ಸನ್ನಿ ಲಿಯೋನ್ ಇದೀಗ ಥಾಯ್ಲೆಂಡ್ ವೆಕೇಶನ್‌ನಲ್ಲಿದ್ದಾರೆ. ಆದರೆ ಥಾಯ್ಲೆಂಡ್‌ನಿಂದ ಪೋಸ್ಟ್ ಮಾಡಿದ ವಿಡಿಯೋ ಮಾತ್ರ ಭಾರತದಲ್ಲಿ ಬಿಸಿ ಏರಿಸಿದೆ. ರೆಡ್ ಹಾಟ್ ಬಿಕಿನಿಯಲ್ಲಿ ಸನ್ನಿ ಕಾಣಿಸಿಕೊಂಡಿದ್ದಾರೆ.
ಥಾಯ್ಲೆಂಡ್(ಜೂ.09) ಬಾಲಿವುಡ್ ನಟಿ ಸನ್ನಿ ಲಿಯೋನ್ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಥಾಯ್ಲೆಂಡ್‌ನಲ್ಲಿರುವ ಸನ್ನಿ ಲಿಯೋನ್ ವಿಡಿಯೋ ಒಂದು ವೈರಲ್ ಆಗಿದೆ. ರೆಡ್ ಹಾಟ್ ಬಿಕಿನಿ ತೊಟ್ಟು ಸ್ವಿಮ್ಮಿಂಗ್‌ಪೂಲ್‌ನಲ್ಲಿ ಎಂಜಾಯ್ ಮಾಡುತ್ತಿರುವ ಈ ವಿಡಿಯೋ ಭಾರಿ ಲೈಕ್ಸ್ ಹಾಗೂ ಕಮೆಂಟ್ಸ್ ವ್ಯಕ್ತವಾಗಿದೆ. ವಿವಿಧ ಫೋಸ್ ನೀಡಿರುವ ಸನ್ನಿಯ ಹಾಟ್ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.
ಸ್ವಿಮ್ಮಿಂಗ್‌ಪೂಲ್‌ಗೆ ಹಾರಿ ಈಜಾಡಿದ ಸನ್ನಿ ಲಿಯೋನ್ ಬಳಿಕ ಅದೇ ಸ್ವಿಮ್ಮಿಂಗ್‌ಪೂಲ್ ದಂಡೆ ಮೇಲೆ ಮಲಗಿದಿ ಹಲವು ಪೋಸ್ ನೀಡಿದ್ದಾರೆ. ಸನ್ನಿ ಲಿಯೋನ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸನ್ನಿ ವಿಡಿಯೋ ಶೇರ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಭರ್ಜರಿ ಕಮೆಂಟ್ ನೀಡಿದ್ದಾರೆ. ರೆಡ್ ಹಾಟ್ ಚಿಲ್ಲಿ, ಬ್ಯೂಟಿಫುಲ್ ಸೇರಿದಂತೆ ಹಲವು ಕಮೆಂಟ್ಸ್ ವ್ಯಕ್ತವಾಗಿದೆ.
ಬಟ್ಟೆ ಕಳಚಿಟ್ಟು ಈಜುಕೊಳಕ್ಕೆ ಹಾರಿದ ಸನ್ನಿ ಲಿಯೋನ್, ದುಬೈ ವೆಕೇಶನ್ ವಿಡಿಯೋ ವೈರಲ್!
ಸನ್ನಿ ಲಿಯೋನ್ ಬಿಕಿನಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ದುಬೈ ಪ್ರವಾಸದಲ್ಲಿ ಸನ್ನಿ ಲಿಯೋನ್ ಬಟ್ಟೆ ಕಳಚಿಚ್ಚು ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ್ದರು. ಈ ವೇಳೆ ಬ್ಲಾಕ್ ಬಿಕಿನಿಯಲ್ಲಿ ಸನ್ನಿ ಕಾಣಿಸಿಕೊಂಡಿದ್ದರು. ಸಮುದ್ರ ಕಿನಾರೆಯಲ್ಲಿ ಸನ್ನಿ ಲಿಯೋನ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಥಾಯ್ಲೆಂಡ್ ಪ್ರವಾಸದಲ್ಲಿ ರೆಡ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸನ್ನಿ ಲಿಯೋನ್ ತಮ್ಮ ಮುಂದಿನ ಚಿತ್ರದ ಕುರಿತು ಘೋಷಣೆ ಮಾಡಿದ್ದರು. ಕೊಟೇಶನ್ ಗ್ಯಾಂಗ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಸನ್ನಿ ಹೇಳಿದ್ದರು. ಇತ್ತೀಚೆಗೆ ಕೊಟೇಶನ್ ಗ್ಯಾಂಗ್ ಟ್ರೇಲರ್ ಕೂಡ ರಿಲೀಸ್ ಮಾಡಲಾಗಿತ್ತು. ಈ ಟ್ರೇಲರ್‌ನಲ್ಲಿ ಸನ್ನಿ ಲಿಯೋನ್ ಹಲವರ ನಿದ್ದೆಗೆಡಿಸಿದ್ದಾರೆ. ಜಾಕಿ ಶ್ರಾಫ್, ಪ್ರಿಯಾ ಮಣಿ, ಸಾರಾ ಅರ್ಜುನ್ ಸೇರಿದಂತೆ ಹಲವು ತಾರಾ ಬಣ ಈ ಚಿತ್ರದಲ್ಲಿದೆ.
Can't get enough ❤️
.
.
📍 pic.twitter.com/ouqNJiyGrA
ನೀಲಿ ಚಿತ್ರ ತಾರೆ ಎಂದೇ ಗುರುತಿಸಿಕೊಂಡಿದ್ದ ಸನ್ನಿ ಲಿಯೋನ್ ಇದೀಗ ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. 2012ರಲ್ಲಿ ಸನ್ನಿ ಲಿಯೋನ್ ನೀಲಿ ಚಿತ್ರದ ಜಗತ್ತಿನಿಂದ ಹೊರಬಂದು ಬಾಲಿವುಡ್‌ಗೆ ಪಾದರ್ಪಣೆ ಮಾಡಿದ್ದರು. ಭಾರಿ ಟೀಕೆ, ವಿರೋಧಗಳನ್ನು ಎದುರಿಸಿದ್ದ ಸನ್ನಿ ಲಿಯೋನ್ ಇದೀಗ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಜಿಸ್ಮ್ 2 ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟ ಸನ್ನಿ ಲಿಯೋನ್, ಕಳೆದ 12 ವರ್ಷಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾರೆ. ಜಾಕ್‌ಪಾಟ್, ರಾಣಿಗಿನಿ ಎಂಎಂಎಸ್, ಏಕ್ ಪೆಹೇಲಿ ಲೀಲಾ, ತೇರಾ ಇಂತಜಾರ್ ಸೇರಿದಂತೆ ಹಲವು ಬಾಲಿವುಡ್ ಚಿತ್ರದಲ್ಲಿ ಸನ್ನಿ ಕಾಣಿಸಿಕೊದ್ದಾರೆ. 2019ರಲ್ಲಿ ಸನ್ನಿ ಲಿಯೋನ್ ಮಧುರ ರಾಜಾ ಅನ್ನೋ ಮಲೆಯಾಳಂ ಚಿತ್ರದಲ್ಲಿ ಅಭಿನಯಿಸಿದ್ದಾರೆ.