
ಭಾರತೀಯ ಚಿತ್ರರಂಗದ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ (Ganesh Acharya) ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಾಕಷ್ಟು ಕನ್ನಡ ಚಿತ್ರಗಳಿಗೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿರುವ ಗಣೇಶ್ ಆಚಾರ್ಯ ಈ ಬಾರಿ ತಮ್ಮ ನಿರ್ಮಾಣದ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ನಿನ್ನೆ ನಗರದ ವೈಷ್ಣವಿ ಸಫೈರ್ ಮಾಲ್ ನಲ್ಲಿ ಗಣೇಶ್ ಆಚಾರ್ಯ ನಿರ್ಮಾಣದ ಕಿಸ್ ಕಿಸ್ ಕಿಸ್ಸಿಕ್ ಸುದ್ದಿಗೋಷ್ಟಿ ಆಯೋಜಿಸಲಾಗಿತ್ತು. ಈ ವೇಳೆ ಇಡೀ ತಂಡ ಭಾಗಿಯಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ಆಚಾರ್ಯ , 'ನಾನು ದಕ್ಷಿಣದವನು. ನಾನು ದಕ್ಷಿಣ ಭಾರತದ ಎಲ್ಲಾ ಭಾಷೆಯನ್ನು ಇಷ್ಟಪಡುತ್ತೇನೆ. ನಾನು ಕನ್ನಡದ ಸಾಕಷ್ಟು ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದೇನೆ. ದರ್ಶನ್, ಕಿಚ್ಚ, ಯಶ್ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನಾನು ಬಾಲಿವುಡ್ ಕೊರಿಯೋಗ್ರಫರ್ ಹಾಗೂ ಸೌತ್ ಇಂಡಿಯಾ ಕೊರಿಯೋಗ್ರಾಫರ್ ಅನಿಸುತ್ತದೆ. ಯಾಕೆಂದರೆ ಹೆಚ್ಚಾಗಿ ದಕ್ಷಿಣ ಭಾರತದ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಕಿಸ್ ಕಿಸ್ ಕಿಸ್ಸಿಕ್ ಇದು ಬೆಸ್ಟ್ ಟೈಟಲ್ ಎನಿಸಿತು. ಮಾರ್ಚ್ 21ಕ್ಕೆ ನಮ್ ಚಿತ್ರ ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಹೊಸ ಪ್ರತಿಭೆಗಳಿಗೆ ನಿಮ್ಮ ಬೆಂಬಲ ಇರಲಿ ಎಂದು ತಿಳಿಸಿದರು.
ನೀವು ನಿಮ್ಮನೆ ನೋಡ್ಕೊಳ್ಳಿ.. ನಾವು ನಮ್ಮನೆ ನೋಡ್ಕೋತೀವಿ.. ಹೀಗಂದಿದ್ಯಾಕೆ ಕಿಚ್ಚ ಸುದೀಪ್?
ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಪತ್ನಿ ವಿಧಿ ಆಚಾರ್ಯ ತಮ್ಮದೇ V2S Productionನಡಿ ಪಿಂಟು ಕಿ ಪಪ್ಪಿ ಎಂಬ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾಮಿಡಿ, ರೋಮ್ಯಾನ್ಸ್, ಆಕ್ಷನ್ ಅಂಶಗಳನ್ನೊಳಗೊಂಡಿರುವ ಈ ಸಿನಿಮಾ ʼಕಿಸ್ ಕಿಸ್ ಕಿಸ್ಸಿಕ್ʼ ಎಂಬ ಟೈಟಲ್ ನಡಿ ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಮಾರ್ಚ್ 21ಕ್ಕೆ ಬಿಡುಗಡೆಯಾಗುತ್ತಿದೆ. ʼಕಿಸ್ ಕಿಸ್ ಕಿಸ್ಸಿಕ್ʼ ಚಿತ್ರವನ್ನು ದಕ್ಷಿಣದಲ್ಲಿ ಮೈತ್ರಿ ಮೂವೀ ಮೇಕರ್ಸ್ ವಿತರಣೆ ಮಾಡುತ್ತಿದೆ. ʼಕಿಸ್ ಕಿಸ್ ಕಿಸ್ಸಿಕ್ʼ ವಿತರಣೆ ಹಕ್ಕನ್ನು ಮೈತ್ರಿ ಮೂವೀ ಮೇಕರ್ಸ್ ತನ್ನದಾಗಿಸಿಕೊಂಡಿದೆ.
ಶಿವ ಹರೇ ನಿರ್ದೇಶನದ ಕಿಸ್ ಕಿಸ್ ಕಿಸ್ಸಿಕ್ ಚಿತ್ರದ ಮೂಲಕ ಶುಶಾಂತ್, ಜಾನ್ಯಾ ಜೋಶಿ ಮತ್ತು ವಿಧಿ ಸೇರಿದಂತೆ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗಿದೆ, ವಿಜಯ್ ರಾಜ್ ಮತ್ತು ಮುರಳಿ ಶರ್ಮಾ ಅವರಂತಹ ಅನುಭವಿ ನಟರು ಚಿತ್ರದ ಭಾಗವಾಗಿದ್ದಾರೆ. ಗಣೇಶ್ ಆಚಾರ್ಯ ಕಿಸ್ ಕಿಸ್ ಕಿಸ್ಸಿಕ್ ಸಿನಿಮಾ ನಿರ್ಮಾಣದ ಜೊತೆಗೆ ನೃತ್ಯ ಸಂಯೋಜನೆ ಜವಾಬ್ದಾರಿಯನ್ನು ಕೂಡ ನಿಭಾಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿಯೂ ಅವರು ನಟಿಸಿದ್ದಾರೆ.
ಚಿತ್ರರಂಗಕ್ಕೆ ಬಂದ ಶುರುವಿನಲ್ಲಿ ಅಣ್ಣಾವ್ರು ಅಭಿಮಾನಿಗಳಿಗೆ ಹೇಳಿದ್ದೇನು? ಬಳಿಕ ಹೇಳಿದ್ದೇನು?!..ಎರಡೂ ಇಲ್ಲಿದೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.