
ಚಾರ್ಲಿ, ವಿಕ್ರಾಂತ್ ರೋಣ, ಬೃಂದಾವನ, ಲವ್ ಬರ್ಡ್ಸ್, ಜಾನಿ, ಲವ್ ಮಾಕ್ಟೇಲ್, ಮತ್ತೆ ಉದ್ಭವ, ಲವ್ ಮಾಕ್ಟೇಲ್ 2, ಓ, ಮಿಸ್ಟರ್ ಬ್ಯಾಚುಲರ್, ಕೌಸಲ್ಯಾ ಸುಪ್ರಜಾ ರಾಮ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ಮಿಲನಾ ನಾಗಾರಾಜ್, ಅವರು ಇದೀಗ ಆರಾಮ್ ಅರವಿಂದ ಸ್ವಾಮಿ ಚಿತ್ರದ ಪ್ರಮೋಷನ್‌ನಲ್ಲಿ ಬಿಜಿಯಾಗಿದ್ದಾರೆ. ನಟ ಅನೀಶ್ ತೇಜೇಶ್ವರ್ ಅವರ ಜೊತೆ ನಟಿಸಿದ್ದು, ನಾಳೆ ಅಂದರೆ, ನವೆಂಬರ್ 22ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಅದೇ ಇನ್ನೊಂದೆಡೆ, ಮಗುವಿನ ಲಾಲನೆ ಪಾಲನೆಯಲ್ಲಿ ನಟಿ ಬಿಜಿಯಾಗಿದ್ದಾರೆ. ಫೆಬ್ರವರಿ 14, 2021 ರಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಮದುವೆಯಾಗಿದ್ದ ಮಿಲನಾ ಕಳೆದ ಸೆಪ್ಟೆಂಬರ್‍ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇದರ ನಡುವೆಯೇ, ನಟಿ ರ್‍ಯಾಪಿಡ್ ರಶ್ಮಿ ಶೋನಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಮಗೆ ಈ ಹಿಂದೆ ಸಿನಿಮಾದಲ್ಲಿ ನಟಿಸುವ ಅವಕಾಶ ಹೇಗೆ ಸಿಕ್ಕಿತು ಮತ್ತು ಈಗಿನವರಿಗೆ ಹೇಗೆ ಸಿಗುತ್ತಿದೆ ಎನ್ನುವ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ಇದಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿದೆ. ಹಲವಾರು ಅವಕಾಶಗಳು ನನಗೆ ಸಿಕ್ಕಿವು. ಆದರೆ ಕುತೂಹಲ ಎಂದರೆ ನಾನು ಇಂಡಸ್ಟ್ರಿಗೆ ಬಂದಾಗ, ನಾನು ಹೇಗೆ ನಟನೆ ಮಾಡಿದೆ ಎಂದು ಯಾರೂ ನೋಡಲಿಲ್ಲ, ನನ್ನಲ್ಲಿ ಏನು ಟ್ಯಾಲೆಂಟ್ ಇದೆ ಎನ್ನುವುದನ್ನೂ ಯಾರೂ ನೋಡಲಿಲ್ಲ. ನೋಡೋಕೆ ಚೆನ್ನಾಗಿದ್ದೇನೆ ಎಂದು ಅವಕಾಶ ಸಿಕ್ಕಿತು ಎಂದು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ಬ್ರೇನ್ ವಾಷ್ ಮಾಡಿ, ಮಂತ್ರ ಮಾಡ್ಸಿ ವಶ ಮಾಡಿಕೊಂಡಳು: ಅಮೃತಧಾರೆ ಅಪರ್ಣಾ ಪತಿ ಹೇಳಿದ್ದೇನು?
ಆದರೆ ಇವತ್ತು ನಮ್ಮ ಸಿನಿಮಾಗೆ ಕಾಸ್ಟ್ ಮಾಡುವಾಗ, ಯಾರೋ ಚೆನ್ನಾಗಿ ಇದ್ದಾರೆ ಎಂದು ಕಾಸ್ಟ್ ಮಾಡಲ್ಲ. ಅವತ್ತಿನ ಟೈಮ್‌ನಲ್ಲಿ ನನಗೆ ಸಿನಿಮಾ ಅವಕಾಶ ಬಂತು. ಆದರೆ ಈಗ ಬೇರೆ ಬೇರೆ ವಿಷಯಗಳನ್ನು ನೋಡುತ್ತಾರೆ. ಸೋಷಿಯಲ್ ಮೀಡಿಯಾ ರೀಚ್ ನೋಡ್ತಾರೆ, ನಟನೆ ಎಲ್ಲವನ್ನೂ ನೋಡುತ್ತಾರೆ. ಸೆಟ್‌ನಲ್ಲಿ ಯಾರೂ ಏನೂ ಹೇಳಿಕೊಡುವುದಿಲ್ಲ. ನಾನು ಕ್ರಮೇಣ ಎಲ್ಲವನ್ನೂ ಕಲಿತೆ ಎಂದಿದ್ದಾರೆ ಮಿಲನಾ. ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು 1989ರ ಏಪ್ರಿಲ್ 25ರಂದು ಹಾಸನದಲ್ಲಿ ಜನಿಸಿದರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದ ಇವರು ರಾಜ್ಯಮಟ್ಟದ ಈಜುಗಾರ್ತಿ ಕೂಡ ಹೌದು. 2013ರಲ್ಲಿ ತೆರೆಕಂಡ `ನಮ್ ದುನಿಯಾ ನಮ್ಮ ಸ್ಟೈಲ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನ ಪ್ರವೇಶಿಸಿದರು.
ಮದುಮಕ್ಕಳ ಮೆರವಣಿಗೆ ವೇಳೆ ರಸ್ತೆ ಮೇಲೆ ಹಣದ ಹೊಳೆ ಹರಿಸಿದ ಬಂಧುಗಳು! ಶಾಕಿಂಗ್ ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.