ಟ್ರ್ಯಾಕ್ಟರ್‌ ಹತ್ತಿ ಹೊಲ ಉಳುಮೆ ಮಾಡುತ್ತಿರುವ ನಟಿಯ ವಿಡಿಯೋ ವೈರಲ್!

Suvarna News   | Asianet News
Published : Apr 20, 2020, 12:10 PM IST
ಟ್ರ್ಯಾಕ್ಟರ್‌ ಹತ್ತಿ ಹೊಲ ಉಳುಮೆ ಮಾಡುತ್ತಿರುವ ನಟಿಯ ವಿಡಿಯೋ ವೈರಲ್!

ಸಾರಾಂಶ

ಫೇಸ್‌ಬುಕ್‌ ಲೈವ್‌, ಇನ್‌ಸ್ಟಾಗ್ರಾಂ ಲೈವ್‌  ಮಾಡುತ್ತಾ ಬ್ಯುಸಿಯಾಗಿರುವ ನಟಿಯರ ಪೈಕಿ ವಿಭಿನ್ನ ಶೈಲಿಯಲ್ಲಿ ಸಮಯ ಕಳೆಯುತ್ತಿದ್ದಾರೆ ಟಾಲಿವುಡ್‌ ಬ್ಯೂಟಿ......

ಲಾಕ್‌ಡೌನ್‌ನಲ್ಲಿ ಸಿನಿಮಾ ನಟ-ನಟಿಯರು ವಿಭಿನ್ನ ಕೆಲಸಗಳನ್ನು ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ ಅದೇ ರೀತಿ ತಮಿಳು ಚಿತ್ರರಂಗದ  ಸುಂದರ ಚೆಲುವೆ ಕೀರ್ತಿ ಪಾಂಡಿಯನ್‌ ರೈತ ಮಹಿಳೆಯಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ . 

ನಿರ್ಗತಿಕರಿಗೆ ಅನ್ನ- ನೀರು ದಾನ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿರುವವರು ಇದ್ದಾರೆ, ಇನ್ನು ಕೆಲವರು ಮನೆಯಲ್ಲೇ ವರ್ಕೌಟ್‌ ಮಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾರೆ. ಇದೆಲ್ಲಾ ಏನು ಬೇಡವೇ ಬೇಡ ಎಂದು ಕೆಲವರು ತಮ್ಮ ಹುಟ್ಟೂರಿನ ಕಡೆ ಮುಖ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾರೆ . 

ಲಾಕ್‌ಡೌನ್‌ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಾ ಎಂಜಾಯ್‌ ಮಾಡುತ್ತಿರುವ ಕೀರ್ತಿ ಅವರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗುತ್ತಿದೆ. ಕ್ವಾರಂಟೈನ್‌ನಲ್ಲಿ ಕೃಷಿ ಜೀವನ ಪ್ರಾರಂಭಿಸಿದ್ದೇನೆ . ಇದು ನಮಗೆ  ಸೇರಿರುವ ಆಸ್ತಿ ಹೊರಗಿನವರ ಯಾರ ಸಂಕರ್ಪವೂ ಹೊಂದಿಲ್ಲ. ಇದು ಸಾರ್ವಜನಿಕರ ಪ್ರದೇಶವಲ್ಲ. ನಾನು ತುಂಬಾ ಜವಾಬ್ದಾರಾಳಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ. 

 

ನಿರ್ಮಾಪಕ, ನಟ ಹಾಗೂ ರಾಜಕಾರಣಿ ಅರುಣ್‌ ಪಾಂಡಿಯನ್‌ ಅವರ ಪುತ್ರಿ ಕೀರ್ತಿ ತಮಿಳು  ಚಿತ್ರರಂಗದಲ್ಲಿ ಮಾತ್ರವಲ್ಲದೇ  ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಗಳಿಗೆ ಕೃಷಿ  ಮಾಡುವುದೆಂದರೆ ತುಂಬಾ ಇಷ್ಟ ಹಾಗಾಗಿ ನಮ್ಮ ಹೊಲದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಈ ಹಿಂದೆ ಅರುಣ್‌ ಪಾಂಡಿಯನ್‌ ಹೇಳಿದ್ದರಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?