ಸಹಾಯ ಮಾಡಿ ಅಂತ ಪ್ರತಿದಿನ ಬಯ್ಯುವವರ ಬಾಯಿ ಮುಚ್ಚಿಸಿದ ಅಮಿತಾಭ್

By Suvarna NewsFirst Published May 11, 2021, 11:28 AM IST
Highlights
  • ಸಹಾಯ ಮಾಡಿ, ನೆರವು ಕೊಡಿ ಎಂದು ಪ್ರತಿ ದಿನ ಒತ್ತಡ
  • ಬಾಲಿವುಡ್ ಬಿಗ್‌ಬಿಗೆ ಸಹಾಯ ಮಾಡಲು ನೆಟ್ಟಿಗರ ಬೈಗುಳ
  • ಕಾಲೆಳೆಯುವವರ ಬಾಯಿ ಮುಚ್ಚಿಸಿದ ಅಮಿತಾಭ್

ನಟ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ, ಭಾರತದಲ್ಲಿ ಕೋವಿಡ್ -19 ಎರಡನೇ ಅಲೆಯಲ್ಲಿ ಸೆಲೆಬ್ರಿಟಿಗಳು ತಮ್ಮ ನೆರವಿಗೆ ಸಂಬಂಧಿಸಿದಂತೆ ನೆಗೆಟಿವ್ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ನಟ ದೆಹಲಿಯ ಕೋವಿಡ್ -19 ಸೌಲಭ್ಯಕ್ಕಾಗಿ ₹ 2 ಕೋಟಿ ಕೊಡುಗೆ ನೀಡಿದ್ದೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ನಾನು ಮಾಡಿದ ಕೆಲಸಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಮುಜುಗರದ ವಿಚಾರ. ಪ್ರತಿದಿನ ಅಸಹ್ಯಕರ ಕಮೆಂಟ್‌ಗಳ ಹೊಲಸು ಪ್ರತಿಕ್ರಿಯೆ ನಮ್ಮ ಕುಟುಂಬ ಹಿಂದಿನಿಂದಲೂ ಎದುರಿಸುತ್ತಿರುವ ಸಂಗತಿ ಎಂದಿದ್ದಾರೆ ಅಮಿತಾಭ್.

ವೈರಸ್‌ ಬಗ್ಗೆ ಕನ್ನಡದಲ್ಲಿ ಜಾಗೃತಿ ಮೂಡಿಸಿದ್ದ ತೆಲುಗು ನಟನಿಗೆ COVID19 ಪಾಸಿಟಿವ್

ಅಮಿತಾಬ್ ನಂತರ ಅವರ ನೆರವು ಕಾರ್ಯಗಳನ್ನು ಪಟ್ಟಿ ಮಾಡಿದ್ದಾರೆ. ನನ್ನ ವೈಯಕ್ತಿಕ ನಿಧಿಯಿಂದ 1500 ಕ್ಕೂ ಹೆಚ್ಚು ರೈತರ ಬ್ಯಾಂಕ್ ಸಾಲಗಳನ್ನು ತೀರಿಸಿದ್ದೇನೆ. ಇದು ರೈತರ ಆತ್ಮಹತ್ಯೆಯನ್ನು ತಡೆಯಿತು. ಕಾರ್ಮಿಕರನ್ನು ಕಳುಹಿಸಲು ನನ್ನದೇ ವೆಚ್ಚದಲ್ಲಿ ರೈಲು ವ್ಯವಸ್ಥೆ ಮಾಡಿದ್ದೆ.

ಕಳೆದ ವರ್ಷ ದೇಶದಲ್ಲಿ 400,000 ಕ್ಕೂ ಹೆಚ್ಚು ದಿನಗೂಲಿ ಮಾಡುವವರಿಗೆ ಒಂದು ತಿಂಗಳ ಕಾಲ ಆಹಾರವನ್ನು ಒದಗಿಸಿದ್ದೇನೆ. ನಗರದಲ್ಲಿ ಸುಮಾರು 5000 ಜನರಿಗೆ ಪ್ರತಿದಿನ ಊಟ ಒದಗಿಸಲಾಗಿದೆ. ಫ್ರಂಟ್‌ಲೈನ್ ವಾರಿಯರ್ಸ್‌ಗೆ ಮಾಸ್ಕ್, ಪಿಪಿಇ ಕಿಟ್ ಒದಗಿಸಿದ್ದೇನೆ ಎಂದಿದ್ದಾರೆ.

ಕೊರೋನಾ ಕೇರ್ ಸೆಂಟರ್‌ಗೆ ಬಿಗ್ ಬಿ 2 ಕೋಟಿ ದೇಣಿಗೆ

ಸಿಕ್ಕಿಬಿದ್ದ ವಲಸೆ ಕಾರ್ಮಿಕರಿಗಾಗಿ, ಅವರು ಯುಪಿ ಮತ್ತು ಬಿಹಾರದ ಸ್ಥಳಗಳಿಗೆ 30 ಬಸ್ಸುಗಳನ್ನು ಕಾಯ್ದಿರಿಸಿದ್ದರು. ರಾತ್ರಿಯ ಪ್ರಯಾಣಕ್ಕಾಗಿ ಅವರಿಗೆ ಆಹಾರ ಮತ್ತು ನೀರನ್ನು ಪೂರೈಸಿದ್ದಾರೆ ಎಂದು ಬರೆದಿದ್ದಾರೆ. ನನ್ನ ವೆಚ್ಚದಲ್ಲಿ 2800 ವಲಸೆ ಪ್ರಯಾಣಿಕರನ್ನು ಉಚಿತವಾಗಿ ಸಾಗಿಸಲು ಮುಂಬಯಿಯಿಂದ ಯುಪಿಗೆ ಸಂಪೂರ್ಣ ರೈಲು ಕಾಯ್ದಿರಿಸಿದೆ. ಗುರಿ ತಲುಪುವಷ್ಟರಲ್ಲಿ ತಮ್ಮ ರಾಜ್ಯಕ್ಕೆ ಬರದಂತೆ ರೈಲು ತಡೆದು ರದ್ದುಗೊಳಿಸಿದಾಗ ತಕ್ಷಣ ಚಾರ್ಟರ್ಡ್ 3 ಇಂಡಿಗೊ ಏರ್ಲೈನ್ ​ಹಾರಾಟ ಮೂಲಕ ಯುಪಿ ಮತ್ತು ಬಿಹಾರಕ್ಕೆ ಪ್ರತಿ ವಿಮಾನದಲ್ಲಿ 180 ವಲಸಿಗರು ಮತ್ತು ಕೆಲವರನ್ನು ರಾಜಸ್ಥಾನ ಮತ್ತು ಜಮ್ಮು ಕಾಶ್ಮೀರಕ್ಕೆ ಕಳುಹಿಸಿದ್ದಾರೆ ಎಂದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!