ದುಡ್ಡಿಗಾಗಿ ಬೆತ್ತಲಾಗುವ ನಟಿಯರ ಮುಂದೆ ಸೀರೆಯುಟ್ಟೇ ಬೇಡಿಕೆ ಕುದುರಿಸಿಕೊಳ್ತಿರೋ ಬಹುಭಾಷಾ ಸುಂದರಿ ಸಾಯಿ ಪಲ್ಲವಿ ಬಿಕಿನಿ ಕುರಿತು ಹೇಳಿದ್ದೇನು?
ದುಡ್ಡಿಗಾಗಿ ಇಂದು ಹಲವಾರು ನಟಿಯರು ಸಂಪೂರ್ಣ ಬೆತ್ತಲಾಗಲೂ ಹಿಂದೆ ಮುಂದೆ ನೋಡುವುದಿಲ್ಲ. ಪಾತ್ರಕ್ಕೆ ಸೈ ಕಂಡರೆ, ಪಾತ್ರಕ್ಕೆ ನ್ಯಾಯ ಒದಗಿಸಲು ಏನು ಬೇಕಾದರೂ ಮಾಡಲು ಸಿದ್ಧ ಎನ್ನುತ್ತಲೇ ಅಶ್ಲೀಲ ದೃಶ್ಯಗಳಲ್ಲಿಯೂ ನಿರಾಯಾಸವಾಗಿ ಕಾಣಿಸಿಕೊಳ್ಳುತ್ತಾರೆ. ಅರೆಬರೆ ದೇಹ ಪ್ರದರ್ಶನ ಮಾಡುತ್ತಲೇ ಬೇಡಿಕೆ ಕುದುರಿಸಿಕೊಳ್ಳುವ ನಟಿಯರ ನಡುವೆ, ಇದೀಗ ಸಂಪೂರ್ಣ ಬೆತ್ತಲಾಗಿ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ನಾಯಕಿಯರೂ ಕಾಣಸಿಗುತ್ತಿದ್ದಾರೆ. ಆದರೆ ಇವರಿಗೆಲ್ಲರಿಗಿಂತಲೂ ಭಿನ್ನವಾದವರು ಮಾಲಿವುಡ್ ಬೆಡಗಿ, ಸುಂದರಿ ಸಾಯಿ ಪಲ್ಲವಿ. ಪರದೆಯ ಮೇಲೆ, ಪರದೆಯ ಹಿಂದೆ ಡೀಸೆಂಟ್ ಆಗಿಯೇ ಕಾಣಿಸಿಕೊಳ್ಳುವ, ಅದರಲ್ಲಿಯೂ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಂಡರೂ ಇಂದಿಗೂ ಬೇಡಿಕೆಯ ಜೊತೆಗೆ ಮಾನ,ಮರ್ಯಾದೆ, ಗೌರವವನ್ನೂ ಉಳಿಸಿಕೊಂಡಿರುವ ಬೆರಳೆಣಿಕೆ ನಟಿಯರಲ್ಲಿ ಸಾಯಿ ಪಲ್ಲವಿ ಒಬ್ಬರು.
ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುತ್ತಿರುವ ನಟಿಯರ ನಡುವೆ, ತಾವು ಮಾತ್ರ ತಮ್ಮ ಸಿದ್ಧಾಂತವನ್ನು ಏಕೆ ಬಿಟ್ಟುಕೊಟ್ಟಿಲ್ಲ, ತುಂಡುಡುಗೆ, ಬಿಕನಿ ಧರಿಸದೇ ಇರುವುದಕ್ಕೆ ತಾವು ನಿರ್ಧರಿಸಿದ್ದು ಏಕೆ ಎಂಬ ಬಗ್ಗೆ ನಟಿ ಈಗ ಹೇಳಿದ್ದಾರೆ. ಮಲಯಾಳಂ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿಯೂ ನಟಿಸಿದರೂ ನಟಿ ತಮ್ಮ ಗೌರವವನ್ನು ಉಳಿಸಿಕೊಳ್ಳುವ ಜೊತೆಗೆನೇ ಬೇಡಿಕೆಯನ್ನೂ ಕುದುರಿಸಿಕೊಳ್ಳುತ್ತಿರುವವರು. ಮಲಯಾಳಂನ ಬ್ಲಾಕ್ಬಸ್ಟರ್ ಚಿತ್ರ ‘ಪ್ರೇಮಂ’ ಮೂಲಕ ಸಿನಿ ಬದುಕು ಆರಂಭಿಸಿರುವ ನಟಿ, ಸೀರೆ ಉಟ್ಟೇ ಗಮನ ಸೆಳೆಯುತ್ತಿದ್ದಾರೆ. ಸಾಯಿ ಪಲ್ಲವಿ ಅವರು ಸೂಪರ್ ಆಫರ್ ಪಡೆದಿದ್ದಾರೆ. ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿದೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.
ಮಿಡ್‌ನೈಟ್ ಗುಟ್ಟು ಹೇಳಿದ್ದ ಶ್ರುತಿ ಹಾಸನ್ ಜೀವನದಲ್ಲಿ 7ನೇ ಎಂಟ್ರಿ ಯಾರು? ನಟಿ ಕೊಟ್ಟ ಉತ್ತರ ಹೀಗಿದೆ...
ಅದಕ್ಕೆ ಅವರದ್ದೇ ಆದ ಒಂದು ಕಾರಣವೂ ಇದೆ. ನಟಿಯೇ ಅದನ್ನು ಹೇಳಿದ್ದಾರೆ. ‘ನಾನು ಆಗ ಗಾರ್ಜಿಯಾದಲ್ಲಿ ಓದುತ್ತಿದ್ದೆ. ಆಗ ಟ್ಯಾಂಗೋ ಕಲಿತೆ. ಇದಕ್ಕೆ ಸಣ್ಣ ಬಟ್ಟೆ ತೊಡಬೇಕಿತ್ತು. ನನ್ನ ಅಪ್ಪ-ಅಮ್ಮ ಒಪ್ಪಿಗೆಯನ್ನೂ ಕೊಟ್ಟರು. ನಂತರ ನನ್ನ ನಟನೆಯ ಪ್ರೇಮಂ ರಿಲೀಸ್ ಆಯಿತು. ನನ್ನ ಪಾತ್ರವನ್ನು ಜನರು ತುಂಬಾ ಮೆಚ್ಚಿಕೊಂಡರು. ಆದರೆ ಅದೇ ಸಮಯಕ್ಕೆ ನನ್ನ ಟ್ಯಾಂಗೋ ಡ್ರೆಸ್ ವೈರಲ್ ಆಯಿತು. ಇದರ ಬಗ್ಗೆ ಸಾಕಷ್ಟು ಟ್ರೋಲ್ಗಳಾದವು. ಜನರು ತುಂಬಾ ನೆಗೆಟಿವ್ ರೀತಿಯಲ್ಲಿ ಕಮೆಂಟ್ ಮಾಡಿದರು. ಆಗಲೇ ನನಗೆ ತುಂಬಾ ಮುಜುಗರ ಆಯಿತು. ನನಗೆ ಅನ್ ಕಂಫರ್ಟೆಬಲ್ ಎಂದು ಅನಿಸಿತು. ಅದೇ ಕೊನೆ. ನನ್ನ ಬಟ್ಟೆಯ ಬಗ್ಗೆ ನಾನು ತುಂಬಾ ಜಾಗರೂಕರಾಗಿದ್ದೇನೆ’ ಎಂದಿದ್ದಾರೆ ಸಾಯಿ ಪಲ್ಲವಿ.
‘ಆ ಘಟನೆ ಬಳಿಕ ನಾನು ಟ್ರೆಡಿಷನಲ್ ಆಗಿರಲು ಇಷ್ಟಪಟ್ಟೆ. ಏನೋ ಒಂದನ್ನು ಮಾಡಿ ನಂತರ ಕೊರಗೋದಕ್ಕೆ ನನಗೆ ಇಷ್ಟ ಇಲ್ಲ. ಬಟ್ಟೆಯನ್ನು ನೋಡಿ ಒಂದು ವ್ಯಕ್ತಿಯನ್ನು ಜಡ್ಜ್ ಮಾಡೋದು ಸರಿ ಅಲ್ಲ. ನಾನೇನು ಧರಿಸುತ್ತೇನೆ ಎಂಬುದು ನನ್ನ ವ್ಯಕ್ತಿತ್ವನ್ನು ತೋರಿಸುವುದಿಲ್ಲ’ ಎಂದಿದ್ದಾರೆ ಅವರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸಾಯಿ ಪಲ್ಲವಿ ಆಫ್ ಸ್ಕ್ರೀನ್ ಮಾತ್ರವಲ್ಲದೇ ಆನ್ ಸ್ಕ್ರೀನ್ ಮೇಲೂ ಕೂಡ ಬಟ್ಟೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಅಷ್ಟೇ ಅಲ್ಲದೇ, ಯಾವುದೇ ರಿಯಾಟಿಲಿ ಶೋ, ಅವಾರ್ಡ್ ಕಾರ್ಯಕ್ರಮಗಳಿಗೂ ಬಂದರೂ ಸಾಯಿ ಪಲ್ಲವಿ ಲಕ್ಷಣವಾಗಿ ಸೀರೆಯುಟ್ಟು ಬರುತ್ತಾರೆ. ಇದರಿಂದ ಅವರ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗುತ್ತಾರೆ.
ಜೋರು ಮಳೆಯಲ್ಲಿ ಶೂಟಿಂಗ್ ಇತ್ತು, ಒಳಗೆ ಬಟ್ಟೆ ಹಾಕಿರ್ಲಿಲ್ಲ... ಹೀರೋ ಎತ್ಕೊಂಡ್ಬಿಟ್ರು, ಆಗ... ಆ ದಿನ ನೆನೆದ ಶೋಭನಾ