ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಸೀಕ್ವೆಲ್ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಮಾತನಾಡಿದ್ದಾರೆ.
ಹೊಂಬಾಳೆ ಫಿಲ್ಸ್ಮ್ ಬ್ಯಾನರ್‌ನಲ್ಲಿ ಬರ್ತಿರುವ ಸಲಾರ್ ಸಿನಿಮಾದ ಮೇಲೆ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಜಿಎಫ್ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಭಾಗ ಚಿತ್ರೀಕರಣ ಮುಗಿಸಿದೆ ಸಲಾರ್ ತಂಡ. ಅಂದಹಾಗೆ ಪ್ರಶಾಂತ್ ನೀಲ್ ಸಲಾರ್ ನಲ್ಲಿ ನಾಯಕನಾಗಿ ಟಾಲಿವುಡ್ ಸ್ಟಾರ್ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಕನ್ನಡ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಿರುವ ಪ್ರಭಾಸ್ ಸಲಾರ್ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಸಿನಿಮಾಗಳು ನೆಲಕಚ್ಚಿವೆ. ಹಾಗಾಗಿ ಈ ಸಿನಿಮಾದ ಗೆಲುವು ಪ್ರಭಾಸ್ ಅವರಿಗೆ ಅನಿರ್ವಾಯವಾಗಿದೆ. ಅದಕ್ಕೆ ತಕ್ಕಂತೆ ಸಲಾರ್ ಸಿನಿಮಾ ಮೂಡಿಬರುತ್ತಿದೆ. ಈ ನಡುವೆ ಸಲಾರ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಅದೇ ಸಲಾರ್ ಸ್ವೀಕ್ವೆಲ್. ಸದ್ಯ ಸೂಪರ್ ಹಿಟ್ ಆಗಿರುವ ಸಿನಿಮಾಗಳ ಸೀಕ್ವೆಲ್ ಕೂಡ ಸದ್ದು ಮಾಡುತ್ತಿದೆ. ಹಾಗಾಗಿ ಸಲಾರ್ ಸಿನಿಮಾದ ಸೀಕ್ವೆಲ್ ಕೂಡ ಬರ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಸಲಾರ್ ಸೀಕ್ವೆಲ್ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪಿಟಿಐ ಜೊತೆ ಮಾತನಾಡಿದ ವಿಜಯ್ ಕಿರಗಂದೂರು ಅವರು ಹೊಂಬಾಳೆ ಫಿಲ್ಮ್ಸ್‌ನ ಮುಂದಿನ ಯೋಜನೆ ಮತ್ತು 5 ವರ್ಷಗಳ ಪ್ಲಾನ್ ಬಗ್ಗೆ ವಿವರಿಸಿದರು. ಅದೇ ವೇಳೆ ಸಲಾರ್ ಸೀಕ್ವೆಲ್ ಬಗ್ಗೆಯೂ ಬಹಿರಂಗ ಪಡಿಸಿದರು. 'ಸದ್ಯ ನಾವುಆ ಬಗ್ಗೆ ಯೋಚಿಸುತ್ತೇವೆ. ಸಲಾರ್ ಸೀಕ್ವೆಲ್ ಮಾಡಲು ನಾವು ಕೂಡ ಮುಕ್ತರಾಗಿದ್ದೇವೆ. ಆದರೆ ಸಿನಿಮಾದ ಶೂಟಿಂಗ್ ಮುಗಿದು ಕೊನೆಗೆ ವೀಕ್ಷಿಸಿದ ಬಳಿಕ ಆ ಬಗ್ಗೆ ನಿರ್ಧರಿಸುತ್ತೇವೆ. ಕೆಜಿಎಫ್ 3 ಮತ್ತು ಕಾಂತಾರ ಪ್ರಾಂಚೈಸಿ ಕೂಡ ಮುಂದುವರೆಯುವ ಸಾಧ್ಯತೆ ಇದೆ. ಪ್ರಶಾಂತ್ ನೀಲ್ ಸಲಾರ್ ಮುಗಿಸಿದ ಬಳಿಕ ಸಲಾರ್ ಸೀಕ್ವೆಲ್ ಬಗ್ಗೆ ಚರ್ಚಿಸುತ್ತೇವೆ' ಎಂದು ಹೇಳಿದರು.
ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ಬ್ಲಾಕ್‌ಬಸ್ಟರ್ ಹಿಟ್ 'ಕಾಂತಾರ' ನಟ; ಯಾರು?
ಸಲಾರ್ ಶೂಟಿಂಗ್ ಬಗ್ಗೆ ಅಪ್ ಡೇಟ್ ನೀಡಿದ ನಿರ್ಮಾಪಕರು, '85 ಪರ್ಸೆಂಟ್ ಶೂಟಿಂಗ್ ಮುಗಿದಿದೆ. ಜನವರಿ ವೇಳೆಗೆ ಉಳಿದ ಚಿತ್ರೀಕರಣವನ್ನು ಪೂರ್ಣ ಗೊಳಿಸಲಿದೆ. ವಿಎಫ್‌ಎಕ್ಸ್ ಕೆಲಸಕ್ಕಾಗಿ ಆರು ತಿಂಗಳು ಬೇಕು. ಸೆಪ್ಟೆಂಬರ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು' ಎಂದು ಸಲಾರ್ ಪೋಸ್ಟ್ ಪ್ರೊಡಕ್ಷನ್ ಕೆಲಸದ ಬಗ್ಗೆಯೂ ಮಾಹಿತಿ ಹಂಚಿಕೊಂಡರು.
Salaar ಕೆಲಸ ಸರಿಯಾಗಿ ಮಾಡಿದರೆ ಪ್ರಕೃತಿ ಕೈ ಹಿಡಿಯುತ್ತದೆ: ಪ್ರಮೋದ್
ಸಲಾರ್ ಬಗ್ಗೆ
ಸಲಾರ್ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಕೂಡ ನಟಿಸುತ್ತಿದ್ದಾರೆ. ತೆಲುಗು ಸ್ಟಾರ್ ಪ್ರಭಾಸ್ ಜೊತೆ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಕೂಡ ಇರುವುದು ಸಲಾರ್ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಇವರಿಬ್ಬರ ಜೊತೆ ಮತ್ತೋರ್ವ ಖ್ಯಾತ ನಟ ಜಗಪತಿ ಬಾಬು ಕೂಡ ನಟಿಸುತ್ತಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.