ಧಕ್​ ಧಕ್​ ಬೆಡಗಿ ಮಾಧುರಿ ದೀಕ್ಷಿತ್​ಗೆ ವಿಶೇಷ ಗೌರವ: ಜೀವಮಾನ ಸಾಧನೆ ಪ್ರಶಸ್ತಿಯ ಗರಿ

By Suvarna News  |  First Published Nov 21, 2023, 5:54 PM IST

ಧಕ್​ ಧಕ್​ ಬೆಡಗಿ ಮಾಧುರಿ ದೀಕ್ಷಿತ್​ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಚಿತ್ರರಂಗದ ಸಾಧನೆಗಾಗಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.
 


ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2023ರಲ್ಲಿ ನಟಿ ಮಾಧುರಿ ದೀಕ್ಷಿತ್ ವಿಶೇಷ ಗೌರವಕ್ಕೆ ಆಯ್ಕೆ ಆಗಿದ್ದಾರೆ. ಭಾರತೀಯ ಸಿನಿಮಾಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಮಾಧುರಿ ದೀಕ್ಷಿತ್ ಅವರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ನಟಿ ಮಾಧುರಿ ಅವರಿಗೆ  ವಿಶೇಷ ಗೌರವ ಸಲ್ಲಿಸಲಾಯಿತು. ನಾಲ್ಕು ದಶಕಗಳ ಕಾಲದ  ಸಿನಿಮಾ ವೃತ್ತಿಜೀವನದೊಂದಿಗೆ, ಮಾಧುರಿ ದೀಕ್ಷಿತ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಮೂಡಿಸಿರುವ ಛಾಪನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಈ ಪ್ರಶಸ್ತಿಯನ್ನು ನೀಡಿದ್ದು, ಆ ಬಗ್ಗೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಭಾರತದ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರರಂಗದಲ್ಲಿ ಶ್ರೇಷ್ಠತೆಯನ್ನು ನೀಡಿದ ಪ್ರತಿಭಾವಂತ, ವರ್ಚಸ್ವಿ ನಟಿ ಮಾಧುರಿ ಅವರಿಗೆ 'ಭಾರತೀಯ ಸಿನಿಮಾಗೆ ಕೊಡುಗೆಗಾಗಿ ವಿಶೇಷ ಮನ್ನಣೆ' ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತೋಷವಿದೆ ಎಂದು ಸಚಿವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

 ಇನ್ನು ಮಾಧುರಿಯವರ ಕುರಿತು ಹೇಳುವುದಾದರೆ, ಇವರು,  1984ರಲ್ಲಿ 'ಅಬೋಧ್' ಚಲನಚಿತ್ರದೊಂದಿಗೆ ಬಂಗಾಳಿ ನಟ ತಪಸ್ ಪಾಲ್ ಅವರೊಂದಿಗೆ ಪದಾರ್ಪಣೆ ಮಾಡಿದರು. ಅದು, ಬಿಡುಗಡೆಯಾದ ನಂತರ, ಚಲನಚಿತ್ರವು ವಾಣಿಜ್ಯಿಕವಾಗಿ ವಿಫಲವಾಯಿತು. ಆದರೆ ಚಿತ್ರದಲ್ಲಿನ ಅವರ ಅಭಿನಯವು ಹೆಚ್ಚು ಮೆಚ್ಚುಗೆ ಪಡೆಯಿತು. 1985ರಲ್ಲಿ ಅವರ ಮುಂದಿನ ಚಿತ್ರ 'ಆವಾರಾ' ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು. ಆಕೆಯ ಮುಂದಿನ 6 ಬಿಡುಗಡೆಗಳು ಸ್ವಾತಿ, ಮಾನವ್ ಹತ್ಯಾ, ಹಿಫಾಜತ್ ಮತ್ತು ಉತ್ತರ ದಕ್ಷಿಣ್, ಮೊಹ್ರೆ, ಮತ್ತು ಖತ್ರೋನ್ ಕೆ ಖಿಲಾಡಿಗಳು ಕೂಡಾ ಫ್ಲಾಪ್‌ ಸಿನಿಮಾಗಳಾಗಿವೆ. 1988ರಲ್ಲಿ ಬಿಡುಗಡೆಯಾದ 'ದಯಾವನ್' ಚಿತ್ರವು ಸೂಪರ್‌ಹಿಟ್ ಆಯಿತು. ಅದರ ನಂತರದ ವರ್ಷ, ನಟಿ ಅನಿಲ್ ಕಪೂರ್ ನಟಿಸಿದ ತೇಜಾಬ್ ಆ ಕಾಲದ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿತ್ತು. ನಟಿ ನಂತರ ರಾಮ್ ಲಖನ್, ತ್ರಿದೇವ್, ಪ್ರೇಮ್ ಪ್ರತಿಜ್ಞಾ, ಇಲಾಕಾ, ಮುಜ್ರಿಮ್, ಕಿಶನ್ ಕನ್ಹಯ್ಯಾ, ಅಂಜಾಮ್, ಹಮ್ ಆಪ್ಕೆ ಹೈ ಕೌನ್, ಬೇಟಾ, ಅಂಜಾಮ್ ಮತ್ತು ಇತರ ಹಲವು ಹಿಟ್‌ಗಳನ್ನು ನೀಡಿದರು.

Tap to resize

Latest Videos

2024ರ ಲೋಕಸಭಾ ಚುನಾವಣೆಗೆ ನಟಿ ಮಾಧುರಿ ದೀಕ್ಷಿತ್ ಸ್ಪರ್ಧೆ ಸಾಧ್ಯತೆ, ಯಾವ ಪಕ್ಷ?

ಬಾಕ್ಸ್ ಆಫೀಸ್‌ನಲ್ಲಿ ಒಂದರ ಹಿಂದೆ ಒಂದರಂತೆ ಹಿಟ್‌ಗಳನ್ನು ನೀಡಿದ ನಂತರ, ಮಾಧುರಿ ದೀಕ್ಷಿತ್ ಅವರು ಭಾರಿ ಪ್ರತಿ ಚಿತ್ರಕ್ಕೆ 50 ಲಕ್ಷ ರೂ. ಸಂಭಾವನೆ ಪಡೆದುಕೊಳ್ಳಲು ಆರಂಭಿಸಿದರು. ವರದಿಗಳ ಪ್ರಕಾರ, 'ಹಮ್ ಆಪ್ಕೆ ಹೈ ಕೌನ್' ಚಿತ್ರಕ್ಕಾಗಿ ನಟಿ ಸಲ್ಮಾನ್ ಖಾನ್ ಅವರಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ಚಿತ್ರದ ಭಾಗವಾಗಿದ್ದ ಅನುಪಮ್ ಖೇರ್ ಅವರು ಒಮ್ಮೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು. ಮಾಧುರಿ ದೀಕ್ಷಿತ್ 2022ರಲ್ಲಿ OTT ಪಾದಾರ್ಪಣೆ ಮಾಡಿದರು. ಫೇಮ್ ಗೇಮ್ ಶೀರ್ಷಿಕೆಯ ವೆಬ್ ಸರಣಿಯಲ್ಲಿ ನಟಿಯ ಅಭಿನಯವು ಪ್ರೇಕ್ಷಕರಿಂದ ಹೆಚ್ಚು ಇಷ್ಟವಾಯಿತು. ಈ ಸರಣಿಯಲ್ಲಿ ಸಂಜಯ್ ಕಪೂರ್, ಮಾನವ್ ಕೌಲ್, ಸುಹಾಸಿನಿ ಮುಲಾಯ್, ಮತ್ತು ರಾಜಶ್ರೀ ದೇಶಪಾಂಡೆ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೀಕ್ಷಕರು ಈಗ ಸರಣಿಯ ಸೀಸನ್ 2ಗಾಗಿ ಕಾಯುತ್ತಿದ್ದಾರೆ

1980 ರ ದಶಕ, 1990 ರ ದಶಕ ಮತ್ತು 2000 ರ ದಶಕದ ಆರಂಭದಲ್ಲಿ ಹಿಂದಿ ಚಲನಚಿತ್ರ ನಟಿ ಮಾಧುರಿ ದೀಕ್ಷಿತ್ ಅವರು ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದರು. ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿಗೆ 14 ಬಾರಿ ನಾಮನಿರ್ದೇಶನಗೊಂಡರು. ಮಾಧುರಿ ದೀಕ್ಷಿತ್ 'ಅಬೋಧ್' (1984) ಚಿತ್ರದೊಂದಿಗೆ ಸಿನಿ ಜರ್ನಿ ಪ್ರಾರಂಭಿಸಿದರು. 2014 ರಲ್ಲಿ, ಅವರು ಭಾರತದಲ್ಲಿ UNICEF ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡರು. 2024ರ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿರುವ ನಡುವೆಯೇ ಮಾಧುರಿ ಅವರ ಹೆಸರೂ ಕೇಳಿಬರುತ್ತಿದೆ.  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ಮಾಧುರಿ ದೀಕ್ಷಿತ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಅನ್ನೋ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ. 

ಎಮ್ಮಿ ಅವಾರ್ಡ್​: ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ನಿರ್ಮಾಪಕಿ ಏಕ್ತಾ ಕಪೂರ್​!
 

click me!