ಹ್ಯಾಪಿ ಆನಿವರ್ಸರಿ ಬಿಗ್‌ಬಿ: ಬಚ್ಚನ್‌ ಅವರದು ಒಂಥರಾ ಲಾಕ್‌ಡೌನ್‌ ಮದುವೆ!

By Suvarna News  |  First Published Jun 3, 2020, 2:34 PM IST

ಇಂದು ಮ್ಯಾರೇಜ್‌ ಆನಿವರ್ಸರಿ ಆಚರಿಸಿಕೊಳ್ಳುತ್ತಿರುವ ಅಮಿತಾಭ್‌ ಬಚ್ಚನ್‌- ಜಯಾ ಬಚ್ಚನ್‌ ಮದುವೆ ಹಾಗೂ ದಾಂಪತ್ಯದ ಹಿಂದೆ ಅನೇಕ ರೋಮಾಂಚಕಾರಿ ಕತೆಗಳಿವೆ. ಇವರದು ಒಂಥರಾ ಲಾಕ್‌ಡೌನ್‌ ಮದುವೆ!


ಇಂದು ಬಾಲಿವುಡ್‌ನ ಶೆಹನ್‌ಶಾ, ಸ್ಟಾರ್‌ಗಳ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಮತ್ತ ಜಯಾ ಬಚ್ಚನ್‌ ದಾಂಪತ್ಯಕ್ಕೆ ಭರ್ತಿ 47 ವರ್ಷ. 1973ರ ಇದೇ ದಿನ ಈ ಯುವಜೋಡಿ ದಾಂಪತ್ಯಕ್ಕೆ ಹೊಸ್ತಿಲು ದಾಟಿ ಅಡಿಯಿಟ್ಟಿತ್ತು. ಈ ಜೋಡಿಯ ಮದುವೆಯ ಕತೆಯನ್ನು ಸ್ವತಃ ಅಮಿತಾಭ್‌ ಬಚ್ಚನ್‌ ಅವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಇಂದು ಬೆಳಗ್ಗೆಯೇ ಹಂಚಿಕೊಂಡಿದ್ದಾರೆ.

ಅದು ಅಮಿತಾಭ್‌ ಅವರ ಚಿತ್ರಜೀವನದ ಉತ್ತುಂಗದ ಕಾಲ. ಜಂಜೀರ್‌ ಫಿಲಂ ಆಗತಾನೇ ಹೊರಬಿದ್ದಿತ್ತು. ಆಂಗ್ರಿ ಯಂಗ್‌ ಮ್ಯಾನ್‌ ಆಗಿ ಟಾಲ್‌ ಆಂಡ್‌ ಹ್ಯಾಂಡ್‌ಸಮ್‌ ಅಮಿತಾಭ್‌ ಬಚ್ಚನ್‌ ನಟಿಸಿದ್ದರು. ಈ ಚಿತ್ರದಲ್ಲಿ ಜಯಾ ಬಾಧುರಿ ಕೂಡ ಇದ್ದರು. ಜಂಜೀರ್‌ ಫಿಲಂ ಊಹಿಸಲಾಗದಷ್ಟು ಹಿಟ್‌ ಆಯ್ತು. ಚಿತ್ರದ ಯಶಸ್ಸನ್ನು ಸೆಲೆಬ್ರೇಟ್‌ ಮಾಡಲು ಚಿತ್ರತಂಡ ಲಂಡನ್‌ಗೆ ಹೊರಟು ನಿಂತಿತು. ಈ ವಿಚಾರವನ್ನು ಅಮಿತಾಭ್‌ ಅವರು ತಂದೆ ಹರಿವಂಶರಾಯ್ ಬಚ್ಚನ್‌ ಅವರಿಗೆ ಹೇಳಿದರು. ಆಗ ತಂದೆ ಕೇಳಿದ್ದು ಒಂದೇ ಪ್ರಶ್ನೆ- ನಿನ್ನ ಜೊತೆ ಜಯಾ ಕೂಡ ಬರ್ತಾಳಾ? ಅಮಿತಾಭ್‌ ಹೌದು ಎಂದರು. ಹಾಗಿದ್ದರೆ ನೀವು ಮದುವೆ ಮಾಡಿಕೊಂಡೇ ಹೋಗಬೇಕು- ಎಂದು ಹರಿವಂಶರಾಯ್‌ ಕಂಡಿಶನ್‌ ಹಾಕಿದರು. ಆಗಲಿ ಎಂದರು ಅಮಿತಾಭ್‌. ಕೂಡಲೇ ಪುರೋಹಿತರಿಗೆ ಕರೆ ಹೋಯಿತು. ಮರುದಿನವೇ ಮದುವೆಯಾಯಿತು. ಮದುವೆಯ ದಿನ ಸಣ್ಣಗೆ ಮಳೆಯಾಯಿತಂತೆ. ಅದು ಶುಭ ಶಕುನವಾಗಿತ್ತು ಎಂದು ಹೇಳುತ್ತಾರೆ ಅಮಿತಾಭ್‌. ಅಂದಹಾಗೆ ಅವರ ಮದುವೆ ಈಗಿನ ಕಾಲ್ ಲಾಕ್‌ಡೌನ್‌ ಮದುವೆಗಳ ಥರವೇ ಇತ್ತಂತೆ. ಅಂದರೆ ಗೌಜಿಗದ್ದಲವಾಗಲೀ ತುಂಬಾ ಜನವಾಗಲೀ ಇರಲಿಲ್ಲ. ಎರಡು ಫ್ಯಾಮಿಲಿಯ ಮಂದಿ ಮಾತ್ರ ಇದ್ದರಂತೆ.

Tap to resize

Latest Videos

undefined

 

ಬಿಗ್‌ ಬಿ ಮತ್ತು ಜಯಾ ಹಲವಾರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅವರ ಜೋಡಿಯ ಹಲವು ಫಿಲಂಗಳು ಸೂಪರ್‌ ಹಿಟ್‌ ಆಗಿವೆ- ಜಂಜೀರ್‌, ಸಿಲ್‌ಸಿಲಾ, ಚುಪ್ಕೆ ಚುಪ್ಕೆ, ಅಭಿಮಾನ್‌, ಮಿಲಿ, ಕಭಿ ಖುಷಿ ಕಭಿ ಗಮ್‌ ಇತ್ಯಾದಿ. ಇವರ ಮಗ ಅಭಿಷೇಕ್ ಬಚ್ಚನ್‌ ಬಗ್ಗೆ ನಿಮಗೆ ಗೊತ್ತೇ ಇದೆ. ಮಗಳೊಬ್ಬಳು ಇರುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಆಕೆಯ ಹೆಸರು ಶ್ವೇತಾ ನಂದಾ. ಆನಿವರ್ಸರಿಯ ನೆನಪಿಗಾಗಿ ಬಚ್ಚನ್‌ ತಮ್ಮ ಮದುವೆಯ ಕೆಲವು ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಷೇಕ್‌ ಬಚ್ಚನ್‌ ಕೂಡ ಅವರ ಇನ್‌ಸ್ಟಾಗ್ರಾಂನಲ್ಲಿ ತಂದೆ ತಾಯಿಯ ಫೊಟೊ ಹಾಕಿಕೊಂಡಿದ್ದಾರೆ.
 

ಕೊರೋನಾ ಸಂಕಷ್ಟದಲ್ಲಿ ನಟಿಯರಿಗೆ ಮತ್ತೊಂದು ಶಾಕ್!
 

ಅಮಿತಾಭ್‌ ಮತ್ತು ಜಯಾ ಲವ್‌ ಸ್ಟೋರಿ ಮಜವಾಗಿದೆ. ಅಮಿತಾಭ್‌ ಜಯಾರನ್ನು ಮೊದಲ ಬಾರಿಗೆ ನೋಡಿದ್ದು ಸ್ಕ್ರೀನ್‌ನಲ್ಲೂ ಅಲ್ಲ, ಮುಖಾಮುಖಿಯೂ ಅಲ್ಲ. ಬದಲಾಗಿ ಒಂದು ಸಿನಿಮಾ ಮ್ಯಾಗಜಿನ್‌ನ ಮುಖಪುಟದಲ್ಲಿ. ಅದರಲ್ಲಿ ಜಯಾ ಫೋಟೊ ನೋಡಿದ ಕೂಡಲೇ ಅವರಿಗೆ ಜಯಾ ಬಾಧುರಿಯ ಕಣ್ಣುಗಳು ಭಾರಿ ಇಷ್ಟವಾದವಂತೆ. ತಾನು ಮದುವೆಯಾಗುವ ಹುಡುಗಿ ಪರಂಪರೆ ಮತ್ತು ಆಧುನಿಕತೆಗಳ ಮಿಶ್ರಣ ಆಗಿರಬೇಕು ಅಂತ ಬಚ್ಚನ್‌ ಬಯಸಿದ್ದರಂತೆ. ಈಕೆಯನ್ನು ನೋಡಿದಾಗ ಇವಳು ತನಗೆ ಪರ್‌ಫೆಕ್ಟ್‌ ಮ್ಯಾಚ್‌ ಅಂತ ಅವರಿಗೆ ಅನಿಸಿತಂತೆ.
 

ಅಮಿತಾಭ್‌ ಬಚ್ಚನ್‌ ಲಕ್ಕಿ: ಅಷ್ಟಕ್ಕೂ ಅವರ ಮನೆ ವಾಸ್ತು ಹೇಗಿದೆ? 
 

ನಂತರ ಹೃಷಿಕೇಷ್‌ ಮುಖರ್ಜಿ ಅವರು ತಮ್ಮ ಗುಡ್ಡಿ ಸಿನಿಮಾದಲ್ಲಿ ಜಯಾ ಮತ್ತು ಅಮಿತಾಭ್‌ರನ್ನು ಒಟ್ಟಿಗೆ ತಂದಾಗ ಅಮಿತಾಭ್‌ ಎಕ್ಸೈಟ್‌ ಆಗಿಬಿಟ್ಟಿದ್ದರಂತೆ. ಆದರೆ ಮೊದಲ ಬಾರಿಗೆ ಅಮಿತಾಭ್‌ರನ್ನು ನೋಡಿದಾಗ ಜಯಾಗೆ ಭಯ ಹುಟ್ಟಿಬಿಟ್ಟಿತ್ತು. ಪ್ರೇಮವಂತೂ ಉಂಟಾಗಲೇ ಇಲ್ಲ! ಬದಲಾಗಿ, ಈತ ತನ್ನನ್ನು ಡಿಕ್ಟೇಟ್‌ ಮಾಡಬಲ್ಲ ಅಂತಲೇ ಅನಿಸಿತ್ತಂತೆ. ನಂತರ ಜಂಜೀರ್‌ ಫಿಲಂನ ಶೂಟಿಂಗ್‌ ಹೊತ್ತಿಗೆ ಇಬ್ಬರೂ ತಮ್ಮ ಅಂತರಂಗವನ್ನು ಹಂಚಿಕೊಳ್ಳುವಷ್ಟು ಆಪ್ತರಾಗಿದ್ದರು. ನಂತರದ್ದು ಗೊತ್ತೇ ಇದೆ.
 

ಪ್ರಿನ್ಸ್‌ ಫೇವರೇಟ್ ಸಮಂತಾನಾ, ರಶ್ಮಿಕಾನಾ?

 

ಮದುವೆಯ ನಂತರ ಜಯಾ ಸಿನಿಮಾ ರಂಗ ಪೂರ್ತಿಯಾಗಿ ಬಿಟ್ಟೇ ಬಿಟ್ಟರು. ಒಂದೇ ಥರದ ಪಾತ್ರಗಳ ಆಫರ್‌, ಕುಟುಂಬಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಅಂತ ಆಕೆ ಅಂದುಕೊಂಡದ್ದು ಇದಕ್ಕೆ ಕಾರಣ. ಈ ನಿರ್ಧಾರದಲ್ಲಿ ಅಮಿತಾಭ್‌ ಪಾತ್ರ ಏನೂ ಇಲ್ಲವಂತೆ. ನಂತರ ರೇಖಾ- ಅಮಿತಾಭ್‌ ಸಂಬಂಧದ ಕಾಂಟ್ರವರ್ಸಿಯದ್ದೇ ಇನ್ನೊಂದು ಕತೆ. ಅದರ ಬಗ್ಗೆ ಈಗಲೂ ಸಾಕಷ್ಟು ಗಾಸಿಪ್‌ ಬಾಲಿವುಡ್‌ನಲ್ಲಿದೆ. ಅದನ್ನು ಇನ್ನೊಮ್ಮೆ ನೋಡೋಣ.

 

click me!