ಜೋರು ಮಳೆಯಲ್ಲಿ ಶೂಟಿಂಗ್ ಇತ್ತು, ಒಳಗೆ ಬಟ್ಟೆ ಹಾಕಿರ್ಲಿಲ್ಲ... ಹೀರೋ ಎತ್ಕೊಂಡ್ಬಿಟ್ರು, ಆಗ... ಆ ದಿನ ನೆನೆದ ಶೋಭನಾ

By Suchethana D  |  First Published Jul 7, 2024, 2:20 PM IST

ರಜನೀಕಾಂತ್​ ಅವರ ಜೊತೆಗೆ ಶಿವಾ ಚಿತ್ರದಲ್ಲಿ ಮಳೆ ನೀರಿನಲ್ಲಿ ನೆನೆಯುವ ದೃಶ್ಯದ ಶೂಟಿಂಗ್​ ವೇಳೆ ನಡೆದ ಘಟನೆಯ ಮೆಲುಕು ಹಾಕಿದ್ದಾರೆ ನಟಿ ಶೋಭನಾ. ಅವರು ಹೇಳಿದ್ದೇನು? 
 


ಹಲವು ಸಂದರ್ಭದಲ್ಲಿ ಸಿನಿಮಾ ಶೂಟಿಂಗ್​ಗಳಲ್ಲಿ ನಟ-ನಟಿಯರು ಪೇಚಿಗೆ ಸಿಲುಕುವುದು ಇದೆ. ಅಂಥದ್ದೇ ಒಂದು ಘಟನೆಯನ್ನು ಬಹುಭಾಷಾ ನಟಿ ಶೋಭನಾ ಶೇರ್​  ಮಾಡಿಕೊಂಡಿದ್ದಾರೆ. ಅವರ ಶಿವಾ ಚಿತ್ರದ ಬಿಡುಗಡೆಗೆ 35 ವರ್ಷಗಳಾದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಅವರ ಸಂದರ್ಶನದ ತುಣುಕು ವೈರಲ್​ ಆಗುತ್ತಿದೆ. 1989ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಶೋಭನಾ ನಾಯಕಿಯಾಗಿದ್ದರೆ, ರಜನೀಕಾಂತ್​ ನಾಯಕ ಆಗಿದ್ದರು. ಮಳೆ ಸೀನ್​ ಒಂದರ ಶೂಟಿಂಗ್​ ವೇಳೆ ನಡೆದ ಆಘಾತಕಾರಿ ಘಟನೆಯನ್ನು ಶೋಭನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದು, ಅದೀಗ ಮತ್ತೆ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಕಾಸ್ಟಿಂಗ್​ ಕೌಚ್​ ಒಂದೆಡೆಯಾದರೆ, ಕೆಲವು ಸಂದರ್ಭದಲ್ಲಿ ನಟಿಯರು ಯಾವ ರೀತಿಯಲ್ಲಿ ಪೇಚಿಗೆ ಸಿಲುಕಬೇಕಿತ್ತು ಎಂಬ ಬಗ್ಗೆ 80ರ ದಶಕದ ಕಥೆಯನ್ನು ಹೇಳಿದ್ದಾರೆ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ, ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಪದ್ಮಶ್ರೀ ಪುರಸ್ಕೃತೆ ಶೋಭನಾ. ರಜನೀಕಾಂತ್​ ಅವರ ಜೊತೆಗೆ ಹಲವು ಚಿತ್ರಗಳನ್ನು ಮಾಡಿರುವ ಶೋಭನಾ ಅವರಿಗೆ ಇದರ ಅನುಭವ ಹಂಚಿಕೊಳ್ಳುವಂತೆ ನಟಿ ಸುಹಾಸಿನಿ ಕೇಳಿದರು. ಅದಕ್ಕೆ ಉತ್ತರವಾಗಿ ಶೋಭನಾ (Shobhana) ಈ ವಿಷಯ ಶೇರ್​ ಮಾಡಿದ್ದಾರೆ. 

'ಶಿವಾ ಚಿತ್ರದ ಶೂಟಿಂಗ್​ ಇತ್ತು. ಅದರ ಬಗ್ಗೆ ನನಗೆ ಮೊದಲೇ ಹೇಳಿರಲಿಲ್ಲ. ಆದ್ದರಿಂದ ನಾನು ಪ್ರಿಪೇರ್​  ಕೂಡ  ಆಗಿರಲಿಲ್ಲ. ಸಾಮಾನ್ಯವಾಗಿ ಮಳೆಯ ಸೀನ್​  ಮಾಡುವಾಗ ಬಿಳಿಯ ಬಣ್ಣದ ಪಾರದರ್ಶಕ ಸೀರೆ ಉಡುತ್ತಾರೆ. ನನಗೆ ರೇನ್​ ಶೂಟಿಂಗ್​ ಎಂದು ಗೊತ್ತಿರಲೇ ಇಲ್ಲ.  ಶೂಟಿಂಗ್​ ಸೆಟ್​ಗೆ ಹೋದಾಗ  ರಜನಿ ಸರ್​ ಅವರ ವೇಷಭೂಷಣವನ್ನು ನೋಡಿ ಈ ಶೂಟಿಂಗ್​ ಇದೆ ಎಂದು ತಿಳಿಯಿತು.  ನನಗೆ  ಬಿಳಿ ಪಾರದರ್ಶಕ ಸೀರೆ ಕೊಟ್ಟರು. ಇಂಥ ದೃಶ್ಯಗಳನ್ನು ಮಾಡುವಾಗ ಸೆಟ್​ನಲ್ಲಿಯೇ  ಸೀರೆಯ ಒಳಗೆ ಧರಿಸಲು ಸರಿಯಾದ ಬಟ್ಟೆ ಕೊಡುತ್ತಾರೆ, ಹೆಚ್ಚಾಗಿ ಇಂಥ ಶೂಟಿಂಗ್​ ಇರುವುದು ತಿಳಿದಾಗ ನಟಿಯರೇ ಅದನ್ನು ಹಾಕಿಕೊಳ್ಳುತ್ತಾರೆ. ಆದರೆ ಶೂಟಿಂಗ್​ ಅರಿವೇ ಇಲ್ಲದ ನನ್ನ ಬಳಿ ಒಳಗಡೆ ಧರಿಸಲು ಬಟ್ಟೆ ಇರಲಿಲ್ಲ, ಸೆಟ್​ನಲ್ಲಿಯೂ ಅದು ಸಿಗಲಿಲ್ಲ' ಎನ್ನುತ್ತಲೇ ಅಂದು ನಡೆದ ಘಟನೆಯ ಕುರಿತು ಶೋಭನಾ ಹೇಳಿದ್ದಾರೆ. 

Tap to resize

Latest Videos

ಆರು ವರ್ಷದ ಡೇಟಿಂಗ್‌- ಮದ್ವೆಯಾದ ಎರಡೇ ದಿನಕ್ಕೆ ಪ್ರೆಗ್ನೆಂಟ್‌: ಆಸ್ಪತ್ರೆ ರಹಸ್ಯ ಬಾಯ್ಬಿಟ್ಟ ಸೋನಾಕ್ಷಿ

'ನನಗೆ ಭಯವಾಯಿತು. ಭಯಕ್ಕಿಂತ ಹೆಚ್ಚಾಗಿ ಅಸಹ್ಯ ಎನಿಸಿತು. ಬಿಳಿಯ ಪಾರದರ್ಶಕ ಸೀರೆ ಬೇರೆ. ಒಳಗೆ ಏನೂ ಬಟ್ಟೆ ಹಾಕದೇ ಹೇಗೆ ನಟಿಸಲಿ ಎಂದು ಅರ್ಥವಾಗಲಿಲ್ಲ. ಕೂಡಲೇ ನಾನು  ನಾನು ಮನೆಗೆ ಹೋಗಿ  ತಯಾರಾಗಿ ಬರಬಹುದೇ ಎಂದು ಕೇಳಿದೆ. ಆದರೆ ಅದಕ್ಕೆ ಸಮಯವಿಲ್ಲ,  ಶಾಟ್ (Shot) ಹತ್ತು ನಿಮಿಷಗಳಲ್ಲಿ ರೆಡಿಯಾಗಬೇಕು ಎಂದರು.  ಇಂಥ ಮಳೆ ಹಾಡುಗಳು ಪೂರ್ವಯೋಜಿತ ಕೊಲೆ ಎಂದು ನಾನು ಭಾವಿಸುತ್ತೇನೆ. ಬಲಿಪಶುವಿಗೆ ಮಾತ್ರ ತಿಳಿದಿರುವುದಿಲ್ಲ. ಅಂಥ ಸ್ಥಿತಿ ನನಗಾಗಿತ್ತು. ಈಗ ನಗು ಬರುತ್ತದೆ. ಆದರೆ ಅಂದು ಮಾತ್ರ ಜೀವವೇ ಕೈಗೆ ಬಂದಿತ್ತು. ಏನು ಮಾಡಬೇಕು ಎಂದು ತಿಳಿಯಲಿಲ್ಲ. ಕೂಡಲೇ  ಎವಿಎಂ ಸ್ಟುಡಿಯೋದಲ್ಲಿ ಇದ್ದ ಪ್ಲಾಸ್ಟಿಕ್ ಟೇಬಲ್ ಕವರ್ ತೆಗೆದುಕೊಂಡು ಸೀರೆ ಒಳಗೆ ಸುತ್ತಿಕೊಂಡು  ಶಾಟ್​ಗೆ ಹಾಗೂ ಹೀಗೂ  ರೆಡಿ ಆದೆ' ಎಂದರು ಶೋಭನಾ.

ಇದರ ಇನ್ನಷ್ಟು ಅನುಭವ ಹಂಚಿಕೊಂಡ ಅವರು,  'ಚಿತ್ರೀಕರಣದ ಸಮಯದಲ್ಲಿ, ರಜನಿ ಸರ್ ನನ್ನನ್ನು ಡ್ಯಾನ್ಸ್ ಸ್ಟೆಪ್‌ಗೆ ಎತ್ತಬೇಕಾಗಿತ್ತು, ಅವರಿಗೆ ಇದ್ಯಾವ ವಿಷಯವೂ ಗೊತ್ತಿರಲಿಲ್ಲ. ನಾನು ಕವರ್​ ಸುತ್ತಿಕೊಂಡಿದ್ದೂ ತಿಳಿದಿರಲಿಲ್ಲ. ಅವರು ನನ್ನನ್ನು ಎತ್ತಿದಾಗ  ಕವರ್ (Cover) ಸದ್ದು ಮಾಡಲಾರಂಭಿಸಿತು. ಅವರು ವಿಚಿತ್ರವಾಗಿ ನನ್ನನ್ನು ನೋಡಿದರು, ಶಾಟ್​ ಸಮಯದಲ್ಲಿ  ಅವರು ಗೊಂದಲಕ್ಕೊಳಗಾಗಿದ್ದರು. ಆಗ ನಾನು ಅವರಿಗೆ ನಿಜ ವಿಷಯ ಹೇಳಬೇಕಾಯಿತು. ಅವರು ನನ್ನನ್ನು ಸಮಾಧಾನ ಪಡಿಸಿದರು. ಮಾತ್ರವಲ್ಲದೇ ಅದರ ಬಗ್ಗೆ ಅವರು ಯಾರಿಗೂ ಹೇಳಲಿಲ್ಲ. ಸೆಟ್‌ನಲ್ಲಿರುವ ಪ್ರತಿಯೊಬ್ಬರೂ ಆರಾಮವಾಗಿರುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ. ಅಷ್ಟು ಒಳ್ಳೆಯ ವ್ಯಕ್ತಿ ಅವರು ಎಂದರು.

ಮಿಡ್‌ನೈಟ್‌ ಗುಟ್ಟು ಹೇಳಿದ್ದ ಶ್ರುತಿ ಹಾಸನ್‌ ಜೀವನದಲ್ಲಿ 7ನೇ ಎಂಟ್ರಿ ಯಾರು? ನಟಿ ಕೊಟ್ಟ ಉತ್ತರ ಹೀಗಿದೆ...
 

click me!