ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಅನುಪಮಾ ಮತ್ತು ರಿತು ವರ್ಮಾ ಅವರ ಕನಸಿನ ಪಾತ್ರ
ಬೆಂಗಳೂರು: ಸಿನಿಮಾ ಕಲಾವಿದರಿಗೆ ಅವರದ್ದೇ ಆದ ಕನಸಿನ ಪಾತ್ರಗಳು ಇರುತ್ತವೆ. ತಮ್ಮ ಸಿನಿ ಕೆರಿಯರ್‌ನಲ್ಲಿ ಆ ಪಾತ್ರದಲ್ಲಿ ಕಾಣಬೇಕು ಎಂದು ಕನಸು ಕಂಡಿರುತ್ತಾರೆ. ಈ ಬಗ್ಗೆ ಕಲಾವಿದರು ತಮ್ಮ ಸಂದರ್ಶನಗಳಲ್ಲಿ ಕನಸಿನ ಪಾತ್ರಗಳ ಬಗ್ಗೆ ಹೇಳಿಕೊಂಡಿರುತ್ತಾರೆ. ದಕ್ಷಿಣ ಭಾರತದ ಟಾಪ್ ನಟಿಯರಾಗಿರುವ ಸಾಯಿ ಪಲ್ಲವಿ, ರಶ್ಮಿಕಾ, ಶ್ರೀಲೀಲಾ, ಅನುಪಮಾ ಮತ್ತು ರಿತು ವರ್ಮಲಾ ಅವರ ಕನಸಿನ ಪಾತ್ರಗಳ (Actress Dream Role) ಬಗ್ಗೆ ಹೇಳುತ್ತಿದ್ದೇವೆ. ಸದ್ಯ ಈ ಐವರು ಸಿನಿ ಉದ್ಯಮದಲ್ಲಿ ಬ್ಯೂಸಿಯಾಗಿದ್ದು, ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ.
1.ಸಾಯಿ ಪಲ್ಲವಿ
ಲೇಡಿ ಪವರ್ ಸ್ಟಾರ್ ಎಂದು ಕರೆಸಿಕೊಳ್ಳುವ ಸಾಯಿ ಪಲ್ಲವಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಯಿ ಪಲ್ಲವಿ ರೌಡಿ ಬೇಬಿ ಎಂಬ ಬಿರುದು ಹೊಂದಿದ್ದಾರೆ. ಪ್ರೇಮಿ, ಮಗಳು ಹಾಗೂ ಸಾಹಸ ಪಾತ್ರಗಳಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ವಿರಾಟ ಪರ್ವಂ ಚಿತ್ರದ ನಟನೆ ಇಂದಿಗೂ ಎಲ್ಲರ ಮನದಲ್ಲಿದೆ. ಆದ್ರೆ ಸಾಯಿ ಪಲ್ಲವಿಗೆ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆ. ಚಿತ್ರವೊಂದರಲ್ಲಿ ಪೂರ್ಣ ಪ್ರಮಾಣದ ಕಾಮಿಡಿ ಪಾತ್ರ ಮಾಡಲು ಬಯಸುತ್ತೇನೆ ಎಂದು ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.
2.ರಶ್ಮಿಕಾ ಮಂದಣ್ಣ
ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ನಟನೆಯ ಕುಬೇರ ಹಾಗೂ ಪುಷ್ಪ-2 ಬಿಡುಗಡೆಗೆ ಸಿದ್ಧವಾಗಿವೆ. ಅನಿಮಲ್ ಮತ್ತು ಪುಷ್ಪ: ದಿ ರೈಸ್ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಇದುವರೆಗೂ ಬಹುತೇಕ ಸಿನಿಮಾಳಲ್ಲಿ ಪ್ರೇಯಸಿಯಾಗಿ ಅದ್ಭುತವಾಗಿ ನಟಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಶ್ಮಿಕಾ ಮಂದಣ್ಣ ತಾನು ಹಿರಿಯ ನಟಿ ಸೌಂದರ್ಯಯವರ ದೊಡ್ಡ ಅಭಿಮಾನಿ. ಒಂದು ವೇಳೆ ಸೌಂದರ್ಯ ಜೀವನಾಧರಿತ ಸಿನಿಮಾ ಮಾಡಲು ಯಾರಾದ್ರೂ ಮುಂದಾದ್ರೆ ಅವರ ಪಾತ್ರದಲ್ಲಿ ನಾನು ನಟಿಸಬೇಕು ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ. ಸೌಂದರ್ಯ ಪಾತ್ರದಲ್ಲಿ ನಟಿಸೋದು ನನ್ನ ಕನಸಿನ ಪಾತ್ರ ಎಂದು ರಶ್ಮಿಕಾ ತಿಳಿಸಿದ್ದಾರೆ.
3.ಶ್ರೀಲೀಲಾ
ಕನ್ನಡದ ಮತ್ತೋರ್ವ ಚೆಲುವೆ ಸಿನಿ ಅಂಗಳದಲ್ಲಿ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿರುವ ಶ್ರೀಲೀಲಾರಿಗೆ ಹಳ್ಳಿ ಕಥೆಯಾಧರಿತ ಸಿನಿಮಾಗಳು ಅಂದ್ರೆ ಇಷ್ಟವಂತೆ. ಪೂರ್ಣಪ್ರಮಾಣದ ಹಳ್ಳಿ ಹುಡುಗಿಯಾಗಿ ನಟಿಸಬೇಕು ಎಂದು ಶ್ರೀಲೀಲಾ ಹೇಳಿಕೊಂಡಿದ್ದಾರೆ. ಇದರ ಜೊತೆಯಲ್ಲಿ ಪೌರಾಣಿಕ ಪಾತ್ರಗಳ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳಲ್ಲ ಅಂತಾರೆ ಶ್ರೀಲೀಲಾ.
ಮದುವೆಯಾದ ಹೀರೋಗಳ ಜೊತೆ ಅಫೇರ್ ಹೊಂದಿದ್ದ ಸ್ಟಾರ್ ಹೀರೋಯಿನ್‌ಗಳು
4.ಅನುಪಮಾ ಪರಮೇಶ್ವರನ್
ರೌಡಿ ಬಾಯ್ ಚಿತ್ರದಿಂದ ಬದಲಾಗಿರುವ ಅನುಪಮಾ ಪರಮೇಶ್ವರನ್, ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಹೋಮ್ಲಿ ಪಾತ್ರಗಳಲ್ಲಿ ಮಿಂಚುತ್ತಿದ್ದ ಅನುಪಮಾ, ಇದೀಗ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಎಲ್ಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ ಕ್ವೀನ್‌ನಂತಹ ಮಹಿಳಾ ಪ್ರಧಾನ ಆಧರಿತ ಚಿತ್ರಗಳಲ್ಲಿ ನಟಿಸಬೇಕು ಅನ್ನೋದು ಅನುಪಮಾ ಪರಮೇಶ್ವರ್ ಕನಸು.
5.ರಿತು ವರ್ಮಾ
ನಟಿ ರಿತು ವರ್ಮಾ ತುಂಬಾ ಸೆಲೆಕ್ಟಿವ್. ಹಾಟ್ ಲುಕ್‌ಗಳಿಂದ ದೂರವಿರೋ ರಿತು ವರ್ಮಾ ಅವರ ಬ್ರೈಡಲ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಪೂರ್ಣ ಪ್ರಮಾಣದ ಆಕ್ಷನ್ ಸಿನಿಮಾದಲ್ಲಿ ಆ್ಯಕ್ಷನ್ ರೋಲ್ ಮಾಡುವ ಆಸೆ ಇದೆ ಎಂದು ರಿತು ಹೇಳಿದ್ದಾರೆ.
ಹ್ಯಾಟ್ರಿಕ್ ದಾಖಲೆಯತ್ತ ರಶ್ಮಿಕಾ ಮಂದಣ್ಣ ಹೆಜ್ಜೆ; ಈ ರೆಕಾರ್ಡ್ ಫಿಕ್ಸ್ ಎಂದ ಶ್ರೀವಲ್ಲಿಯ ಫ್ಯಾನ್ಸ್