Aryan Khan ಡ್ರಗ್ಸ್​ ಕೇಸಲ್ಲಿ ಸಿಲುಕಿದ್ದಾಗ ಅಪ್ಪ ಶಾರುಖ್​ನಿಭಾಯಿಸಿದ್ದು ಹೇಗೆ?

Published : Mar 17, 2023, 04:13 PM IST
Aryan Khan ಡ್ರಗ್ಸ್​ ಕೇಸಲ್ಲಿ ಸಿಲುಕಿದ್ದಾಗ ಅಪ್ಪ ಶಾರುಖ್​ನಿಭಾಯಿಸಿದ್ದು  ಹೇಗೆ?

ಸಾರಾಂಶ

ಮಗ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿದಾಗ ಅಪ್ಪ ಶಾರುಖ್​ ಖಾನ್​ ಅದನ್ನು ನಿಭಾಯಿಸಿದ್ದು ಹೇಗೆ?  

2021ರ ಅಂತ್ಯದಿಂದ ಭಾರಿ ಸದ್ದು ಮಾಡಿದ್ದ ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case) ಕೇಸ್​ ನೆನಪಿದೆ ತಾನೆ? ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಬಗ್ಗೆ ಚರ್ಚೆಯಾಗಿದ್ದಕ್ಕೆ ಕಾರಣ, ಅದರಲ್ಲಿ ಸಿಲುಕಿದ್ದು ನಟ ಶಾರುಖ್​ ಖಾನ್​ ಅವರ ಪುತ್ರ ಆರ್ಯನ್ ಖಾನ್​. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್​ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು.  ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್​ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್​ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್​ ಕ್ಲೀನ್​ ಚಿಟ್​ ನೀಡಿತ್ತು. ಅಂತಿಮವಾಗಿ ಅವರು ಅಕ್ಟೋಬರ್ 30 ರಂದು ತಮ್ಮ ತಂದೆಯ ಹುಟ್ಟುಹಬ್ಬದ (Birthday) ಸಮಯದಲ್ಲಿ ಜೈಲಿನಿಂದ ಹೊರಬಂದಿದ್ದರು. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶುಕ್ರವಾರ 6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್​ನಲ್ಲಿ ಒಳಗೇ ಇದ್ದರೆ, ಆರ್ಯನ್​ ಖಾನ್​ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದರು.

ಆದರೆ ಶಾರುಖ್​ ಖಾನ್​ ಅವರ ಪುತ್ರ ಸಿಲುಕಿದ್ದರಿಂದ ಈ ಪ್ರಕರಣ ಭಾರಿ ಸದ್ದು ಮಾಡಿತ್ತು. ಮಗ ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿದರೆ ಸೆಲೆಬ್ರಿಟಿಯಾಗಿರುವ ಶಾರುಖ್​ ಅವರಿಗೆ ಹೇಗೆ ಆಗಿರಬಹುದು ಎಂದು ಊಹಿಸುವುದೂ ಕಷ್ಟವೇ. ಆದರೆ ಅವರು ಆ ಸಂಕಷ್ಟದ ದಿನಗಳನ್ನು ಹೇಗೆ ನಿಭಾಯಿಸಿದರು ಎನ್ನುವುದು ಇದುವರೆಗೆ ಬಹಿರಂಗಗೊಂಡಿರಲಿಲ್ಲ. ಆದರೆ ಈ ಬಗ್ಗೆ ಈಗ ಖುದ್ದು ಶಾರುಖ್​ ಅವರೇ ಮಾತನಾಡಿದ್ದರು, ಶಾರುಖ್ ಖಾನ್ ಅವರು ತಮ್ಮ ಹಿರಿಯ ಮಗ ಆರ್ಯನ್ ಖಾನ್ ಅವರ ಡ್ರಗ್ ಪ್ರಕರಣವನ್ನು ನಿಭಾಯಿಸಿದ ರೀತಿಗಾಗಿ ಅವರ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

PATHAAN​ ಯಶಸ್ಸು ವೈಯಕ್ತಿಕ ಎಂದ ಶಾರುಖ್ ಖಾನ್ ಟ್ವೀಟ್​ನಲ್ಲಿ ಏನಿದೆ?

ಆರ್ಯನ್ ಪ್ರಕರಣದ ನಂತರ ಶಾರುಖ್​ ತುಂಬಾ  ಶಾಂತವಾಗಿದ್ದರು (Cool). ಅಷ್ಟೇ ಅಲ್ಲದೇ ಈ ಸಂದರ್ಭದಲ್ಲಿ  ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರೂ  ಪತ್ರಿಕಾಗೋಷ್ಠಿಗಳು ಮತ್ತು ಯಾವುದೇ ಕಾರ್ಯಕ್ರಮಗಳಿಗೆ ಬ್ರೇಕ್​ ಹಾಕಿದ್ದರು. ಆ ಸಂದರ್ಭ ಹೇಗಿತ್ತು ಎಂಬ ಬಗ್ಗೆ ಶಾರುಖ್​ ಅವರ ಆಪ್ತ ಸ್ನೇಹಿತ ವಿವೇಕ್ ವಾಸ್ವಾನಿ ಅವರು ವಿವರಿಸಿದ್ದಾರೆ.  ಕೆನಡಾದ ಕನೆಕ್ಟ್ ಎಫ್‌ಎಂ ರೇಡಿಯೊ ಸ್ಟೇಷನ್‌ನಿಂದ ಎಸ್‌ಆರ್‌ಕೆ ಮೌನದ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ತಾವು ಶಾಂತವಾಗಿರುವುದನ್ನು ಬಹಿರಂಗಪಡಿಸಿದ್ದಾರೆ.  ಇವರು ಇದನ್ನು ನಿಭಾಯಿಸಿದ ರೀತಿ ಹಾಗೂ ಕುಟುಂಬಸ್ಥರು ಮತ್ತು  ಆರ್ಯನ್ ಖಾನ್‌ಗಾಗಿ ಹೋರಾಡಿದ ವಕೀಲರ ತಂಡವನ್ನು ರೇಡಿಯೋ ಸ್ಟೇಷನ್​ ಶ್ಲಾಘಿಸಿದ್ದು, ಎಲ್ಲರನ್ನೂ  ಅತ್ಯಂತ ಘನತೆಯ ಸೂಪರ್‌ಸ್ಟಾರ್ (Superstar) ಎಂದು ಕರೆದಿದೆ.

ಇನ್ನು, ಪಠಾಣ್​ (Pathaan) ಯಶಸ್ಸಿನ ಖುಷಿಯಲ್ಲಿ ಶಾರುಖ್​ ಇದ್ದರೆ, ಅವರ ಪುತ್ರ ಆರ್ಯನ್ ಖಾನ್  ತಂದೆಯ ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನೊಂದಿಗೆ ಸ್ಕ್ರಿಪ್ಟ್ ರೈಟರ್ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.  ಇದಾಗಲೇ ಬಿಕಿನಿ ತೊಟ್ಟು ಸಾಕಷ್ಟು ಫೋಟೋಶೂಟ್​ ಮಾಡಿಸಿಕೊಂಡು ಫೇಮಸ್​ ಆಗಿರೋ ಮಗಳು ಸುಹಾನಾ ಖಾನ್ (Suhana Khan) ಕೂಡ ಜೋಯಾ ಅಖ್ತರ್ ಅವರ ನಿರ್ದೇಶನದ ದಿ ಆರ್ಚೀಸ್ ಜೊತೆಗೆ ಅಗಸ್ತ್ಯ ನಂದಾ ಮತ್ತು ಖುಷಿ ಕಪೂರ್ ಅವರೊಂದಿಗೆ ಬಾಲಿವುಡ್‌ಗೆ (Bollywood) ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. 

ಬ್ಲೀಚ್‌ನಿಂದ ಎಲ್ಲಾ ಕಪ್ಪು ಜನ ಒಂದ್ ದಿನ ಬಿಳಿಯಾಗ್ತಾರೆ; ಶಾರುಖ್ ಪುತ್ರಿ ಸುಹಾನಾ ಮತ್ತೆ ಹಿಗ್ಗಾಮುಗ್ಗಾ ಟ್ರೋಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?