ಪುಷ್ಪಾ 'ಐಟಂ ಸಾಂಗ್' ಮಾಡಬೇಡ ಅಂದ್ರೂ ಮಾಡಿದ್ರಂತೆ ಸಮಂತಾ; ನೋಡಿ, ಅಸಲಿಯತ್ತಿನ ಗಮ್ಮತ್ತು!

Published : Feb 11, 2024, 07:56 PM ISTUpdated : Feb 12, 2024, 06:24 PM IST
ಪುಷ್ಪಾ 'ಐಟಂ ಸಾಂಗ್' ಮಾಡಬೇಡ ಅಂದ್ರೂ ಮಾಡಿದ್ರಂತೆ ಸಮಂತಾ; ನೋಡಿ, ಅಸಲಿಯತ್ತಿನ ಗಮ್ಮತ್ತು!

ಸಾರಾಂಶ

ನಟಿ ಸಮಂತಾ ಅವರು ತಾವು 'ಪುಷ್ಪಾ' ಚಿತ್ರದಲ್ಲಿ ಮಾಡಿದ 'ಐಟಂ ಸಾಂಗ್' ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ನಾಯಕತ್ವದ 'ಪುಷ್ಪಾ' ಚಿತ್ರದಲ್ಲಿ ನಟಿ ಸಮಂತಾ ಅವರು 'ಹೂಂ ಅಂಟಾವಾ ಮಾವಾ..' ಎಂದು ಹಾಡುತ್ತ ಸೊಂಟ ಬಳುಕಿಸಿದ್ದು, ಆ ಹಾಡು ಸೂಪರ್ ಹಿಟ್ ಆಗಿತ್ತು..

ನಟಿ ಸಮಂತಾ ಅವರು ತಮ್ಮ ಗತಕಾಲದ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ. ಸಮಂತಾ ಅವರು ಅಕ್ಕಿನೇನಿ ನಾಗಾರ್ಜುನ ಮಗ, ನಟ ನಾಗ ಚೈತನ್ಯ ಅವರನ್ನು ಮದುವೆಯಾಗಿ, ಬಳಿಕ ಡಿವೋರ್ಸ ಕೊಟ್ಟಿದ್ದು ಗೊತ್ತೇ ಇದೆ. ಆದರೆ ಈ ವೇಳೆಯಲ್ಲಿ ನಟಿ ಸಮಂತಾ ಅನುಭವಿಸಿದ ಕೆಲವು ಮಾನಸಿಕ ಹಿಂಸೆಗಳು ಹಾಗೂ ಫ್ಯಾಮಿಲಿ, ಫ್ರೆಂಡ್ಸ್ ಹಾಗು ಅವರ ಹಿತೈಷಿಗಳು ನೀಡಿದ್ದ ಸಲಹೆಗಳ ಬಗ್ಗೆ ನಟಿ ಸಮಂತಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅಂತಹ ಒಂದು ಮುಖ್ಯ ಘಟನೆ ಬಗ್ಗೆ ಸಮಂತಾ ಏನು ಹೇಳಿದ್ದಾರೆ ನೋಡಿ!

ಹೌದು, ನಟಿ ಸಮಂತಾ ಅವರು ತಾವು 'ಪುಷ್ಪಾ' ಚಿತ್ರದಲ್ಲಿ ಮಾಡಿದ 'ಐಟಂ ಸಾಂಗ್' ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ನಾಯಕತ್ವದ 'ಪುಷ್ಪಾ' ಚಿತ್ರದಲ್ಲಿ ನಟಿ ಸಮಂತಾ ಅವರು 'ಹೂಂ ಅಂಟಾವಾ ಮಾವಾ..' ಎಂದು ಹಾಡುತ್ತ ಸೊಂಟ ಬಳುಕಿಸಿದ್ದು, ಆ ಹಾಡು ಸೂಪರ್ ಹಿಟ್ ಆಗಿ ಭಾರತವನ್ನೂ ಮೀರಿ ಹಾರಿ ಹೋಗಿದ್ದು ಎಲ್ಲವೂ ಎಲ್ಲರಿಗೂ ಗೊತ್ತು. ಆದರೆ, ಅದನ್ನು ಸಮಂತಾ ಒಪ್ಪಿ ಮಾಡುವ ಮೊದಲು ಏನಾಗಿತ್ತು ಅವರ ಕಥೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸಮಂತಾ ಮಾತನಾಡಿದ್ದಾರೆ. 

ರಾಕ್‌ಲೈನ್ ವೆಂಕಟೇಶ್ ನಂಗೆ ಒಂದು ದೊಡ್ಡ ಶಕ್ತಿಯಾಗಿ ನಿಂತವರು; ಸುಮಲತಾ ಅಂಬರೀಷ್

'ನಾವು ಆಗಷ್ಟೇ ಡಿವೋರ್ಸ್‌ ಅನೌನ್ಸ್ ಮಾಡಿದ್ದೆವು. ಅಷ್ಟರಲ್ಲಿ ನನಗೆ ಪುಷ್ಪಾ ಚಿತ್ರದಲ್ಲಿ ಒಂದು 'ಐಟಂ' ಸಾಂಗ್ ಮಾಡುವಂತೆ ಆಫರ್ ಬಂದಿತ್ತು. ಅದನ್ನು ತಿಳಿದ ನನ್ನ ಫ್ಯಾಮಿಲಿ, ಫ್ರೆಂಡ್ಸ್ ಹಾಗು ಹಿತೈಷಿಗಳು ನೀನು ಯಾವುದೇ ಕಾರಣಕ್ಕೂ ಈಗ ಅದನ್ನೆಲ್ಲ ಮಾಬೇಡ ಎಂದು ಸಲಹೆ-ಸೂಚನೆ ಕೊಟ್ಟಿದ್ದರು. ಈ ಸಮಯದಲ್ಲಿ ನೀನು ಸುಮ್ಮನೇ ಮನೆಯಲ್ಲಿ ಕುಳಿತಿರು, ಯಾವ ಐಟಂ ಸಾಂಗ್ ಕೂಡ ಮಾಡಬೇಡ ಎಂದಿದ್ದರು. ಆದರೆ, ನಾನು ಮಾಡುತ್ತೇನೆ ಎಂದೇ ಹೇಳಿದ್ದೆ. ಎಕೆಂದರೆ, ನಾನು ಏನೂ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿತ್ತು' ಎಂದಿದ್ದಾರೆ ನಟಿ ಸಮಂತಾ.

ನಾನು ದೇಹವಲ್ಲ, ಮನಸ್ಸೂ ಅಲ್ಲ ಅಂದ್ರು ನಟ ರಜನಿಕಾಂತ್; ಹಾಗಿದ್ರೆ ಅವ್ರು ಯಾರು, ಹೇಳಿದ್ದಾರೆ ನೋಡಿ..! 

ಪುಷ್ಪಾದಲ್ಲಿ ನಟಿ ಸಮಂತಾ ಮಾಡಿದ್ದ ಐಟಂ ಸಾಂಗ್ ಸೂಪರ್ ಹಿಟ್ ಆಗಿದ್ದು ಈಗ ಇತಿಹಾಸ. ಆದರೆ ಆ ಬಳಿಕ ನಟಿ ಸಮಂತಾ ಅವರಿಗೆ ಮೆಯೋಸಿಟಿಸ್ (Myositis)ಖಾಯಿಲೆ ಆಗಿದ್ದು ಅದಕ್ಕಾಗಿ ಅವರು ಅಮೆರಿಕಾದಲ್ಲಿ ಟ್ರೇಟ್‌ಮೆಂಟ್ ಪಡೆಯುತ್ತಿದ್ದಾರೆ. ಈಗ 'ಪುಷ್ಪಾ 2' ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಅದರಲ್ಲೂ ಐಟಂ ಸಾಂಗ್‌ (Item Song)ಒಂದು ಇದ್ದರೂ ಅದರಲ್ಲಿ ಸಮಂತಾ ಡಾನ್ಸ್‌ಗೆ ಹೆಜ್ಜೆ ಹಾಕುತ್ತಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ನಟಿ ಸಮಂತಾ ಬಳಲುತ್ತಿರುವ ಮೆಯೋಸಿಟಿಸ್ ಖಾಯಿಲೆ ಅವರಿಗೆ ಬಹಳಷ್ಟು ಅವಕಾಶಗಳು ಇಲ್ಲದಂತೆ ಮಾಡಿವೆ ಎನ್ನಬಹುದು. 

RRR ಯಶಸ್ಸಿನ ಬಳಿಕ ರಾಮ್ ಚರಣ್ ಮಾತಿನ ಧಾಟಿಯೇ ಬದಲಾಯ್ತು; ಇದೇನಿದು ಜಾದೂ ಗುರೂ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!