ಮೈ ಜಾರಿತು ಪ್ರಿಯಾಂಕ ಡ್ರೆಸ್‌: ತಾಯಿ ಕೊಟ್ಟ ಹೇಳಿಕೆಗೆ ಫ್ಯಾನ್ಸ್‌ ಶಾಕ್!

By Suvarna News  |  First Published Feb 4, 2020, 10:22 AM IST

ಗ್ಯ್ರಾಮಿ 2020 ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿತ್ತು ಬಾಲಿವುಡ್ ಸುಂದರಿಯ ಉಡುಗೆ. ಟ್ರೋಲಿಗರಿಗೆ ಚಳಿ ಬಿಡಿಸಿತ್ತು ಪ್ರಿಯಾಂಕಾ ತಾಯಿ ಮಧು ಚೋಪ್ರಾ ಉತ್ತರ..
 


ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಚೋನಾಸ್‌ ಜೋಡಿ ಜನವರಿ 26ರಂದು ಲಾಸ್‌ ಏಂಜಲೀಸ್‌ನಲ್ಲಿ ನಡೆದ 'Grammy 2020'ರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಿಯಾಂಕಾ ಧರಿಸಿದ ಪ್ಲಂಚಿಂಗ್ ನೆಕ್‌ ಗೌನ್‌ ನೆರೆದವರು ಗಮನ ಸೆಳೆದಿತ್ತು. ನೆಟ್ಟಿಗರು ಈ ಡ್ರೆಸ್ ಬಗ್ಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಮಾಡಿದ್ದರು. 

ನಿಕ್ ಮದುವೆಯಾದ ಮೇಲೆ ಪ್ರಿಯಾಂಕಾ ವೇಷ ನೋಡ್ರಣ್ಣ! ಹುದುಗಿಸಿಟ್ಟ ಎಲ್ಲ ಸೌಂದರ್ಯ ಅನಾವರಣ!

Tap to resize

Latest Videos

ಅವಾರ್ಡ್‌ ಕಾರ್ಯಕ್ರಮಗಳಲ್ಲಿ ಈ ಜೋಡಿ ಕಾಣಿಸಿಕೊಳ್ಳುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುವುದು ಹೆಚ್ಚುತ್ತಿದೆ. ಇಂತಹ ಘಟನೆಗಳಿಗೆ ಪ್ರಿಯಾಂಕಾ ಗಮನ ಕೊಡದಿದ್ದರೂ, ಆಕೆಯ ತಾಯಿ ಮಧು ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

ಪಿಗ್ಗಿ ಜತೆಯಲ್ಲಿದ್ದರೆ, ಬ್ರಷ್ ಮಾಡೋದೂ ಮರೀತಾರಾ ನಿಕ್?

'ಇಂತಹ ಘಟನೆಗಳಿಂದ ನನ್ನ ಮಗಳು ಸ್ಟ್ರಾಂಗ್ ಆಗುತ್ತಾಳೆ. ಪ್ರಿಯಾಂಕಾ ಅವಳದ್ದೇ ರೀತಿಯಲ್ಲಿ ಜೀವನ ನಡೆಸುತ್ತಿದ್ದಾಳೆ. ಆದರೆ ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಅದು ಅವಳ ದೇಹ. ಆಕೆ ಇಷ್ಟ ಪಡುವ ರೀತಿಯಲ್ಲಿ ಬಟ್ಟೆ ಹಾಕುತ್ತಾಲೆ, ಬದುಕುತ್ತಾಳೆ. ಆಕೆಗೆ ಕೆಲವು ದಿನಗಳ ಹಿಂದೆ ಒಂದು ಕೋಟ್ ಕಳುಹಿಸಿದ್ದೆ, ಅದರಲ್ಲಿ 'It's my life. Whose life am I iving, yours or mine? I can do what i want, right?' ಈ ಫಿಲಾಸಫಿಯನ್ನು ಎಲ್ಲರೂ ಪಾಲಿಸಬೇಕು' ಎಂದು ತಮ್ಮ ಮಗಳನ್ನು ಡಿಫೆಂಡ್ ಮಾಡಿ ಕೊಳ್ಳುವ ಜೊತೆಗೆ ಎಲ್ಲರೂ ಈ ತತ್ವವನ್ನು ಪಾಲಿಸಬೇಕೆಂದು ಹೇಳಿದ್ದಾರೆ.

click me!