ಇಂದು ಆಗಸದೆತ್ತರಕ್ಕೆ ಬೆಳೆದಿರುವ ನಟ ವಿಜಯ್ ಸೇತಪತಿ ಒಂದು ಕಾಲದಲ್ಲಿ ಜೀವನ ನಿರ್ವಹಣೆಗೆ ದುಬೈನಲ್ಲಿ ಕೆಲಸ ಕೂಡ ಮಾಡಿದವರು. ಇಂದು ಮಾತೃಭಾಷೆ ತಮಿಳು ಸೇರಿದಂತೆ ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಟ ವಿಜಯ್ ಸೇತುಪತಿ...
ಭಾರತದ ಪ್ಯಾನ್ ಇಂಡಿಯಾ ಸ್ಟಾರ್ ವಿಜಯ್ ಸೇತುಪತಿ ಅವರಿಗೆ ಸಂದರ್ಶನವೊಂದರಲ್ಲಿ ಭಯದ ಬಗ್ಗೆ ಪ್ರಶ್ನೆ ಕೇಳಲಾಗಿದೆ. 'ಸಂದರ್ಶಕಿ ವಿಜಯ್ ಸೇತುಪತಿ ಅವರಿಗೆ 'ನೀವೀಗ ಬಹಳ ದೊಡ್ಡ ಸ್ಟಾರ್ ನಟ. ಆದರೆ, ನಿಮ್ಮ ವೃತ್ತಿ ಬದುಕಿನ ಪ್ರಾರಂಭದ ಕಾಲದಲ್ಲಿ ನಿಮಗೆ ಎಂದಾದರೂ ಭಯ ಕಾಡಿತ್ತಾ? ಸಿನಿಮಾ ನಟನೆ ಬಗ್ಗೆ, ಆಯ್ಕೆಯ ಬಗ್ಗೆ, ಸಿನಿಮಾ ಮಿಸ್ ಆದಾಗ, ಅಥವಾ ಶೂಟಿಂಗ್‌ನಲ್ಲಿ ಕ್ಯಾಮೆರಾ ಮುಂದೆ ನಿಂತಾಗ?' ಎನ್ನಲು ನಟ ವಿಜಯ್ ಸೇತುಪತಿ ಒಮ್ಮೆ ಸ್ಮೈಲ್ ಮಾಡಿ ಉತ್ತರ ಕೊಡುತ್ತಾರೆ. ಅವರು ಕೊಟ್ಟ ಉತ್ತರ ಅದೆಷ್ಟು ಮಾರ್ಮಿಕವಾಗಿತ್ತು ಎಂದರೆ, ಮತ್ತೊಮ್ಮೆ ಆ ಪ್ರಶ್ನೆಗೆ ಉಪ-ಪ್ರಶ್ನೆ ಕೇಳಲು ಅಸಾಧ್ಯ ಎಂಬಂತಿತ್ತು.
ನಟ ವಿಜಯ್ ಸೇತುಪತಿ ಅವರು 'ನಾನು ದುಬೈನಲ್ಲಿದ್ದಾಗ ನನ್ನ ಹುಡುಗಿಯೊಂದಿಗೆ (ಈಗ ಹೆಂಡತಿ) ಲವ್‌ನಲ್ಲಿದ್ದೆ. ಅದು ಯಾಹೂ ಚಾಟ್ ಕಾಲದಲ್ಲಿ ನಡೆದ ಲವ್ ಸ್ಟೋರಿ. ಒಂದು ವಾರದ ಚಾಟ್ ಬಳಿಕ ನಾನು ಒಮ್ಮೆ ನೇರವಾಗಿಯೇ ಆಕೆಯ ಬಳಿ 'ನಾವು ಮದುವೆ ಆಗೋಣ್ವಾ?' ಎಂದು ಕೇಳಿದ್ದೆ. 'ನಮ್ಮಿಬ್ಬರದು ಮದುವೆಗಿಂತ ಮೊದಲು ಕೇವಲ 5 ತಿಂಗಳು ಲವ್ ಮಾಡಿಕೊಂಡಿದ್ದ ಸ್ಟೋರಿ ಅಷ್ಟೇ. ನನ್ನ ಜೀವನದ ಪ್ರಮುಖ ನಿರ್ಧಾರ ಅದಾಗಿತ್ತು. ಅದು ಯಾವುದೇ ಸಿನಿಮಾದಂತೆ ಜೀವನದ ಒಂದು ಭಾಗವಾಗಿರಲಿಲ್ಲ. ಒಂದು ಸಿನಿಮಾ ಸೋತರೆ ಇನ್ನೊಂದು ಸಿಗುತ್ತದೆ ಎಂಬಂತೆ ಒಮದು ಮದುವೆ ಸರಿಹೋಗಿಲ್ಲ ಎಂದರೆ ಇನ್ನೊಂದಕ್ಕೆ ಸಿದ್ಧ ಎಂದು ಯೋಚಿಸಿದವನು ನಾನಲ್ಲ.
undefined
ಭಾರತಿಗಿಂತ ಮೊದಲು ನಟ ವಿಷ್ಣುವರ್ಧನ್ ಬಾಳಲ್ಲಿ ಆ ಹುಡುಗಿ ಬಂದಿದ್ದರು; ಆದ್ರೆ ಯಾಕೆ ಮದುವೆಯಾಗಲಿಲ್ಲ?
ನನ್ನ ಜೀವನದ ಪ್ರಮುಖ ಘಟ್ಟ, ಜೀವನ ಸಂಗಾತಿಯ ಸಂಗಾತಿಯ ವಿಷಯದಲ್ಲೇ ನಾನು ಸ್ವಲ್ಪವೂ ಭಯ ಪಡದೇ ನೇರವಾಗಿ ಕೇಳಿದ್ದೆ, ಇನ್ನು ಸಿನಿಮಾ ಆಯ್ಕೆಯ ವಿಷಯದಲ್ಲಿ ಅಥವಾ ಕ್ಯಾಮೆರಾ ಮುಂದೆ ನಿಂತಾಗ ಭಯ ಪಡುವ ಅಗತ್ಯ ಎಲ್ಲಿಂದ ಬಂತು? ಕ್ಯಾಮೆರಾ ಮುಂದೆ ಒಂದು ಟೇಕ್ ನಾಟ್ ಓಕೆ ಆದರೆ ಇನ್ನೊಂದು ಟೇಕ್ ಇದ್ದೇ ಇರುತ್ತದೆ. ಸಿನಿಮಾ ಕೂಡ ಅಷ್ಟೇ, ಒಂದು ಮಿಸ್ ಆದರೆ ಇನ್ನೊಂದು ಸಿಗುತ್ತದೆ, ಕೆಲವೊಮ್ಮೆ ಸ್ವಲ್ಪ ಕಾಯಬೇಕಾಗಬಹುದು' ಎಂದಿದ್ದಾರೆ ನಟ ವಿಜಯ್ ಸೇತುಪತಿ. ವಿಜಯ್ ಸೇತುಪತಿ ಈ ಮಾತುಗಳನ್ನು ಹೇಳುವಾಗ ಎದುರಿಗೆ ಅವರ ಹೆಂಡತಿ ಹಾಗು ಮಗ ಕೂತಿದ್ದಾರೆ, ಅವರಿಬ್ಬರೂ ವಿಜಯ್ ಮಾತಿಗೆ ನಕ್ಕಿದ್ದಾರೆ.
ಮಹೇಶ್ ಬಾಬು ಮಗಳು ಸಿತಾರಾ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ ಶಾಕ್ ಆಗಿ ಗಲಿಬಿಲಿಗೊಂಡ್ರಾ?
ಒಟ್ಟಿನಲ್ಲಿ, ಇಂದು ಆಗಸದೆತ್ತರಕ್ಕೆ ಬೆಳೆದಿರುವ ನಟ ವಿಜಯ್ ಸೇತಪತಿ ಒಂದು ಕಾಲದಲ್ಲಿ ಜೀವನ ನಿರ್ವಹಣೆಗೆ ದುಬೈ (Dubai)ನಲ್ಲಿ ಕೆಲಸ ಕೂಡ ಮಾಡಿದವರು. ಇಂದು ಮಾತೃಭಾಷೆ ತಮಿಳು ಸೇರಿದಂತೆ ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಟ ವಿಜಯ್ ಸೇತುಪತಿ ಪ್ರಮುಖ ವಿಲನ್ ಪಾತ್ರದ ನಟ. ತಮಿಳಿನಲ್ಲಿ ಈಗಲೂ ಅವರು ಹೀರೋ ಆಗಿ ನಟಿಸಿ ಜನಮೆಚ್ಚಗೆ ಗಳಿಸುತ್ತಾರೆ.
ಧೀರ ಭಗತ್ ರಾಯ್ 'ಏನು ಕರ್ಮ' ಅಂತ ಹಾಡಿದ್ರು; ಸದ್ದು ಮಾಡ್ತಿದೆ ರಾಕೇಶ್-ಸುಚರಿತಾ ಹೆಜ್ಜೆ!