ಬಿಗ್ಬಾಸ್ ಮನೆಯಲ್ಲೇ ಗರ್ಭಿಣಿಯಾದೆಯೆಂದ ನಟಿ ಅಂಕಿತಾ ಮಾಜಿ ಪ್ರೇಮಿ ಸುಶಾಂತ್ ಸಿಂಗ್ ಕುರಿತು ಹೇಳಿದ್ದೇನು?
ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ಬಾಸ್ ಸಕತ್ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣ, ಇದರ ಸ್ಪರ್ಧಿ ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ. ಅಷ್ಟಕ್ಕೂ ಅಂಕಿತಾ ಮತ್ತು ಅವರ ಪತಿ ವಿಕ್ಕಿ ಜೈನ್ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್ ಸುದ್ದಿಯಲ್ಲಿದ್ದಾರೆ. ಈ ಸಲದ ಬಿಗ್ ಬಾಸ್ ಉಳಿದ ಸೀಸನ್ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ ಕಾರಣ ಇವರಿಬ್ಬರ ಕಚ್ಚಾಟ. ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದರು. ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋ ವೈರಲ್ ಆಗಿತ್ತು.
ಇವೆಲ್ಲಾ ಡ್ರಾಮಾಗಳ ನಡುವೆಯೇ ಅಂಕಿತಾ ತಾವು ಗರ್ಭಿಣಿ ಇರಬಹುದು ಎಂದು ಸುದ್ದಿ ಮಾಡಿ ವಾರ ಕಳೆಯುತ್ತಾ ಬಂದಿದೆ. ತಾವು ಬಹುಶಃ ಗರ್ಭಿಣಿ ಇರಬಹುದು ಎಂದು ಅಂಕಿತಾ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ತಮಗೆ ಹುಳಿ ತಿನಬೇಕೆಂದು ಅನಿಸುತ್ತಿದೆ, ತಮಗೆ ಪಿರಿಯಡ್ಸ್ ಮಿಸ್ ಆಗಿದೆ ಎಂದು ಹೇಳಿದ್ದು, ಬಹುಶಃ ಆಕೆ ಗರ್ಭಿಣಿ ಎಂದು ಈ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿತ್ತು. ಆದರೆ ವೈದ್ಯಕೀಯ ವರದಿಗೆ ಮೂತ್ರವನ್ನು ಕಳುಹಿಸಿರುವುದಾಗಿ ಹೇಳಿ ಹಲವು ದಿನಗಳು ಕಳೆದರೂ ಈ ಬಗ್ಗೆ ಬಿಗ್ಬಾಸ್ ಮತ್ತು ನಟಿ ಇಬ್ಬರೂ ಮೌನವಾಗಿದ್ದಾರೆ. ಇವೆಲ್ಲವೂ ಪ್ರಚಾರದ ಗಿಮಿಕ್ ಎಂದು ಪ್ರೇಕ್ಷಕರು ಸಕತ್ ಟ್ರೋಲ್ ಮಾಡುತ್ತಿದ್ದಾರೆ.
ಬಿಗ್ಬಾಸ್ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?
ಅಷ್ಟಕ್ಕೂ ವಿಕ್ಕಿ ಅವರನ್ನು ಮದುವೆಯಾಗುವ ಮುನ್ನ ನಟಿ ಅಂಕಿತಾ (Ankita Lokhande) ಮತ್ತು ದಿವಂಗತ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಜೊತೆ ಸಂಬಂಧದಲ್ಲಿದ್ದರು. 2010ರಿಂದ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಆದರೆ 2016 ರಲ್ಲಿ ಅವರು ತಮ್ಮ ಸಂಬಂಧವನ್ನು ಕೊನೆಗೊಳಿಸಿದರು. ಆ ಸಮಯದಲ್ಲಿ, ಅವರ ವಿಭಜನೆಯ ಹಿಂದಿನ ನಿರ್ದಿಷ್ಟ ಕಾರಣಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಕೊನೆಗೆ ಅಂಕಿತಾ ಮಾತನಾಡಿ, ತಮ್ಮ ಬ್ರೇಕಪ್ ಬಗ್ಗೆ ಸುಶಾಂತ್ ತನಗೆ ಯಾವುದೇ ವಿವರಣೆಯನ್ನು ನೀಡಿಲ್ಲ ಎಂದಿದ್ದರು. ಆತ ಇದ್ದಕ್ಕಿದ್ದಂತೆ ರಾತ್ರಿ ಕಣ್ಮರೆಯಾದ. ಯಶಸ್ಸನ್ನು ಪಡೆಯುತ್ತಿದ್ದ ದಿನಗಳವು. ಜನರು ಅವನನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದಿದ್ದ ನಟಿ ತಮ್ಮ ಸಂಬಂಧ ಬೇರ್ಪಡಿಸಲು ಕಾರಣ ತಿಳಿಸಲಿಲ್ಲ.
ಎಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಫ್ಲ್ಯಾಟ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿ ಮೂರು ವರ್ಷಗಳೇ ಕಳೆದುಹೋಗಿವೆ. 2020 ರಲ್ಲಿ ಮುಂಬೈನ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ ಅವರ ಶವ ಸಂಸ್ಕಾರಕ್ಕೆ ಅಂಕಿತಾ ಗೈರು ಆಗಿದ್ದು ಎಲ್ಲರೂ ಥಹರೇವಾರಿ ಆಡಿಕೊಂಡಿದ್ದರು. ಮಾಜಿ ಪ್ರೇಮಿಯ ಶವ ಸಂಸ್ಕಾರಕ್ಕೆ ಅಂಕಿತಾ ಹೋಗದೇ ಇದ್ದ ಬಗ್ಗೆ ಹಲವಾರು ರೀತಿಯಲ್ಲಿ ಸುದ್ದಿಗಳಾಗಿದ್ದವು. ಈಗ ಆ ಬಗ್ಗೆ ಅಂಕಿತಾ ಲೋಖಂಡೆ ಮೌನ ಮುರಿದಿದ್ದಾರೆ. ಅವನು ಒಳ್ಳೆಯ ವ್ಯಕ್ತಿಯಾಗಿದ್ದ ಎಂದಿರುವ ಅಂಕಿತಾ, ಹೀಗೆ ಆಗಿದ್ದ ಎಂದು ಹೇಳಲು ನೋವು ಉಂಟಾಗುತ್ತದೆ. ಆತನ ಸಾವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸುಶಾಂತ್ ಕೂಡ ವಿಕ್ಕಿಯ ಸ್ನೇಹಿತ ಎಂದಿದ್ದಾರೆ.
ಆತ ಯಾಕೆ ಸತ್ತ ಎಂಬ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ನಮ್ಮಿಬ್ಬರ ಸ್ನೇಹದ ಬಗ್ಗೆ ಹಲವಾರು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗಿತ್ತು. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದ ನಟಿ, ಸುಶಾಂತ್ ಅವರ ಅಂತ್ಯಸಂಸ್ಕಾರಕ್ಕೆ ತಾವು ಭಾಗಿಯಾಗದ ಕುರಿತು ಮಾಹಿತಿ ನೀಡಿದ್ದಾರೆ. ನಾನು ಆತನ ಅಂತ್ಯಕ್ರಿಯೆಗೂ ಹೋಗಲಿಲ್ಲ. ಏಕೆಂದರೆ ನನಗೆ ಅದನ್ನು ತಡೆದುಕೊಳ್ಳುವ ಶಕ್ತಿ ಇಲ್ಲವಾಗಿತ್ತು. ಆತನ ಶವ ನೋಡಲು ಸಾಧ್ಯವಿಲ್ಲವಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಹೋಗುವಂತೆ ವಿಕ್ಕಿ ಕೂಡ ಬಲವಂತ ಮಾಡಿದ್ರು. ಆದರೂ ನಾನು ಶವವಾಗಿ ಬಿದ್ದಿರುವ ಸುಶಾಂತ್ನನ್ನು ಹೇಗೆ ನೋಡಲಿ? ಅದಕ್ಕೇ ಹೋಗಲಿಲ್ಲ ಎಂದಿದ್ದಾರೆ.
ಸಂಗೀತಾ ಸೇಡಿಗೆ ಕಾರ್ತಿಕ್ ತಲೆಗೂದಲು ಬಲಿ! ಎರಡು ತಲೆ ಹಾವು ಅಂತಿದ್ದಾರೆ ಬಿಗ್ಬಾಸ್ ಫ್ಯಾನ್ಸ್