ಶಾರುಖ್, ಕರಣ್ ಜೋಹರ್ ಗಿಂತ ಶ್ರೀಮಂತ ಭಾರತೀಯ ನಿರ್ಮಾಪಕ! ಒಂದೇ ಒಂದು ಬಾಲಿವುಡ್‌ ಸಿನೆಮಾ ಮಾಡದೆ ಗೆದ್ದ!

Published : Mar 19, 2025, 05:45 PM ISTUpdated : Mar 19, 2025, 05:47 PM IST
ಶಾರುಖ್, ಕರಣ್ ಜೋಹರ್ ಗಿಂತ ಶ್ರೀಮಂತ ಭಾರತೀಯ ನಿರ್ಮಾಪಕ! ಒಂದೇ ಒಂದು ಬಾಲಿವುಡ್‌ ಸಿನೆಮಾ ಮಾಡದೆ ಗೆದ್ದ!

ಸಾರಾಂಶ

ಕಲಾನಿಧಿ ಮಾರನ್ ಭಾರತದ ಶ್ರೀಮಂತ ಚಲನಚಿತ್ರ ನಿರ್ಮಾಪಕರು. ಸನ್ ಗ್ರೂಪ್‌ನ ಅಧ್ಯಕ್ಷರಾಗಿರುವ ಇವರು, 33,400 ಕೋಟಿ ರೂಪಾಯಿ ನಿವ್ವಳ ಮೌಲ್ಯ ಹೊಂದಿದ್ದಾರೆ. ಸನ್ ಟಿವಿ, ಸನ್ ಪಿಕ್ಚರ್ಸ್, ಸನ್ ಡೈರೆಕ್ಟ್, ಸನ್ ನೆಕ್ಸ್ಟ್ ಮತ್ತು ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ 30ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು, ಪತ್ರಿಕೆಗಳು, ನಿಯತಕಾಲಿಕೆಗಳು ಇವರ ಒಡೆತನದಲ್ಲಿದೆ. ಇತ್ತೀಚೆಗೆ ಜೈಲರ್ ಚಿತ್ರವನ್ನು ನಿರ್ಮಿಸಿ ಯಶಸ್ಸು ಗಳಿಸಿದ್ದಾರೆ.

ಕರಣ್ ಜೋಹರ್ ಮತ್ತು ಆದಿತ್ಯ ಚೋಪ್ರಾ ಅವರಂತಹವರು ಭಾರತದ ಪ್ರಮುಖ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು ಮತ್ತು ಅವರ ನಿವ್ವಳ ಮೌಲ್ಯವು ಅಪಾರವಾಗಿದೆ ಎಂಬುದು ರಹಸ್ಯವಾಗೇನು ಉಳಿದಿಲ್ಲ. ಆದರೆ ಭಾರತದ ಅತ್ಯಂತ ಶ್ರೀಮಂತ ಚಲನಚಿತ್ರ ನಿರ್ಮಾಪಕರ ವಿಷಯಕ್ಕೆ ಬಂದಾಗ, ಅವರಿಗೆ ಯಾರನ್ನೂ ಕೂಡ ಹೋಲಿಕೆ ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ ಆ ವ್ಯಕ್ತಿ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರಿಗಿಂತ ಶ್ರೀಮಂತ ಎಂಬುದು ಸತ್ಯ.

ಹಾಗಾದರೆ ಈ ವ್ಯಕ್ತಿ ಯಾರು? ಅವರು ಈಗ ಭಾರತದ 80 ನೇ ಶ್ರೀಮಂತ ವ್ಯಕ್ತಿ. ಆದರೆ ಅವರಿಗೆ ಬಾಲಿವುಡ್‌ನೊಂದಿಗೆ ಈಗ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ ಅವರ ಭದ್ರಕೋಟೆ ತಮಿಳು ಚಲನಚಿತ್ರೋದ್ಯಮ.  ಅವರು ಬೇರೆ ಯಾರೂ ಅಲ್ಲ, ಕಲಾನಿಧಿ ಮಾರನ್.

ಭಾರತದ ಟಾಪ್ 10 ಜನಪ್ರಿಯ ನಟರು: ಬಾಲಿವುಡ್‌ ನಟರನ್ನು ಹಿಂದಿಕ್ಕಿದ ದಕ್ಷಿಣದ ನಟರು!

ಮಾರನ್ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಅವರ ತಂದೆ ಮುರಸೋಳಿ ಮಾರನ್, ಅವರು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಪ್ರಮುಖ ನಾಯಕರಾಗಿದ್ದರು. ಅಮೆರಿಕದ ಪೆನ್ಸಿಲ್ವೇನಿಯಾದ ಸ್ಕ್ರಾಂಟನ್ ವಿಶ್ವವಿದ್ಯಾಲಯದಿಂದ ಎಂಬಿಎ ಮಾಡುವ ಮೊದಲು ಮಾರನ್ ಅವರ ಆರಂಭಿಕ ಅಧ್ಯಯನಗಳು ಚೆನ್ನೈನಲ್ಲಿ ನಡೆದವು. 1993 ರಲ್ಲಿ, ಅವರು ಸನ್ ಟಿವಿಯನ್ನು ಪ್ರಾರಂಭಿಸಿದರು ಮತ್ತು ಈಗ ಅದು ಸನ್ ಗ್ರೂಪ್ ಆಗಿ ಮಾರ್ಪಟ್ಟಿದೆ. ಮಾರನ್ ಚೆನ್ನೈನಲ್ಲಿ ನೆಲೆಸಿದ್ದು, ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

2024 ರ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯು ಅವರ ನಿವ್ವಳ ಮೌಲ್ಯವು ಪ್ರಸ್ತುತ ರೂ 33,400 ಎಂದು ಹೇಳಿದೆ. ಕಳೆದ ವರ್ಷದಲ್ಲಿ ಮಾರನ್ ಅವರ ಸಂಪತ್ತು 34% ರಷ್ಟು ಏರಿಕೆಯಾಗಿದೆ ಆದರೆ ಶ್ರೇಯಾಂಕದಲ್ಲಿ ಐದು ಸ್ಥಾನಗಳು ಕುಸಿದಿದೆ.  

ಹಾಗಾದರೆ ಎಲ್ಲಾ ಹಣ ಎಲ್ಲಿಂದ ಬರುತ್ತದೆ?
ಮಾರನ್ ಅವರ ಸನ್ ಗ್ರೂಪ್ ದೇಶದಲ್ಲಿ 30 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ಹೊಂದಿದೆ. ಇದರ ಜೊತೆಗೆ ಎರಡು ಪತ್ರಿಕೆಗಳು, ಐದು ನಿಯತಕಾಲಿಕೆಗಳು, ಸನ್ ಪಿಕ್ಚರ್ಸ್, ಒಟಿಟಿ ಪ್ಲಾಟ್‌ಫಾರ್ಮ್ ಸನ್ ಎನ್‌ಎಕ್ಸ್‌ಟಿ, ಡಿಟಿಎಚ್ ಉಪಗ್ರಹ ಸೇವೆ ಸನ್ ಡೈರೆಕ್ಟ್. ನಂತರ ಎರಡು ಕ್ರಿಕೆಟ್ ತಂಡಗಳಿವೆ. ಒಂದು ಐಪಿಎಲ್ ತಂಡ  ಸನ್‌ರೈಸರ್ಸ್ ಹೈದರಬಾದ್‌ ಮತ್ತು ಇನ್ನೊಂದು ದಕ್ಷಿಣ ಆಫ್ರಿಕಾ ಟಿ 20 ಲೀಗ್‌ಗೆ ಸೇರಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್. ಮಾರನ್ ಕುಟುಂಬವು ಸನ್ ಟಿವಿಯಲ್ಲಿ 75% ಪಾಲನ್ನು ಹೊಂದಿದೆ. 

ಆಮಿರ್ ಖಾನ್ ಹೊಸ ಗರ್ಲ್‌ಫ್ರೆಂಡ್‌, ಇರಾ ಶಾಕಿಂಗ್ ರಿಯಾಕ್ಷನ್, 60ರಲ್ಲಿ ಅಪ್ಪನ ಪ್ರೀತಿಗೆ ಮಗಳ ವಿರೋಧವೇ?

ಐಪಿಎಲ್ ಸಮಯದಲ್ಲಿ ಮಾರನ್ ಅವರ ಪುತ್ರಿ ಕಾವ್ಯಾ ಎಸ್‌ಆರ್‌ಎಚ್‌ ತಂಡವನ್ನು ಮುನ್ನಡೆಸುವುದು ಮತ್ತು ಹುರಿದುಂಬಿಸುತ್ತಿರುವುದನ್ನು ಕಾಣಬಹುದು. ಕಳೆದ 14 ವರ್ಷಗಳಲ್ಲಿ ಅವರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್  ನಿಂದ  ಎಂಥಿರನ್,  ಪೆಟ್ಟಾ,  ಜೈಲರ್,  ಬೀಸ್ಟ್,  ಸರ್ಕಾರ್, ತಿರುಚಿತ್ರಂಬಲಂ ಮತ್ತು  ರಾಯನ್  ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಹಣಕಾಸು ಒದಗಿಸಿದ್ದಾರೆ.

ಸಿನಿಮಾಗಳಿಂದಲೇ ಕೋಟಿ ಕೋಟಿ ಗಳಿಸಿರುವ ಕಲಾನಿಧಿ ಮಾರನ್
ಮಾರನ್ 1999ರಲ್ಲಿ ಬಿಡುಗಡೆಯಾದ ಸಿರಗುಗಲ್‌ನೊಂದಿಗೆ ಚಲನಚಿತ್ರ ನಿರ್ಮಾಪಕರಾದರು ಆದರೆ ಸನ್ ಪಿಕ್ಚರ್ಸ್ ಮತ್ತೊಂದು ದಶಕದ ವರೆಗೆ ಚಲನಚಿತ್ರಗಳಿಗೆ ಮರಳಲಿಲ್ಲ. 2010 ರ ರಜನಿಕಾಂತ್ ಅಭಿನಯದ ಎಂದಿರನ್ ಚಿತ್ರದೊಂದಿಗೆ ಅವರು ಚಲನಚಿತ್ರ ನಿರ್ಮಾಣಕ್ಕೆ ಮರಳಿದರು ಮತ್ತು ಯಶಸ್ಸನ್ನು (Success) ಕಂಡರು. ಅಲ್ಲಿಂದೀಚೆಗೆ, ಅವರು ಸರ್ಕಾರ್, ಪೆಟ್ಟಾ (ಎರಡೂ ರಜನಿಕಾಂತ್ ಅಭಿನಯದ ಸಿನಿಮಾ), ಜೊತೆಗೆ ರಾಘವ ಲಾರೆನ್ಸ್ ಅವರ ಲಾಂಚನ 3, ಧನುಷ್ ಅವರ ತಿರುಚಿತ್ರಂಬಲಂನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರ ತೀರಾ ಇತ್ತೀಚಿನ ಬಿಡುಗಡೆಯಾದ ಜೈಲರ್, ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿದೆ.

ಮಾರನ್ ಆರಂಭದಿಂದಲೂ ಉದ್ಯಮದಲ್ಲಿ ಒಂದು ಸಾಮ್ರಾಜ್ಯವನ್ನೇ ನಿರ್ಮಿಸಿದ್ದಾರೆ. ಆ ಸಾಮ್ರಾಜ್ಯ ಇನ್ನೂ ಬೆಳೆಯುತ್ತಿದೆ. ಮಾತ್ರವಲ್ಲ ಸ್ಪರ್ಧೆಯ ವಿಷಯಕ್ಕೆ ಬಂದಾಗ ಬಾಲಿವುಡ್ ಚಿತ್ರರಂಗ ಇವರ ಹತ್ತಿರದಲ್ಲೂ ಇಲ್ಲ. ಮಾರನ್  ಭಾರತದ ಅತ್ಯಂತ ಶ್ರೀಮಂತ ಚಲನಚಿತ್ರ ನಿರ್ಮಾಪಕರಾಗಿದ್ದರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?