ದುಲ್ಕರ್ ಸಲ್ಮಾನ್ -ಅಮರ್ ಸೂಫಿಯಾ 11ನೇ ವಿವಾಹ ವಾರ್ಷಿಕೋತ್ಸವ. ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡ ಸಾಲುಗಳು ವೈರಲ್....
ಮಾಲಿವುಡ್ ಹ್ಯಾಂಡ್ಸಮ್ ದುಲ್ಕರ್ ಸಲ್ಮಾನ್ 11ನೇ ವಿವಾಹ ವಾರ್ಷಿಕೋತ್ಸವ ದಿನ ಇನ್‌ಸ್ಟಾಗ್ರಾಂನಲ್ಲಿ ಪತ್ನಿ ಅಮರ್ ಸೂಫಿಯಾ ಸ್ವೀಟ್ ರೀತಿಯಲ್ಲಿ ವಿಶ್ ಮಾಡಿದ್ದಾರೆ. ನನಗೆ ವಯಸ್ಸಾಗುತ್ತಿದೆ ಎಂದು ಗೊತ್ತಾಗಲಿಲ್ಲ, ಮಗಳಿಗೆ 5 ವರ್ಷವಾಗಿ ಆಗಲೇ ಸ್ಕೂಲ್‌ಗೆ ಹೋಗುತ್ತಿದ್ದಾಳೆ ಖುಷಿ ವಿಚಾರ ಅಂದ್ರೆ ಮನೆ ಬಂತ್ತು ಎಂದು ದುಲ್ಕರ್ ಪೋಸ್ಟ್‌ನಲ್ಲಿ ಲೈಫ್ ಅಪ್ಡೇಟ್ ಕೊಟ್ಟಿದ್ದಾರೆ. ಸ್ಟಾರ್ ನಟ ಮಮ್ಮುಟ್ಟಿ ಪುತ್ರನೇ ದುಲ್ಕರ್ ಸಲ್ಮಾನ್....
ದುಲ್ಕರ್ ಪೋಸ್ಟ್:
'ತುಂಬಾ ತಡವಾಗಿ ಪೋಸ್ಟ್ ಮಾಡುತ್ತಿರುವೆ. ಆದರೆ ಇಂದು ಎಷ್ಟು ಕ್ರೇಜಿಯಾಗಿದ್ದ ದಿನ ಎಂದು ಗೊತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಲ್ಲ ಅಂದ್ರೆ ಇಂದು ನಮ್ಮ ವಿವಾಹ ವಾರ್ಷಿಕೋತ್ಸವ ಅಲ್ವಾ? ಹ್ಯಾಪಿ 11 ವರ್ಷಗಳು ಆಮ್. ಸಮಯ ಹೇಗೆ ಹೋಯ್ತು ಅನ್ನೋದೇ ನನಗೆ ಗೊತ್ತಿಲ್ಲ. ನನ್ನ ಕೂದಲು ಹೇಗೆ ಬಿಳಿ ಆಯ್ತು ಗೊತ್ತಿಲ್ಲ. ನೀನು ಯಾವಾಗ ಸ್ಕೂಲ್ ಮಾಮ್ ಗ್ರೂಪ್ ಸೇರಿಕೊಂಡೆ ಗೊತ್ತಿಲ್ಲ. ಅದಲ್ಲದೆ ನಾವು ಹೊಸ ಮನೆ ಖರೀದಿಸಿದ್ದೀವಿ. ಈ ಹಾದಿಯನ್ನು ನೆನಪಿಸಿಕೊಂಡರೆ ಒಂದೊಳ್ಳೆ ಅದ್ಭುತ ಕಥೆಯಾಗುತ್ತದೆ. ಈಗ ನಾನು ನಮ್ಮ ಸ್ಟೋರಿನ ಬರೆಯುತ್ತಿರುವೆ. ಪ್ರತಿ ವರ್ಷವೂ ವಿಶ್ ಮಾಡುವ ಪೋಸ್ಟ್ ತಡವಾಗುತ್ತದೆ' ಎಂದು ದುಲ್ಕರ್ ಬರೆದುಕೊಂಡಿದ್ದಾರೆ.
ನಟಿ ಕಾಜಲ್ ಅಗ್ರವಾಲ್ , ಕಲ್ಯಾಣಿ ಪ್ರಿಯದರ್ಶಿನಿ, ಆದಿತಿ ರಾವ್, ದಯಾನ ಪೆಂಟಿ, ಮೃನಾಲ್ ಸೇರಿದಂತೆ ಅನೇಕರು ಕಾಮೆಂಟ್‌ನಲ್ಲಿ ವಿಶ್ ಮಾಡಿದ್ದಾರೆ.
ಡೆಕ್ಕನ್ ಕ್ರಾನಿಕಲ್ ಸಂದರ್ಶನದಲ್ಲಿ ತಮ್ಮ ಪ್ರೀತಿ ಮತ್ತು ಮದುವೆ ಬಗ್ಗೆ ಮಾತನಾಡಿದ್ದರು. 'ನಮ್ಮದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ನನ್ನ ವಿದ್ಯಾಭ್ಯಾಸ ಮುಗಿಸಿ ಯುಎಸ್‌ನಿಂದ ನಾನು ಭಾರತಕ್ಕೆ ಹಿಂತಿರುಗಿ ಬಂದಾಗ ನನ್ನ ಪೋಷಕರು ನನಗೆ ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದರು. ನನ್ನ ಸ್ನೇಹಿತರು ಮತ್ತು ಕುಟುಂಬಸ್ತರು ನನಗಿಂತ 5 ವರ್ಷ ಕಿರಿಯ ಜ್ಯೂನಿಯರ್ ಹೆಸರು ಸಲಹೆ ಕೊಟ್ಟರು. ಅವರ ಬಯೋಡೆಟಾ ಜೊತೆ ನನ್ನ ಬಯೋಡೆಟಾ ಮ್ಯಾಚ್ ಮಾಡಲು ಸ್ನೇಹಿತರು ಮುಂದಾದ್ದರು. ವಿಧಿ ಹೇಗೆ ಅಂದ್ರೆ ನಾವೆಲ್ಲ ಸ್ನೇಹಿತರು ಭೇಟಿ ಮಾಡಿದ್ದಾಗ ನಾನು ಆ ಹುಡುಗಿಯನ್ನು ಪದೇ ಪದೇ ನೋಡುತ್ತಿದ್ದೆ. ನಾನು ಸಿನಿಮಾ ನೋಡಲು ಒಬ್ಬನೇ ಹೋಗಿದ್ದಾಗ ಅಲ್ಲಿಯೂ ಆಕೆ ಅದೇ ಶೋ ಅದೇ ಥಿಯೇಟರ್‌ನಲ್ಲಿ ಅದೇ ಸಿನಿಮಾ ನೋಡಲು ಬಂದಿರುತ್ತಿದ್ದಳು. ಪದೇ ಪದೇ ಈ ರೀತಿ ಆಗುತ್ತಿದ್ದ ಕಾರಣ ನಾನು ಆಕೆನ ಮದುವೆ ಆಗುವುದು ದೇವರ ಸೂಚನೆ ಎಂದು ಭಾವಿಸಿ ಮದುವೆಯಾಗಲು ನಿರ್ಧರಿಸಿದೆ. ಒಂದು ಸಲ ಕಾಫಿ ಡೇಟ್‌ಗೆ ಕರೆದುಕೊಂಡು ಹೋಗುವ ಧೈರ್ಯ ಮಾಡಿದೆ. ಈ ವಿಚಾರದ ಬಗ್ಗೆ ಮನೆಯಲ್ಲಿ ತಿಳಿಸಿದ್ದೆ. ಎರಡು ಕುಟುಂಬದವರು ಭೇಟಿ ಮಾಡಿ ಮಾತನಾಡಿದ್ದರು. ಹೀಗಾಗಿ ನಮ್ಮದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್'ಎಂದು ದುಲ್ಕರ್ ಮಾತನಾಡಿದ್ದರು.
2.45 ಕೋಟಿ ಬೆಲೆಯ ಮರ್ಸಿಡಿಸ್ - ಎಎಂಜಿ ಜಿ63 ಕಾರು ಖರೀದಿಸಿದ ದುಲ್ಕರ್ ಸಲ್ಮಾನ್!
ಸ್ಟಾರ್ ಕಿಡ್ ಎಂದು ಒತ್ತಡ:
'ನಾನು ಇದನ್ನೆಲ್ಲ ಮಾಡುತ್ತೇನೆಯೇ ಎಂದು ಅಂದುಕೊಂಡಿರಲಿಲ್ಲ. ನಾನು ಚಿತ್ರರಂಗದಲ್ಲಿ ಬದುಕುಳಿಯುತ್ತೇನೆಯೇ ಜನರು ನನ್ನನ್ನು ಸ್ವೀಕರಿಸುತ್ತಾರೆಯೇ ಎಂದು ನನಗೆ ತಿಳಿದಿರಲಿಲ್ಲ. ನಾನು ಇಂಡಸ್ಟ್ರಿಗೆ ಬರುವಾಗ ಸಾಕಷ್ಟು ಸಾಕಷ್ಟು ಆತಂಕವಿತ್ತು. 20ನೇ ವರ್ಷಕ್ಕೆ ಎಲ್ಲಾ ಭಯ ಮತ್ತು ಅಭದ್ರತೆ ಹೊಂದಿರುತ್ತೀರಿ. ನಾನು ನನ್ನ ತಂದೆಯ ದಾರಿಯನ್ನೇ ಪಾಲಿಸುತ್ತಿದ್ದೆ. ನನ್ನನ್ನು ಮರೆತುಬಿಡಿ. ಅವರನ್ನು ಚಾಲೆಂಜ್ ಮಾಡಲು ಅಥವಾ ರಿಪ್ಲೇಸ್ ಮಾಡಬಹುದು ಎಂದು ನಾನು ಭಾವಿಸಿಲ್ಲ.ನಾನು ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದೆ. ನಾನು ಅವರಂತೆ ತುಂಬಾ ಒಳ್ಳಯವನಾಗಿರಬೇಕು ಎಂದಲ್ಲ. ಆದರೆ ನಾನು ಅವರನ್ನು ಯಾವುದೇ ರೀತಿಯಲ್ಲಿ ಮುಜುಗರಕ್ಕೀಡು ಮಾಡಲು ಅಥವಾ ಆ ಪರಂಪರೆಯನ್ನು ಹಾಳು ಮಾಡಲು ಬಯಸಲಿಲ್ಲ. ಹಾಗಾಗಿ ನಾನು ನನ್ನ ಮೇಲೆ ಸಾಕಷ್ಟು ಒತ್ತಡವನ್ನು ಹಾಕುತ್ತಿದ್ದೆ. ನಾನು ಬಹಳಷ್ಟು ಒತ್ತಡವನ್ನು ಹಾಕುತ್ತಿದ್ದೆ. ನಾನು ಬಹಳಷ್ಟು ವರ್ಷಗಳನ್ನು ಹಾಗೆ ಕಳೆದಿದ್ದೇನೆ. ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತೇನೆ ಎಂದು ಹೇಳಿದ್ದಾರೆ.