ಹಿರಿಯ ನಟಿ ಲಕ್ಷ್ಮೀ ಪುತ್ರಿಗೆ ಲೈಂಗಿಕ ಕಿರುಕುಳ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಐಶ್ವರ್ಯಾ

Published : Apr 22, 2023, 10:51 AM IST
ಹಿರಿಯ ನಟಿ ಲಕ್ಷ್ಮೀ ಪುತ್ರಿಗೆ ಲೈಂಗಿಕ ಕಿರುಕುಳ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಐಶ್ವರ್ಯಾ

ಸಾರಾಂಶ

ಲೈಂಗಿಕ ಕಿರುಕುಳ ಎದುರಿಸುತ್ತಿರುವ ಬಗ್ಗೆ ಹಿರಿಯ ನಟಿ ಲಕ್ಷ್ಮೀ ಪುತ್ರಿ ಐಶ್ವರ್ಯಾ ಭಾಸ್ಕರ್ ಬಹಿರಂಗ ಪಡಿಸಿದ್ದಾರೆ. 

ಐಶ್ವರ್ಯಾ ಭಾಸ್ಕರನ್ ಕನ್ನಡಿಗರಿಗೆ ಅಷ್ಟು ಪರಿಚಿತರಿಲ್ಲದೇ ಇರಬಹುದು ಆದರೆ ಮಲಯಾಳಂ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದ ನಟಿ. ಕನ್ನಡಿಗರಿಗೆ ಐಶ್ವರ್ಯಾ ಭಾಸ್ಕರನ್ ಎನ್ನುವುದಕ್ಕಿಂತ ಜೂಲಿ ಲಕ್ಷ್ಮಿ ಪುತ್ರಿ ಎಂದರೆ ಬಹುಬೇಗ ಗೊತ್ತಾಗಲಿದೆ. ಹೌದು ಖ್ಯಾತ ನಟಿ ಲಕ್ಷ್ಮಿ ಅವರ ಪುತ್ರಿ ಐಶ್ವರ್ಯಾ ಕಳೆದ ಕೆಲವು ತಿಂಗಳ ಹಿಂದೆ ಸುದ್ದಿಯಲ್ಲಿದ್ದರು. ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇನೆ ಎಂದು ಐಶ್ವರ್ಯಾ ಈ ಹಿಂದೆ ಸಂದರ್ಶನದಲ್ಲಿ ನೀಡಿದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀದ ಮತ್ತೊಂದು ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಆನ್‌ಲೈನ್‌ ಲೈಂಗಿಕ ಕಿರುಕುಳ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದೆ ಆದರೆ ತನ್ನ ಮಗಳ ಸಲಹೆ ಮೇರೆಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ. 

ಮಲಯಾಳಂ ಜೊತೆಗೆ ನಟಿ ಐಶ್ವರ್ಯಾ ತೆಲುಗು ತಮಿಳಿನ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಹಲವು ಟಿವಿ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಜೀವನಕ್ಕಾಗಿ ಸೋಪು ಮಾರಾಟ ಮಾಡುತ್ತಿರುವ ಐಶ್ವರ್ಯಾ ಈಗಲೂ ಅದೇ ಬ್ಯುಸಿನೆಸ್ ಮುಂದುವರೆಸಿದ್ದಾರೆ. ತಮ್ಮ ಸೋಪನ್ನು ಹೆಚ್ಚು ಮಂದಿಗೆ ತಲುಪಿಸುವ ನಿಟ್ಟಿನಲ್ಲಿ ಸಂದರ್ಶನವೊಂದರಲ್ಲಿ ತಮ್ಮ ಮೊಬೈಲ್ ನಂಬರ್ ಅನ್ನು ನಟಿ ಬಹಿರಂಗಪಡಿಸಿದ್ದರು. ಆಗಿನಿಂದ ಅವರಿಗೆ ಕಿರುಕುಳ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. 

ಯೂಟ್ಯೂಬ್ ವಾಹಿನಿಯಲ್ಲಿ ಮಾತನಾಡಿರುವ ಐಶ್ವರ್ಯಾ, 'ಮೊಬೈಲ್​ ನಂಬರ್​ಗೆ ಅನೇಕರು  ಕಟ್ಟ-ಕೆಟ್ಟದಾಗಿ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಕೆಲವು ಪುರುಷರು ತಮ್ಮ ಖಾಸಗಿ ಭಾಗದ ಚಿತ್ರಗಳನ್ನು ಕಳಿಸಿದ್ದಾರೆ. ಇನ್ನು ಕೆಲವರು ತಮ್ಮ ಚಿತ್ರವನ್ನು ಎಡಿಟ್ ಮಾಡಿ ಅಸಭ್ಯವಾಗಿ ಮಾಡಿ ಮಾಡಿ ನನಗೇ ಕಳಿಸಿದ್ದಾರೆ. ಅಸಹ್ಯವಾದ ಕಮೆಂಟ್​ಗಳನ್ನು ಮಾಡಿದ್ದಾರೆ ಇದರಿಂದ ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ತೀವ್ರ ಕಿರುಕುಳ ನೀಡುತ್ತಿದ್ದಾರೆ, ಕರೆ ಮಾಡಿ ಕೆಟ್ಟದಾಗಿ ಮಾತನಾಡಿದ್ದಾರೆ' ಎಂದು ಐಶ್ವರ್ಯಾ ಅಳಲು ತೋಡಿಕೊಂಡಿದ್ದಾರೆ. 

ಟಾಯ್ಲೆಟ್ ಬೇಕಾದರೂ ತೊಳೆಯುತ್ತೇನೆ: ಜ್ಯೂಲಿ ಲಕ್ಷ್ಮಿ ಮಗಳು, ಅಂಥದ್ದೇನಾಯ್ತು ಈ ಸ್ಟಾರ್ ನಟಿಗೆ?

'ನಾನು ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಬೇಡ ಎಂದುಕೊಂಡು ಸುಮ್ಮನಿದ್ದೆ ಆದರೆ ನನ್ನ ಮಗಳೇ ಇದರ ವಿರುದ್ಧ ಏನಾದರೂ ಕ್ರಮ ಜರುಗಿಸಲೇ ಬೇಕು ಎಂದು ಹೇಳಿದಳು, ಹಾಗಾಗಿ ಈ ಬಗ್ಗೆ ಮಾತನಾಡುತ್ತಿದ್ದೇನೆ, ಪೊಲೀಸರಿಗೆ ದೂರು ನೀಡುವ ಉದ್ದೇಶವೂ ಇರಲಿಲ್ಲ ಆದರೆ ದಿನೇ-ದಿನೇ ಕಿರುಕುಳ ಹೆಚ್ಚಾದ ಕಾರಣ ಅದರ ಬಗ್ಗೆಯೂ ಯೋಚಿಸುತ್ತದ್ದೇನೆ. ನನಗೆ ಕೆಟ್ಟದಾಗಿ ಸಂದೇಶ ಕಳಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ' ಎಂದಿದ್ದಾರೆ.

ನಾನು ನನ್ನ ತಾಯಿ ಜವಾಬ್ದಾರಿ ಅಲ್ಲ, ಮುಚ್ಕೊಂಡು ಕೆಲಸ ಮಾಡಬೇಕು: ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಹೇಳಿಕೆ

ಐಶ್ವರ್ಯಾ ಭಾಸ್ಕರ್, ತನ್ವೀರ್ ಅಹಮ್ಮದ್ ಎನ್ನುವ ವ್ಯಕ್ತಿ ಜೊತೆ ಮದುವೆಯಾಗಿದ್ದರು. ಈ ದಾಂಪತ್ಯಕ್ಕೆ ಒಬ್ಬಳು ಮಗಳೂ ಹುಟ್ಟಿದ್ದಾಳೆ. ಆದರೆ ಮದುವೆಯಾಗಿ ಕೆಲವೇ ಸಮಯಕ್ಕೆ ವೈಮನಸ್ಸು ಬಂದು ಇಬ್ಬರೂ ಬೇರೆ ಬೇರೆ ಆದರು. ಸದ್ಯ ಐಶ್ವರ್ಯಾ ಮಗಳ ಜೊತೆ ಸಿಂಗಲ್ ಆಗಿಯೇ ಜೀವನ ನಡೆಸುತ್ತಿದ್ದಾರೆ. ನಟಿ ಐಶ್ವರ್ಯಾ ಅವರಿಗೆ ಅನೇಕರು ಬೆಂಬಲ ಸೂಚಿಸುತ್ತಿದ್ದಾರೆ. ಧೈರ್ಯ ತುಂಬುತ್ತಿದ್ದಾರೆ.    

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?