ದಕ್ಷಿಣ ಭಾರತಗ ಖ್ಯಾತ ನಟಿ, ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ ಇತ್ತೀಚಿಗೆ ನೀಡಿದ್ದ ಹೇಳಿಕೆಯೊಂದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಆ ವಿವಾದದ ಬಳಿಕ ತುಂಬ ಕಲಿತೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ದಕ್ಷಿಣ ಭಾರತಗ ಖ್ಯಾತ ನಟಿ, ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ ಇತ್ತೀಚಿಗೆ ನೀಡಿದ್ದ ಹೇಳಿಕೆಯೊಂದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಪ್ರೇಮ್ ಬ್ಯೂಟಿಯ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ತಾನಾಯಿತು ನನ್ನ ಸಿನಿಮಾವಾಯಿತು ಅಂತಿದ್ದ ನಟಿ ಧರ್ಮ, ಹತ್ಯೆಗಳ ಬಗ್ಗೆ ಮಾತನಾಡಿದ್ದು ಅಚ್ಚರಿ ಮೂಡಿಸಿತ್ತು. ಪ್ರತಿಭಾವಂತಿ ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಅಷ್ಟಕ್ಕೂ ಸಾಯಿಪಲ್ಲವಿ ಹೇಳಿದ್ದೇನು?, ಸಂದರ್ಶನವೊಂದರಲ್ಲಿ 'ಕಾಶ್ಮೀರ ಪಂಡಿತರ ಹತ್ಯೆ ಮತ್ತು ಹಸು ಕಳ್ಳ ಸಾಗಣೆ ಮಾಡಿದ ಎಂದು ಅನುಮಾನಿಸಿ ಚಾಲಕನನ್ನು ಹತ್ಯೆ ಮಾಡಿದ್ದು ಎರಡು ಒಂದೆ. ಎರಡರಲ್ಲಿ ಏನು ವ್ಯತ್ಯಾಸ ಇದೆ' ಎಂದು ಹೇಳಿದ್ದರು. ಹಿಂಸೆ ಯಾವುದೇ ರೂದಲ್ಲಿದ್ದರೂ ಅದು ಮಹಾ ಪಾಪಾ ಎಂದಿದ್ದರು. ದೊಡ್ಡ ಮಟ್ಟದ ವಿವಾದದ ಬಳಿಕ ಸಾಯಿ ಪಲ್ಲವಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆಯನ್ನು ನೀಡಿದ್ದರು. ಪರ ವಿರೋಧ ಚರ್ಚೆಯ ನಡುವೆಯೂ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿತ್ತು. ಅನೇಕರು ಸಾಯಿ ಪಲ್ಲವಿ ಪರ ಇದ್ದೀವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್ ಟ್ಯಾಕ್ ಹಾಕಿ ಬೆಂಬಲ ವ್ಯಕ್ತಪಡಿಸಿದ್ದರು.
ಇದೀಗ ಸಾಯಿ ಪಲ್ಲವಿ ಮತ್ತೊಮ್ಮೆ ಈ ಬಗ್ಗೆ ಮಾತನಾಡಿದ್ದಾರೆ. ಆ ವಿವಾದದ ಬಳಿಕ ತುಂಬ ಕಲಿತೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ಇನ್ನೊಬ್ಬರನ್ನು ಕೊಲ್ಲಬೇಡಿ ಎನ್ನುವುದು ಹೇಗೆ ಅಪರಾಧವಾಗುತ್ತದೆ ಎನ್ನುವುದು ತನಗೆ ಅರ್ಥವಾಗಿಲ್ಲ ಎಂದು ಸಾಯಿ ಪಲ್ಲವಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ಆ ದಿನ ನನಗೆ ಆಶ್ಚರ್ಯವಾಯಿತು ಯಾಕೆಂದರೆ ನಾನು ರಾಜಕೀಯ ನಿಲುವು ತೆಗೆದುಕೊಂಡಿಲ್ಲ. ದಯವಿಟ್ಟು ಒಬ್ಬರು ಇನ್ನೊಬ್ಬರು ಕೊಲ್ಲಬೇಡಿ, ಎಂದು ಹೇಳುವುದು ಹೇಗೆ ಅಪರಾಧವಾಗುತ್ತದೆ. ತೆಲುಗು ಅರ್ಥವಾಗದವರಿಂದ ತನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದು ಗಾರ್ಗಿ ಸುಂದರಿ ಹೇಳಿದರು.
ಸಾಯಿ ಪಲ್ಲವಿಯಿಂದ ಮಾಧ್ಯಮದವರು ಕಲಿಯುವುದು ಸಾಕಷ್ಟಿದೆ; ನಟ ಕಿಶೋರ್
ಇನ್ನು ಮಾತು ಮುಂದುವರೆಸಿದ ಸಾಯಿ ಪಲ್ಲವಿ, 'ನಾನು ಹೇಳಲು ಬಯಸಿದ್ದು, ಧರ್ಮದಂತಹ ವೈಯಕ್ತಿಕ ವಿಷಯದ ಮೇಲೆ ನಾವು ಜಗಳವಾಡಬಾರದು' ಎಂದು ಒತ್ತಿ ಹೇಳಿದರು.
ಯಾವುದೇ ಧರ್ಮದ ಹೆಸರಲ್ಲಿ ಹಿಂಸೆ ನಡೆದರೂ ಅದು ದೊಡ್ಡ ಪಾಪ; ಸಾಯಿ ಪಲ್ಲವಿ ಸ್ಪಷ್ಟನೆ
ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಗಾರ್ಗಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಯಿ ಪಲ್ಲವಿ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಈ ಸಿನಿಮಾ ತೆಲುಗು, ತಮಿಳು ಜೊತೆಗೆ ಕನ್ನಡದಲ್ಲೂ ರಿಲೀಸ್ ಆಗಿದೆ. ಕನ್ನಡದಲ್ಲಿ ಸ್ವತಃ ಸಾಯಿ ಪಲ್ಲವಿ ಅವರೇ ಡಬ್ ಮಾಡುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ವಿಭಿನ್ನ ಪಾತ್ರದಲ್ಲಿ ಸಾಯಿ ಪಲ್ಲವಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾಗೂ ಮೊದಲು ನ್ಯಾಚುರಲ್ ಬ್ಯೂಟಿ ವಿರಾಟ ಪರ್ವಂ ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಬಂದಿದ್ದರು.