ನಾನು ಹೇಳುತ್ತಿರುವುದು ಸೆರೆಬ್ರೆಲ್ ಕೆಪಾಸಿಟಿ ಬಗ್ಗೆ ಅಷ್ಟೇ. ಮಹಿಳೆಯರು ಪುರುಷರಂತೆ ಇನ್ನೂರು ಫೌಂಡ್ ಭಾರವನ್ನು ಕಸ ಎಸೆದಂತೆ ಇನ್ನೊಬ್ಬರ ಮೇಲೆ ಎಸೆಯಬಲ್ಲರು. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ನಾನು ಹೇಳುತ್ತಿರುವ ಹಾಗೂ ಕೇಳುತ್ತಿರುವ ಸಮಾನತೆ..
ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಆಗಾಗ ಸಂದರ್ಶನಗಳಲ್ಲಿ ಮಾತನಾಡುತ್ತ ಗಮನಸೆಳೆಯುತ್ತಾರೆ. ಪ್ರಿಯಾಂಕಾ ಚೋಪ್ರಾ ಮಾತನಾಡಿದರೆ ಅದೇನೋ ಹೊಸದು ಹೇಳುತ್ತಾರೆ ಎನ್ನುವುದಕ್ಕಿಂತ ಅವರು ವಿಶೇಷವಾದುದನ್ನು ಹೇಳುತ್ತಾರೆ. ಹೀಗೊಂದು ಸಂದರ್ಶನದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ 'ನೀವು ಹೆಣ್ಣು ಗಂಡು ಇಬ್ಬರೂ ಸಮಾನರಲ್ಲ ಎಂದು ಹೇಳಿ ನನ್ನ ಬಳಿ ಪ್ರಶ್ನೆ ಕೇಳುವ ಅಗತ್ಯವೇ ಇಲ್ಲ. ದೈಹಿಕವಾಗಿ ಮಹಿಳೆ ಹಾಗು ಪುರುಷ ಸಮಾನರು ಎಂದು ಹೇಳುವುದನ್ನು ನಾನೂ ಕೂಡ ಒಪ್ಪುವುದಿಲ್ಲ.
ನಾನು ಹೇಳುತ್ತಿರುವುದು ಸೆರೆಬ್ರೆಲ್ ಕೆಪಾಸಿಟಿ ಬಗ್ಗೆ ಅಷ್ಟೇ. ಮಹಿಳೆಯರು ಪುರುಷರಂತೆ ಇನ್ನೂರು ಫೌಂಡ್ ಭಾರವನ್ನು ಕಸ ಎಸೆದಂತೆ ಇನ್ನೊಬ್ಬರ ಮೇಲೆ ಎಸೆಯಬಲ್ಲರು. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ನಾನು ಹೇಳುತ್ತಿರುವ ಹಾಗೂ ಕೇಳುತ್ತಿರುವ ಸಮಾನತೆ ಎಂದರೆ, ಮಹಿಳೆಯರು ಕೂಡ ಪುರುಷರಂತೆ ಯಾವುದೇ ಕಂಪನಿಯ ಸಿಇಎ ಆಗಬಹುದು, ಮದುವೆಯಾಗಿ ಮಕ್ಕಳು, ಸಂಸಾರ, ಮನೆಗಳನ್ನು ಮ್ಯಾನೇಜ್ ಮಾಡಬಹುದು' ಎಂದಷ್ಟೇ ಹೇಳುತ್ತಿದ್ದೇನೆ. ನನಗೆ ದೈಹಿಕ ಸಮಾನತೆ ಇಲ್ಲ ಎಂಬುದೂ ತಿಳಿದಿದೆ ಹಾಗು ಸಮಾಜದಲ್ಲಿ ಕೆಲಸದಲ್ಲಿ ಅಸಮಾನತೆ ಇದೆ ಎಂಬ ಅರಿವೂ ಇದೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.
undefined
ಫ್ಯಾನ್ಸ್‌ಗಳೇ ನನ್ನ ಶಕ್ತಿ & ಸಾಮರ್ಥ್ಯ ಎಂದ್ಬಿಟ್ರು ವಿಜಯ್ ದೇವರಕೊಂಡ; ಜ್ಞಾನೋದಯ ಆಗಿದ್ಹೇಗೆ?
ನಟಿ ಪ್ರಿಯಾಂಕಾ ಚೋಪ್ರಾ ಅವರು ಸಾಕಷ್ಟು ಇಂಟರ್‌ವ್ಯೂಗಳಲ್ಲಿ (Interview) ಮಹಿಳಾ ಸಮಾನತೆ, ಶ್ರೇಷ್ಠತೆಗಳ ಬಗ್ಗೆ ಮಾತನಾಡುತ್ತಾರೆ. ಜತೆಗೆ, ತಮ್ಮ ತಂದೆ-ತಾಯಿ ತಮ್ಮನ್ನು ಹೇಗೆ ಬೆಳೆಸಿದ್ದಾರೆ ಎಂಬುದರ ಬಗ್ಗೆ ಕೂಡ ಮಾತನಾಡುತ್ತಾರೆ. ಮಿಲಿಟ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ನಟಿ ಪ್ರಿಯಾಂಕಾ ಚೋಪ್ರಾ ತಂದೆ, ಶಿಸ್ತಿನ ಸಿಪಾಯಿ ಆಗಿದ್ರಂತೆ. ಹೀಗಾಗಿ, ನಟಿ ಪ್ರಿಯಾಂಕಾ ಕೂಡ ಬಾಲ್ಯದಿಂದಲೇ ಶಿಸ್ತನ್ನು ರೂಢಿಸಿಕೊಂಡಿದ್ದಾರೆ. ಜತೆಗೆ, ಅಮ್ಮ ಧೈರ್ಯದಿಂದ ಮುನ್ನುಗ್ಗುವ ಗುಣವನ್ನು ಪ್ರಿಯಾಂಕಾರಲ್ಲಿ ಬೆಳೆಸಿದ್ದಾರಂತೆ. ಹೀಗಾಗಿ ನಟಿ ಪ್ರಿಯಾಂಕಾ ಜೀವನ ಹಾಗೂ ವೃತ್ತಿ ಜೀವನ ಎರಡರಲ್ಲೂ ಗೆಲ್ಲಲು ಸಾಧ್ಯವಾಯಿತು ಎಂದು ಅನೇಕ ಬಾರಿ ಹೇಳಿದ್ದಾರೆ ಪ್ರಿಯಾಂಕಾ ಚೋಪ್ರಾ.
ಪುಟ್ಟಣ್ಣ-ವಿಷ್ಣುವರ್ಧನ್ ಜೋಡಿ ಸೂಪರ್ ಹಿಟ್ ಚಿತ್ರಕ್ಕೆ 'ನಾಗರಹಾವು' ಹೆಸರಿಡಲು ಕಾರಣವೇನು?