಲ್ಲಿ ಅವಕಾಶಗಳು ಕೈ ಬೀಸಿ ಕರೆಯಲು ಶುರು ಮಾಡಿದವು . ಅಮಿರ್ ಖಾನ್‌ಗೆ ಜೋಡಿಯಾಗಿ 'ಖಯಾಮತ್ ಸೆ ಖಯಾಮತ್ ತಕ್' ಚಿತ್ರದಲ್ಲಿ ಅಭಿನಯಿಸಿದ ನಂತರ ಜೂಹಿಗೆ ಕೈ ತುಂಬಾ ಆಫರ್‌ಗಳು ಹುಡುಕಿ ಬಂದವು .
ಜೂಹಿ ಚಾವ್ಲಾ'ಪ್ರೇಮಲೋಕ'ದ ಹೀರೋ ಇವರೇ; ಇಂಟರೆಸ್ಟಿಂಗ್ ಲವ್ ಕಹಾನಿ!
ಅದೇ ಸಮಯದಲ್ಲಿ ಶಾರುಖ್ ಖಾನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 'ರಾಜು ಬನ್ಗಯಾ ಜಂಟಲ್‌ಮ್ಯಾನ್' ಚಿತ್ರದಲ್ಲಿ ಜೂಹಿ ಜೊತೆ ಅಭಿನಯಿಸುವುದಕ್ಕೆ ಅವಕಾಶ ಪಡೆದುಕೊಂಡರು. ಚಿತ್ರಕಥೆಯನ್ನ ಪಾತ್ರಧಾರಿಗಳಿಗೆ ಒಪ್ಪಿಸುವಾಗ ನಿರ್ದೇಶಕರನ್ನು ನಟ ಯಾರೆಂದು ಕೇಳಿದಾಗ 'ಚಿತ್ರರಂಗಕ್ಕೆ ಹೊಸಬ ಈಗಾಗಲೇ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ನೋಡಲು ಸೇಮ್ ಅಮಿರ್ ಖಾನ್ ರೀತಿ ಕಾಣುತ್ತಾರೆ' ಎಂದು ಹೇಳಿದ್ದರಂತೆ.
ಚಿತ್ರೀಕರಣದ ಮೊದಲ ದಿನ ಶಾರುಖ್ ಖಾನ್‌ನ ನೋಡಿ ಜೂಹಿ 'ಯಾವ ರೀತಿಯಲ್ಲಿ ಅಮಿರ್ ಖಾನ್ ತರ ಕಾಣಿಸುತ್ತಾರೆ?' ಎಂದು ಪ್ರಶ್ನಿಸಿ ಬೇಸರವಾಗಿದ್ದರಂತೆ ಈ ಘಟನೆಯನ್ನು ಸಂದರ್ಶನವೊಂದರಲ್ಲಿ ಜೂಹಿ ಹಲವು ತಿಂಗಳುಗಳ ಹಿಂದೆ ಬಹಿರಂಗ ಮಾಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.