ಸುಧಾಮೂರ್ತಿಯವರು ಇಂಗ್ಲೆಂಡ್ ಪ್ರಧಾನಿಯಾಗಿರುವ ರಿಷಿ ಸುನಕ್ ಅವರಿಗೆ ಹೆಣ್ಣು ಕೊಟ್ಟ ಅತ್ತೆ. ಭಾರತೀಯರಿಗೆ ಸುಧಾಮೂರ್ತಿ ಬಹಳ ಪರಿಚಯಸ್ಥರು. ಆದರೆ ಲಂಡನ್ ಸ್ಟ್ರೀಟ್‌ನ ಜನಕ್ಕೆ ಇವರೇನು ಅಂತಹ ಪರಿಚಯಸ್ಥರಲ್ಲ. ಇದೇ ಕಾರಣಕ್ಕೆ ನಡೆದ ಘಟನೆಯೊಂದನ್ನು ಅವರು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ಬೆಂಗಳೂರು: ಇನ್ಪೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಲೇಖಕಿ, ನಿಸ್ವಾರ್ಥ ಸಮಾಜ ಸೇವೆ ಹಾಗೂ ಸರಳತೆಯ ಕಾರಣಕ್ಕೆ ಹೆಸರಾಗಿರುವ ಸುಧಾಮೂರ್ತಿ ಮಾತಿಗೆ ಕುಳಿತರೆ ಅದನ್ನು ಕೇಳುವುದೇ ಒಂದು ಚಂದ ಯಾವುದೇ ಆಡಂಬರ ಉತ್ಪ್ರೇಕ್ಷೆ ಇರದ ಅವರ ಮಾತುಗಳು ಅವರ ಕಾರ್ಯದಂತೆ ಎಲ್ಲರೂ ಅವರನ್ನು ಇಷ್ಟಪಡುವಂತೆ ಮಾಡುತ್ತವೆ. ಸಾಧನೆಯ ಕೀರ್ತಿ ಶಿಖರವೇರಿದ್ದರೂ ಕಾಲನ್ನು ನೆಲದಲ್ಲೇ ಇರಿಸಿಕೊಂಡು ಜನಸಾಮಾನ್ಯರಂತೆ ಬದುಕುವ ಅವರ ಜೀವನಾನುಭವನ್ನು ಕೇಳುವುದೇ ಒಂದು ಚಂದ. ಇಂತಹ ಸುಧಾಮೂರ್ತಿಯವರು ಇಂಗ್ಲೆಂಡ್ ಪ್ರಧಾನಿಯಾಗಿರುವ ರಿಷಿ ಸುನಕ್ ಅವರಿಗೆ ಹೆಣ್ಣು ಕೊಟ್ಟ ಅತ್ತೆ. ಭಾರತೀಯರಿಗೆ ಸುಧಾಮೂರ್ತಿ ಬಹಳ ಪರಿಚಯಸ್ಥರು. ಆದರೆ ಲಂಡನ್ ಸ್ಟ್ರೀಟ್‌ನ ಜನಕ್ಕೆ ಇವರೇನು ಅಂತಹ ಪರಿಚಯಸ್ಥರಲ್ಲ. ಇದೇ ಕಾರಣಕ್ಕೆ ನಡೆದ ಘಟನೆಯೊಂದನ್ನು ಅವರು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ದೇಶ ವಿದೇಶಗಳನ್ನು ಸುತ್ತುವುದು ಜೀವನಾನುಭವ ಪಡೆಯುವುದು ಲೇಖನ ಬರೆಯುವುದು ಸುಧಾಮೂರ್ತಿಯವರ ನೆಚ್ಚಿನ ಹವ್ಯಾಸ. ಹಾಗೆಯೇ ವಿದೇಶಕ್ಕೆ ಹೊರಟ ಇವರು ಲಂಡನ್‌ನಲ್ಲಿ ವಲಸೆ ಅಧಿಕಾರಿಗಳಿಗೆ ಮಗಳು ಅಳಿಯ ಇರುವ 10 ಡೌನಿಂಗ್ ಸ್ಟ್ರೀಟ್ (ಇಂಗ್ಲೆಂಡ್ ಪ್ರಧಾನಿ ವಾಸವಿರುವ ಅಧಿಕೃತ ಮನೆಯ ವಿಳಾಸ) ಮನೆಯ ವಿಳಾಸ ನೀಡಿದ್ದಾರೆ. ಆದರೆ ಇದನ್ನು ವಲಸೆ ಅಧಿಕಾರಿ ನಂಬಲು ಸಿದ್ಧರಿರಲಿಲ್ಲ. ಸರಳ ಸಾಮಾನ್ಯ ಎಂಬಂತ ಉಡುಗೆಯಲ್ಲಿರುವ ಈ ಮಹಿಳೆ ಲಂಡನ್ ಪ್ರಧಾನಿಯ ಮನೆ ವಿಳಾಸವನ್ನೇಕೆ ನೀಡುತ್ತಿದ್ದಾರೆ ಎಂದು ಅಚ್ಚರಿಗೊಳಗಾದ ಆತ, ಸುಧಾಮೂರ್ತಿ ಅವರ ಬಳಿ ನೀವು ಹಾಸ್ಯ ಮಾಡುತ್ತಿಲ್ಲ ತಾನೇ ಎಂದು ಕೇಳುತ್ತಾನೆ.
ನಾನು ನನ್ನ ಗಂಡನ ಉದ್ಯಮಿ ಮಾಡಿದೆ, ನನ್ನ ಮಗಳು ಆಕೆ ಗಂಡನ ಪ್ರಧಾನಿ ಮಾಡಿದ್ಲು: ಸುಧಾಮೂರ್ತಿ
ಇತ್ತೀಚೆಗೆ ಸುಧಾಮೂರ್ತಿಯವವರು ಹಿಂದಿಯ ಖ್ಯಾತ ಕಾಮಿಡಿ ಶೋ 'ದಿ ಕಪಿಲ್ ಶರ್ಮಾ ಶೋದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸುಧಾಮೂರ್ತಿಯವರು ಒಬ್ಬ ವಲಸೆ ಅಧಿಕಾರಿ ತಾನು ನೀಡಿದ ವಿಳಾಸವನ್ನು ನಂಬಲು ಸಿದ್ಧನಿಲ್ಲದ ತಮ್ಮ ಈ ಅನುಭವವನ್ನು ಬಿಚ್ಚಿಟ್ಟಿದ್ದಾರೆ. "ಒಮ್ಮೆ ನಾನು ಅಲ್ಲಿಗೆ ಹೋದಾಗ ಅಲ್ಲಿ ವಲಸೆ ಅಧಿಕಾರಿ ನಾನು ವಾಸವಿರುವ ವಿಳಾಸವನ್ನು ಕೇಳಿದರು, ಲಂಡನ್‌ನಲ್ಲಿ ನೀವೆಲ್ಲಿ ವಾಸವಿರುವುದು ಎಂದು ಅವರು ಕೇಳಿದರು. ಈ ವೇಳೆ ನನ್ನ ಅಕ್ಕ ನನ್ನ ಜೊತೆ ಇದ್ದಳು. ನಾನು 10 ಡೌನಿಂಗ್ ಸ್ಟ್ರೀಟ್ ವಿಳಾಸ ಬರೆಯಬಹುದೇ ಎಂದು ಯೋಚಿಸಿದೆ. ಅಂದಹಾಗೆ ನನ್ನ ಮಗನೂ ಲಂಡನ್‌ನಲ್ಲಿ ವಾಸವಿದ್ದ, ಆದರೆ ಆತನ ವಿಳಾಸ ನನಗೆ ಸರಿಯಾಗಿ ತಿಳಿದಿರಲಿಲ್ಲ, ಹೀಗಾಗಿ ನಾನು ಕೊನೆಯದಾಗಿ 10 Downing Street ವಿಳಾಸವನ್ನೇ ಬರೆದೆ. ಈ ವೇಳೆ ನನ್ನತ್ತ ನೋಡಿದ ವಲಸೆ ಅಧಿಕಾರಿ (immigration officer) ನೀವು ತಮಾಷೆ ಮಾಡ್ತಿದ್ದೀರಾ? ಎಂದು ಪ್ರಶ್ನಿಸಿದ"
ನಾನು ಇಲ್ಲ ಸತ್ಯವನ್ನೇ ಹೇಳ್ತಿದ್ದೇನೆ ಎಂದು ಅವನಿಗೆ ಹೇಳಿದೆ. ಆದರೆ ಅವನು ನಂಬಲು ಸಿದ್ಧನಿರಲಿಲ್ಲ. ಅಲ್ಲದೇ 72 ವರ್ಷ ಪ್ರಾಯದ ಸಾಮಾನ್ಯ ಮಹಿಳೆಯಾಗಿರುವ ನಾನು ಇಂಗ್ಲೆಂಡ್ ಪ್ರಧಾನಿಯ ಅತ್ತೆ ಎಂದು ಯಾರು ಕೂಡ ನಂಬಲು ಸಿದ್ಧರಿಲ್ಲ ಎಂದು ಅವರು ಈ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಉದ್ಯಮಿ ಇನ್‌ಫೋಸಿಸ್ ನಾರಾಯಣ ಮೂರ್ತಿಯವರ (Narayan Murthy) ಹಾಗೂ ಸುಧಾಮೂರ್ತಿಯವರ (Sudha Murthy) ಪುತ್ರಿಯಾಗಿರುವ ಅಕ್ಷತಾ ಮೂರ್ತಿಯವರು (Akshata Murthy) ಪ್ರಸ್ತುತ ಇಂಗ್ಲೆಂಡ್ ಪ್ರಧಾನಿಯಾಗಿರುವ ರಿಷಿ ಸುನಕ್ (Rishi sunak) ಅವರ ಪತ್ನಿಯಾಗಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ಪ್ರಧಾನಿಗಳ ಅಧಿಕೃತ ನಿವಾಸವಿರುವ 10 ಡೌನಿಂಗ್ ಸ್ಟ್ರಿಟ್‌ನಲ್ಲಿ ವಾಸವಿದ್ದಾರೆ.
Infosys Share Price: ಯುಕೆ ಪ್ರಧಾನಿ ಪತ್ನಿ ಅಕ್ಷತಾಗೆ ಒಂದೇ ದಿನದಲ್ಲಿ 500 ಕೋಟಿಗೂ ಹೆಚ್ಚು ನಷ್ಟ..!
ಸುಧಾಮೂರ್ತಿಯವರು ಭಾಗವಹಿಸಿದ ಈ ಕಪಿಲ್ ಶರ್ಮಾ ಶೋ ಎಪಿಸೋಡ್‌ನಲ್ಲಿ ಸುಧಾಮೂರ್ತಿಯವರ ಜೊತೆ ಎಲಿಪೆಂಟ್ ವಿಶ್ಪರಸ್ ಸಿನಿಮಾಗೆ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಿರ್ಮಾಪಕ ಗುನೀತ್ ಮೊಂಗಾ (Guneet Monga), ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ನಟಿ ರವೀನಾ ಟಂಡನ್ (Raveena Tandon) ಅವರು ಕೂಡ ಭಾಗವಹಿಸಿದ್ದರು. ಕಳೆದ ಏಪ್ರಿಲ್‌ನಲ್ಲಿ ಸುಧಾ ಮೂರ್ತಿ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅವರ ಮಗಳು ಅಕ್ಷತಾ ಮೂರ್ತಿ ಕೂಡ ಭಾಗಿಯಾಗಿದ್ದರು.