ಕೇವಲ 5% ಸಂಭಾವನೆ ಕೊಟ್ಟು ಕರ್ಕಿ ಅಂತಾರೆ ಡುಮ್ಮಿ ಅಂತಾರೆ: ಭೂಮಿ ಪೆಡ್ನೆಕರ್ ಗರಂ

Published : Apr 22, 2023, 11:37 AM IST
ಕೇವಲ 5% ಸಂಭಾವನೆ ಕೊಟ್ಟು ಕರ್ಕಿ ಅಂತಾರೆ ಡುಮ್ಮಿ ಅಂತಾರೆ: ಭೂಮಿ ಪೆಡ್ನೆಕರ್ ಗರಂ

ಸಾರಾಂಶ

 ನಾಯಕರಿಗಿಂತ ಕಡಿಮೆ ಸಂಭಾವನೆ ಕೊಡುತ್ತಾರೆ. ಮಹಿಳಾ ಪ್ರಧಾನ ಸಿನಿಮಾಗಳು ಬಂದು ನಮ್ಮನ್ನು ಉಳಿಸಿದೆ ಎಂದು ಭೂಮಿ...  

ಹಿಂದಿ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿ ಸಖತ್ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಭೂಮಿ ಪೆಡ್ನೆಕರ್ ತಮ್ಮ ಅಭಿಪ್ರಾಯವನ್ನು ಸದಾ ನೇರವಾಗಿ ಹೇಳುತ್ತಾರೆ. ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಪ್ರವೇಶ ಮಾಡಿರುವ ನಟಿ ಬಾಡಿ ಶೇಮಿಂಗ್ ಹಾಗೂ ಸಂಭಾವನೆ ವಿಚಾರದಲ್ಲಿ ಸದಾ ನೇರಾ ನೇರಾ. 

'ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಿಂದಲೂ ಕಷ್ಟಗಳನ್ನು ನೋಡಿಕೊಂಡು ಬಂದಿದ್ದೀನಿ. ಒಂದೊಂದು ವರ್ಷ ತುಂಬಾ ಕಷ್ಟ ಕೂಡ ಅನುಭವಿಸಿರುವೆ. ನನ್ನ ಜರ್ನಿಯಲ್ಲಿ ಹೆಚ್ಚಿಗೆ ಸಿನಿಮಾಗಳನ್ನು ಮಾಡಿಲ್ಲ.ಈಗ ನಾನು ಯಾವ ಸ್ಥಾನದಲ್ಲಿ ಇದ್ದೀನಿ ಅದಕ್ಕೆ ನಾನು ಕಾರಣ ಏಕೆಂದರೆ ಆ ರೀತಿ ಕಥೆಗಳನ್ನು ನಾನು ಆಯ್ಕೆ ಮಾಡಿಕೊಳ್ಳುವೆ. ಚಿತ್ರರಂಗದ ಆರಂಭದಲ್ಲಿ ಸಂಭಾವನೆ ವಿಚಾರಕ್ಕೆ ಬೇಸರವಾಗುತ್ತು ಹಾಗಂತ ಮತ್ತೊಬ್ಬರ ಸಂಭಾವನೆ ಜೊತೆ ನನ್ನ ಸಂಭಾವನೆಯನ್ನು ಹೋಲಿಸಿಕೊಂಡು ಮಾತನಾಡುವುದಿಲ್ಲ ಆದರೆ ಕೆಲವೊಂದು ಸಿನಿಮಾದಲ್ಲಿ ನಾಯಕರಿಗೆ ಕೊಟ್ಟಿರುವಷ್ಟು ಸಂಭಾವನೆಯಲ್ಲಿ 5% ಮಾತ್ರ ನನಗೆ ಕೊಟ್ಟಿದ್ದಾರೆ. ನನಗಿಂತ ಕಡಿಮೆ ಸಿನಿಮಾ ಮಾಡಿದ್ದಾರೆ ಆದರೂ ನಾಯಕರಿಗೆ ಹೆಚ್ಚಿಗೆ ಸಂಭಾವನೆ ಕೊಡುತ್ತಾರೆ. ಈಗ ಎಲ್ಲವೂ ಬದಲಾಗಿದೆ. ಮಹಿಳಾ ಪ್ರಧಾನ ಪಾತ್ರಗಳು ಹೆಚ್ಚಾಗಿರುವ ಕಾರಣ ಹೆಣ್ಣು ಮಕ್ಕಳ ಸಂಭಾವನೆಯಲ್ಲಿ ಬದಲಾವಣೆ ನೋಡಬಹುದು' ಎಂದು 3 ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಭೂಮಿ ಮಾತನಾಡಿದ್ದಾರೆ.

'ಆ' ಟೈಪ್ ಸೀನ್‌ ಮಾಡಲು ಹುಡುಗರಿಗೆ ನಾಚಿಕೆ; ನಟಿ ತಮನ್ನಾ ಹೇಳಿಕೆಗೆ ಶಾಕ್ ಆದ ನೆಟ್ಟಿಗರು

'ನನ್ನ ಸಿನಿಮಾ ನೋಡಿದಾಗ ಎಷ್ಟು ಪಾಸಿಟಿವ್ ಕಾಮೆಂಟ್ ಕೊಡುತ್ತಾರೆ ಅಷ್ಟೇ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ..ದಯವಿಟ್ಟು ಮುಂದಿನ ದಿನಗಳಲ್ಲಿ ಸಿನಿಮಾ ಮಾಡಬೇಡಿ ನೀನು ನೀನಾಗಿ ಕಾಣಿಸುವುದಿಲ್ಲ ವಯಸ್ಸಾದಂತೆ ಕಾಣಿಸುತ್ತೀರಿ, ಕಪ್ಪು ಹುಡುಗಿ ಪಾತ್ರವನ್ನು ಯಾಕೆ ಮಾಡುತ್ತೀರಿ, ತಾಯಿ ಪಾತ್ರ ಸೂಕ್ತವಲ್ಲ ಹಾಗೆ ಹೀಗೆ ಎಂದು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಕಥೆ ಓದಿ ತಕ್ಷಣ ಸಿನಿಮಾ 100 ಕೋಟಿ ಮಾಡುತ್ತೆ 200 ಕೋಟಿ ಮಾಡುತ್ತೆ ಅನ್ನೋ ಲೆಕ್ಕಚಾರ ಹಾಕುವುದಿಲ್ಲ ಪಾತ್ರ ಇಷ್ಟವಾದರೆ ಕಥೆಗೆ ಸಹಿ ಮಾಡುವೆ. ಒಂದು ಸಿನಿಮಾ ನಂತರ ನಾನು ತುಂಬಾ ತೂಕ ಹೆಚ್ಚಿಸಿಕೊಂಡೆ ಹೀಗೆಲ್ಲಾ ಆಗುವುದು ನನಗೆ ಮಾತ್ರವಲ್ಲ ಎಲ್ಲರಿಗೂ ಅಗುತ್ತದೆ ನನ್ನ ಸುತ್ತ ಅನೇಕರಿಗೆ ಬಾಡಿ ಶೇಮಿಂಗ್ ಅಗಿರುವುದನ್ನು ನೋಡಿದ್ದೀನಿ. ಬಾಲ್ಯದಲ್ಲಿ ನಾನು ದಪ್ಪ ಎಂದು ಹೇಳಿದರೆ ಬೇಸರ ಮಾಡಿಕೊಳ್ಳುವುದಿಲ್ಲ ಏಕೆಂದರೆ ನಾನು ಚಬ್ಬಿ ಮಗುವಾಗಿದ್ದೆ. ಸೊಸೈಟಿಯಲ್ಲಿ ಕೆಲವೊಂದಯ ಬ್ಯುಟಿ ಸ್ಟ್ಯಾಂಡರ್ಸ್‌ಗಳಿದೆ ಅದನ್ನು ಮುರಿಯಬೇಕು ಅಂತ ಈ ರೀತಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು. ನಾರ್ಮಲ್ ಪಾತ್ರ ಆಯ್ಕೆ ಮಾಡಿದರೆ ಯಾರೂ ನನ್ನನ್ನು ನೆನಪು ಇಟ್ಟಿಕೊಳ್ಳುವುದಿಲ್ಲ ಆದರೆ ಈ ರೀತಿ ಮಾಡುವುದಕ್ಕೆ ಪ್ರಶ್ನೆ ಮಾಡುವುದು ನೆನಪು ಮಾಡಿಕೊಳ್ಳುವುದು' ಎಂದು ಭೂಮಿ ಹೇಳಿದ್ದಾರೆ.

ನಿನ್ನೆ ಚೂಡಿದಾರ ಹಾಕ್ಕೊಂಡು ಇವತ್ತು ಹಿಂಗ್ ಬಂದಲ್ಲಮ್ಮ; ಭೂಮಿ ಪಡ್ನೆಕರ್‌ ಏರ್‌ಪೋರ್ಟ್‌ ಲುಕ್!

'ಜನರಿಗೆ ಯಾರು ಹೇಗಿದ್ದರೂ ಸಮಸ್ಯೆನೇ...ತುಂಬಾ ಉದ್ದ, ತುಂಬಾ ಸಣ್ಣ, ತುಂಬಾ ಕುಳ್ಳಿ, ತುಂಬಾ ಕಪ್ಪು ...ಹೇಳುತ್ತಲೇ ಇರುತ್ತಾರೆ. ಸತ್ಯ ಏನೇದರೆ ಎಲ್ಲರೂ ಒಂದು ಸಮಸ್ಯೆಗಳು ಇರುತ್ತದೆ ಅದನ್ನು ನಾನು ಒಪ್ಪಿಕೊಂಡು ಮುಂದುವರೆಯಬೇಕು. ನಾನು ಕಲಾವಿದೆ ಪ್ರತಿ ಪಾತ್ರಕ್ಕೂ ನಾವು ಬದಲಾಗಬೇಕು. ಪಾತ್ರ ಹೀಗಿದೆ ನಾನು ಮಾಡೋಕೆ  ಆಗಲ್ಲ ಅಂದ್ರೆ ಖಂಡಿತಾ ನಾನು ಕಲಾವಿದೆ ಅಲ್ಲ. ಒಂದು ವೇಳೆ ಆಗೋಲ್ಲ ಮಾಡಲ್ಲ ಅಂತ ಹೇಳಿದರೂ ಈಕೆ ಬಾರ್ಬಿ ಡಾಲ್ ರೀತಿ ಕಾಣಿಸಬೇಕು ಎಂದು ಕಾಮೆಂಟ್ ಮಾಡುತ್ತಾರೆ. ನನ್ನ ಜರ್ನಿ ತುಂಬಾ ಚೆನ್ನಾಗಿದೆ ಯಾರ ಜೊತೆಗೂ ನನ್ನನ್ನು ಹೋಲಿಸಿಕೊಳ್ಳುವುದಿಲ್ಲ. ಶ್ರಮದಿಂದ ಕೆಲಸ ಮಾಡಿ ಅವಕಾಶಗಳನ್ನು ಪಡೆಯುತ್ತಿರುವ ಹೀಗಾಗಿ ನನ್ನ ಟ್ಯಾಲೆಂಟ್‌ಗೆ ಬೆಲೆ ಸಿಗುತ್ತದೆ. ನಾನು ಮಾತ್ರವಲ್ಲ ನಮ್ಮ ಸುತ್ತ ಇರುವವರು ಚೆನ್ನಾಗಿ ಹೆಸರು ಮಾಡಬೇಕು.  ಚಿಕ್ಕ ವಯಸ್ಸಿಗೆ ನಾನು ಜರ್ನಿ ಆರಂಭಿಸಿದೆ ನನ್ನನ್ನು ನಾನು ನೋಡಿಕೊಳ್ಳಬಹುದು ಎಂದು ಅವರಿಗೆ ತೋರಿಸಿದೆ. ಈಗ ಅವರನ್ನು ನೋಡಿಕೊಳ್ಳುವ ಶಕ್ತಿ ಸಿಕ್ಕಿದೆ' ಎಂದಿದ್ದಾರೆ ಭೂಮಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?