ಬಾಲಿವುಡ್ ಇರಬಹುದು, ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಇರಬಹುದು, ಇತ್ತೀಚೆಗೆ ಇಲ್ಲಿ ಮದುವೆ, ಡೇಟಿಂಗ್‌ಗಳಿಗಿಂತ ಡಿವೋರ್ಸ್ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತವೆ. ದ್ವೇಷ, ಕಿತ್ತಾಟಗಳೇ ಇಲ್ಲದೇ ತಾರೆಯರು ಡಿವೋರ್ಸ್ ತಗೊಳ್ಳೋದರಲ್ಲಿ ನಿಜ ಇದೆಯಾ?
ಎಲ್ಲಾ ಕಡೆ ವಿಚ್ಚೇದನೆ, (Divorce) ಬೇರ್ಪಡುವಿಕೆಯದೇ ಸುದ್ದಿ. ಬಾಲಿವುಡ್, ಸೌತ್ ಇಂಡಿಯನ್ ಫಿಲಂ (Film) ಇಂಡಸ್ಟ್ರಿ ಯಾವುದೂ ಇದಕ್ಕೆ ಹೊರತಾಗಿಲ್ಲ. ತಾವು ಬೇರ್ಪಡುತ್ತಿರುವುದನ್ನು ಅನೇಕ ಸೆಲೆಬ್ರಿಟಿ ಜೋಡಿಗಳು ಎಲ್ಲರ ಎದುರು ಓಪನ್ ಆಗಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲೆಲ್ಲ ಈಗ ಮದುವೆ, ರಿಲೇಶನ್‌ಶಿಪ್ ಗಿಂತ ಡಿವೋರ್ಸ್, ಬ್ರೇಕ್‌ಅಪ್‌ಗಳದೇ ಹೊಸ ಸುದ್ದಿ. ನಿತ್ಯ ಹೊಸ ಹೊಸ ಸುದ್ದಿ ಬೇಡುವ ನೆಟಿಜನ್ಸ್ ಗೆ ಈ ಸುದ್ದಿಗಳು ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿವೆ. ಮೀಡಿಯಾಗಳೂ ಈ ವಿಚಾರವಾಗಿ ನಾನಾ ಮಗ್ಗುಲುಗಳಿಂದ ವಿಶ್ಲೇಷಣೆ ಮಾಡುತ್ತಿವೆ.
ಬಾಲಿವುಡ್‌ನಲ್ಲಿ (Bollywood) ಅಮೀರ್‌ಖಾನ್- ಕಿರಣ್ ದಂಪತಿ ವಿಚ್ಛೇದನ ಮೊದಲು ಸುದ್ದಿಯಾಗಿತ್ತು. ಆ ಬಳಿಕ ಸೌತ್ ಇಂಡಿಯನ್ ಫಿಲಂ ಇಂಡಸ್ಟ್ರಿಯಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಅವರ ಬೇರ್ಪಡುವಿಕೆ ಸುದ್ದಿ ಆಯ್ತು. ಇದೀಗ ಆ ಪಟ್ಟಿಗೆ ಧನುಷ್ ಹಾಗೂ ರಜನೀಕಾಂತ್ ಪುತ್ರಿ ಐಶ್ವರ್ಯಾ ಹೆಸರು ಸೇರ್ಪಡೆಯಾಗಿದೆ. ಈ ಎಲ್ಲರ ದಾಂಪತ್ಯ ಕೊನೆಗೊಂಡಿದ್ದು ಜಗಳದಲ್ಲಿ, ಕಿತ್ತಾಟದಲ್ಲಿ ಅಲ್ಲ ಅನ್ನೋದೇ ವಿಶೇಷ. ಮುಂದೆ ಗೆಳೆಯರಾಗಿ ಮುಂದುವರಿಯುತ್ತೇವೆ ಎಂಬ ಭರವಸೆಯೊಂದಿಗೆ ಈ ಜೋಡಿ ಬೇರ್ಪಡುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಸದ್ಯದ ಪ್ರಶ್ನೆ.
Shah Rukh Khan: ಶಾರುಖ್ ಖಾನ್‌ನ ಬುಲೆಟ್ ಪ್ರೂಫ್ ಲಿಮೋಸಿನ್‌ನಲ್ಲಿ ಬಂದ VVIP ಯಾರು ಗೊತ್ತಾ?
ಅಮೀರ್‌ಖಾನ್ (Amir Khan) - ಕಿರಣ್ ರಾವ್ (Kiran Rao)
ಅಮೀರ್‌ಖಾನ್ ಕಿರಣ್ ರಾವ್‌ಗೆ ಡಿವೋರ್ಸ್ ನೀಡಿದಾಗ ಈ ಇಬ್ಬರ ಬಗ್ಗೆ ಅನೇಕ ರೂಮರ್‌ಗಳು ಹಬ್ಬಿದವು. ಈ ಇಬ್ಬರು ಸೆಲೆಬ್ರಿಟಿಗಳು ಬೇರಾಗುವುದಕ್ಕೆ ಮುಖ್ಯ ಕಾರಣ ಅಮೀರ್‌ಖಾನ್ ಮೂರನೇ ಮದುವೆಗೆ ಪ್ಲಾನ್ ಮಾಡಿರೋದು ಅನ್ನೋದು ಮುಖ್ಯ ಸುದ್ದಿ. ಈ ಹಿಂದಿನ ಸಿನಿಮಾಗಳಲ್ಲಿ ತನ್ನ ಮಗಳ ಪಾತ್ರ ನಿರ್ವಹಿಸಿದ್ದ ನಟಿಯ ಜೊತೆಗೆ ಅಮೀರ್ ವಿವಾಹ ಆಗಲಿದ್ದಾರೆ ಎಂಬ ಸುದ್ದಿಯೂ ಇತ್ತು. ಆದರೆ ಇಂಥಾ ರೂಮರ್‌ಗಳಿಗೆ ಅಮೀರ್ ಸೊಪ್ಪು ಹಾಕದೇ ಜಾಣನಂತೆ ವರ್ತಿಸಿದರು. ಜೊತೆಗೆ ಸಾಕಷ್ಟು ಕಡೆ ಮಾಜಿ ಪತ್ನಿ ಜೊತೆಗೆ ಹತ್ತಾರು ಕಡೆಗಳಲ್ಲಿ ಕಾಣಿಸಿಕೊಂಡು ದಾಂಪತ್ಯದಿಂದ ಆಚೆ ಬಂದದ್ದು ನಮ್ಮ ಸಂಬಂಧವನ್ನು ಹಾಳು ಮಾಡಿಲ್ಲ ಎಂಬರ್ಥದ ಸಂದೇಶ ನೀಡಿದರು. ಮೊನ್ನೆ ತಾನೇ ತನ್ನ ಮಾಜಿ ಪತ್ನಿ ನಿರ್ದೇಶನದ ಚಿತ್ರವನ್ನು ತಾನೇ ನಿರ್ಮಾಣ ಮಾಡುತ್ತಿರುವುದಾಗಿ ಘೋಷಿಸಿದರು. ಹಾಗಿದ್ದರೆ ಇವರಿಬ್ಬರ ನಡುವೆ ಕಹಿಯೇ ಇಲ್ಲವೇ ಎಂಬುದು ಪ್ರಶ್ನೆ. ಕಹಿ ಇದ್ದರೂ ಅದನ್ನು ಸಾರ್ವಜನಿಕವಾಗಿ ತೋರಿಸಿಕೊಂಡು ಜನರ ಬಾಯಿಗೆ ಆಹಾರ ಆಗಬಾರದು ಅನ್ನೋ ಜಾಣತನವೇ ಈ ಎಲ್ಲದರ ಹಿಂದಿರೋದು ಅಂತ ಜಾಣರು ತೀರ್ಮಾನಕ್ಕೆ ಬಂದಿದ್ದಾರೆ.
Dhanush Announces Separation : ರಜನಿ ಮಗಳ ಜತೆಗಿನ ಬಾಂಧವ್ಯ ಅಂತ್ಯಗೊಳಿಸಿದ ಧನುಷ್
ಸಮಂತಾ (samantha) - ನಾಗಚೈತನ್ಯ (Nagachaitanya)
ಟಾಲಿವುಡ್ (Tollywood) ನಟ ನಟಿಯರಾದ ಸಮಂತಾ ಹಾಗೂ ನಾಗಚೈತನ್ಯ ಬೇರ್ಪಟ್ಟು ಕೆಲವು ತಿಂಗಳುಗಳಾಗಿವೆ. ಸಮಂತಾ ಈ ಎಲ್ಲ ಜಂಜಾಟಗಳಿಂದ ಹೊರಬಂದಂತೆ ಕಂಡರೂ ನಾಗಚೈತನ್ಯ ಹೊರಬಂದ ಹಾಗಿಲ್ಲ. ಆಕೆ ಖುಷಿಯಾಗಿದ್ದರೆ ನನೂ ಖುಷಿಯೇ ಎಂಬಂಥಾ ನಾಗ ಚೈತನ್ಯ ಸ್ಟೇಟ್‌ಮೆಂಟ್‌ಗಳು ಅವರಿನ್ನೂ ಸಮಂತಾ ಕಡೆ ಒಲವು ಹೊಂದಿರೋದಕ್ಕೆ ಸಾಕ್ಷಿಯಂತಿವೆ. ಸೋಷಿಯಲ್ ಮೀಡಿಯಾದಲ್ಲಿ (Social media) ಸಮಂತಾ, ನಾಗ ಚೈತನ್ಯ ಅವರ ಎಲ್ಲ ಪೋಸ್ಟ್ ಕಿತ್ತು ಹಾಕಿದ್ದರೆ, ನಾಗ ಚೈತನ್ಯ ಮಾತ್ರ ತಮ್ಮಿಬ್ಬರ ಹಳೇ ಫೋಟೋಗಳನ್ನು ಡಿಲೀಟ್ ಮಾಡದೇ ಉಳಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಇಬ್ಬರೂ ಒಂದೇ ರೆಕಾರ್ಡಿಂಗ್ ಸ್ಟುಡಿಯೋಗೆ ಹೋಗಿದ್ದರೂ ಪರಸ್ಪರ ಭೇಟಿ ಆಗಿಲ್ಲ. ನಾವಿಬ್ಬರೂ ಗೆಳೆಯರಾಗಿ ಮುಂದುವರಿಯುತ್ತೇವೆ ಎಂದವರು ಹೀಗ್ಯಾಕೆ ಮಾಡಿದವರು ಅನ್ನೋದು ಒಂದಿಷ್ಟು ಜನರ ಪ್ರಶ್ನೆ.
ಸದ್ಯಕ್ಕೆ ಈಗ ಧನುಷ್ (Dhanush) ಮತ್ತು ಐಶ್ವರ್ಯಾ (Aishwarya) ಬೇರ್ಪಟ್ಟಿದ್ದಾರೆ. ಇವರ ಬೇರ್ಪಡುವಿಕೆಯ ಸ್ಟೇಟ್‌ಮೆಂಟ್ ನ ಟೋನ್ ಸಹ ಅಮೀರ್, ಸಮಂತಾ ಸ್ಟೇಟ್ ಮೆಂಟ್‌ಗಳಿಗಿಂತ ಭಿನ್ನವಿಲ್ಲ. ಆದರೆ ಒಂದಿಷ್ಟು ಸಮಯದಿಂದ ಸಮಾಜದ ಕಣ್ಣಿಗಷ್ಟೇ ಒಟ್ಟಿಗಿದ್ದಂತೆ ತೋರಿಸಿಕೊಳ್ಳುತ್ತಿದ್ದ ಈ ಜೋಡಿ ಹಿಂದೆಯೇ ದೂರವಾಗಿತ್ತು ಎಂಬ ಮಾತೂ ಇದೆ. ಮಕ್ಕಳ ಕಾರಣಕ್ಕಾದರೂ ಈ ಜೋಡಿ ಸಂಪೂರ್ಣ ಬೇರ್ಪಡಬಾರದು ಅನ್ನುವ ಮಾತು ಕೆಲವು ಹಿರಿಯರಿಂದ ಕೇಳಿಬರುತ್ತಿದೆ. ಇದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ. ಆದರೆ ಆರ್ಥಿಕ ಸಬಲತೆ, ಪರಸ್ಪರ ಡಿಪೆಂಟ್ ಆಗದೇ ಇರುವುದು ಸೆಲೆಬ್ರಿಟಿಗಳ ಡಿವೋರ್ಸ್ ನಿರ್ಧಾರವನ್ನು ಬೇಗ ಗಟ್ಟಿ ಮಾಡುತ್ತಾ, ಕಹಿ ಘಟನೆಗಳಿಲ್ಲದೇ ಈ ಜೋಡಿಗಳು ದಾಂಪತ್ಯದಿಂದ ಹೊರಬರೋದು ಹೇಗೆ ಸಾಧ್ಯ ಇತ್ಯಾದಿ ಪ್ರಶ್ನೆಗಳು ಸದ್ಯ ಭಾರತೀಯ ಸಿನಿಮಾ ಇಂಟಸ್ಟ್ರಿಯಲ್ಲಿ ಓಡಾಡುತ್ತಿವೆ.
Oo Antava BTS: ಊ ಅಂಟಾವಾ ಡ್ಯಾನ್ಸ್ ಕಲಿಯೋವಾಗ ಸಮಂತಾಗೆ ನಗುವೋ ನಗು